ವಿರೋಧಿಗಳ ಟೀಕೆಗೆ ಮತದಾರ ತಕ್ಕ ಉತ್ತರ ನೀಡಿದ್ದಾನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಗ್ಯಾರಂಟಿಗಳ ಬಗ್ಗೆ ವಿರೋಧಿಗಳು ಪದೇ ಪದೇ ಟೀಕೆ ಮಾಡ್ತಾ ಇದ್ರೂ. ಈ ಎಲ್ಲಾ ಟೀಕೆಗಳಿಗೂ ಮತದಾರರು ತಕ್ಕ ಉತ್ತರ ನೀಡಿದ್ದಾರೆ‌. ಅದು ನಮಗೆ ಆಶೀರ್ವಾದ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ 

Minister Lakshmi Hebbalkar React to Congress Won Karnataka Byelection grg

ರಾಮನಗರ(ನ.24): ಜನರ ಆಶೀರ್ವಾದದಿಂದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ವಿರೋಧಿಗಳ ಟೀಕೆಗೆ ಜನ ಉತ್ತರ ಕೊಟ್ಟಿದ್ದಾರೆ. ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಗ್ಯಾರಂಟಿಗಳನ್ನು ನೀಡಿದೆ. ಮಹಿಳೆಯರು ಕೂಡ ಗ್ಯಾರಂಟಿಗಳ ಪ್ರಯೋಜನವನ್ನ ಪಡೆದುಕೊಂಡಿದ್ದಾರೆ. ಗ್ಯಾರಂಟಿಯಿಂದ ಅನುಕೂಲ ಆಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಇಂದು(ಭಾನುವಾರ) ಜಿಲ್ಲೆಯ ಕನಕಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು,  ಗ್ಯಾರಂಟಿಗಳ ಬಗ್ಗೆ ವಿರೋಧಿಗಳು ಪದೇ ಪದೇ ಟೀಕೆ ಮಾಡ್ತಾ ಇದ್ರೂ. ಈ ಎಲ್ಲಾ ಟೀಕೆಗಳಿಗೂ ಮತದಾರರು ತಕ್ಕ ಉತ್ತರ ನೀಡಿದ್ದಾರೆ‌. ಅದು ನಮಗೆ ಆಶೀರ್ವಾದ ಎಂದು ಹೇಳಿದ್ದಾರೆ. 

ಮೂರೂ ಕ್ಷೇತ್ರ ಸೋತು ಮೈತ್ರಿಕೂಟಕ್ಕೆ ಆಘಾತ: ಜೆಡಿಎಸ್‌, ಬಿಜೆಪಿಗೆ ಇದ್ದ ಅತಿಯಾದ ಭರವಸೆ ಹುಸಿ

ಬಿಜೆಪಿಯವರು ವಿನ್ ಡಿಕ್ ಪಾಲಿಟಿಕ್ಸ್ ಮಾಡ್ತಿದ್ರು, ಏನು ಇಲ್ಲ ಅಂದ್ರೂ ಆರೋಪ‌ ಮಾಡೋದು, ಹಗರಣ ಇದೆ ಅಂತಾ ಎತ್ತಿ ತೋರಿಸೋದು. ಅದಕ್ಕೆಲ್ಲಾ ತಕ್ಕ ಶಾಸ್ತಿ, ತಕ್ಕ ಉತ್ತರ ನೀಡಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. 

ಚನ್ನಪಟ್ಟಣದಲ್ಲಿ ಬಿಜೆಪಿ ಸಪೋರ್ಟ್ ಮಾಡ್ಲಿಲ್ಲ ಅಂದಿದ್ರೆ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಲು ಆಗ್ತಿತ್ತಾ?: ಡಿಕೆಶಿ

ಚನ್ನಪಟ್ಟಣ: ಪರೋಕ್ಷವಾಗಿ ಕಾಂಗ್ರೆಸ್ ಗೆಲುವಿಗೆ ಜೆಡಿಎಸ್, ಬಿಜೆಪಿ ಅವರೂ ಸಪೋರ್ಟ್ ಮಾಡಿದ್ದಾರೆ. ಮಾಜಿ ಸಚಿವ ಅಶ್ವಥ್ ನಾರಾಯಣ್ ಏನ್ ಹೇಳಿದ್ರು. ಯೋಗೇಶ್ವರ್ ಗೆಲ್ತಾರೆ ಅಂತ ಗೊತ್ತಿತ್ತು ಅಂತ ಅಶ್ವಥ್ ನಾರಾಯಣ್ ಹೇಳಿಲ್ವಾ?. ಇದರ ಅರ್ಥ ಏನು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಇಂದು(ಭಾನುವಾರ) ರಾಮನಗರ ಜಿಲ್ಲೆಯ ಕನಕಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ನಮ್ಮ ಮೇಲೆ ಈಗ ಸಾಲ ಇದೆ‌. ಕ್ಷೇತ್ರದ ಜನ ನಮ್ಮ ಪರವಾಗಿ ಇದ್ದಾರೆ. ಈ ಗೆಲುವಿನ ಕ್ರೆಡಿಟ್ ಅಪೂರ್ವ ಸಹೋದರಿಗೆ ಸಲ್ಲಬೇಕಾಗಿಲ್ಲ‌ ಎಂದು ಹೇಳುವ ಮೂಲಕ ಅಪೂರ್ವ ಸಹೋದರು ಎಂದಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಡಿಕೆಗೆ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ. 

ಕ್ಷೇತ್ರ ಖಾಲಿ ಆದಾಗಿಂದ ಸಾಕಷ್ಟು ಪ್ರವಾಸ ಮಾಡಿದ್ವಿ. ಕ್ಷೇತ್ರದ ಜನರಿಗೆ ಏನು ಮಾತು ಕೊಟ್ಟಿದ್ವೊ ಅದನ್ನ ಮೊದಲು ಇಂಪ್ಲಿಮೆಂಟ್ ಮಾಡಬೇಕು. ನಾನು ಯೋಗೇಶ್ವರ್ ಕೂತು ಚರ್ಚೆ ಮಾಡಿ ಇದಕ್ಕೆಲ್ಲ ಚಾಲನೆ ಕೊಡ್ತೇವೆ. ನಮಗೆ ಎಲ್ಲಾ ಪಾರ್ಟಿಯವ್ರೂ ಸಹಾಯ ಮಾಡಿದ್ದಾರೆ. ಕಾಂಗ್ರೆಸ್ ಗೆ ಇದ್ದಿದ್ದು ಕೇವಲ 16 ಸಾವಿರ ವೋಟ್‌, ಈಗ ಜಾಸ್ತಿ ಆಗಿದೆ. ಬಿಜೆಪಿ ಅವ್ರೂ ಸಪೋರ್ಟ್ ಮಾಡಿದ್ದಾರೆ‌. ಬಿಜೆಪಿಯವ್ರು ನಮ್ಮ ಜೊತೆ ಬಂದು ನಿಂತುಕೊಳ್ಳದೇ ಹೋಗಿದ್ರೆ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕೆಲಸ ಮಾಡದೇ ಹೋಗಿದ್ರೆ ಇಷ್ಟು ಮತ ನಮಗೆ ಬರುತ್ತಾ ಇರಲಿಲ್ಲ. ನಾನು ಅವರೆಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಡಿಕೆಶಿ ಅಚ್ಚರಿ ಹೇಳಿಕೆ ನೀಡಿದ್ದಾರೆ. 

ಗೆಲುವಿನ ಕ್ರೆಡಿಟ್ ಅಪೂರ್ವ ಸಹೋದರಿಗಂತೂ ಅಲ್ಲ. ನಮ್ಮೆಲ್ಲ ನಾಯಕರು ಮತದಾರಿಗೆ ಸಲ್ಲಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಮಾಜಿ ಸಿಎಂ ಪುತ್ರರಿಗೆ ಆಘಾತಕಾರಿ ಸೋಲು: ಅವಿರತ ಶ್ರಮ ವ್ಯರ್ಥ

ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಎಂಬ ಕಾರ್ಯಕರ್ತರ ಕೋರಿಕೆ‌ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಕೆಶಿ, ಅವ್ರು ಮುಖ್ಯಮಂತ್ರಿ ಆಗಬೇಕು ಇವ್ರು ಮುಖ್ಯಮಂತ್ರಿ ಆಗಬೇಕು ಎಂಬುದ ಗೌಣ. ಅವ್ರು ನಮ್ಮ ಮೇಲೆ ವಿಶ್ವಾಸ ಇಟ್ಟು ಮತ ಹಾಕಿದ್ದಾರೆ. ನಾವು ಏನು ಗ್ಯಾರಂಟಿ ಮಾತು ಕೊಟ್ಟಿದ್ದೀವಿ. ಕುಮಾರಸ್ವಾಮಿ ಜನರ ಬಗ್ಗೆ ನಂಬಿಕೆ ತೋರಿಸಲಿಲ್ಲ. ಅಭಿಮಾನ ತೋರಿಸಲಿಲ್ಲ. ಅದಕ್ಕಾಗಿ ಜನ ವೋಟ್ ಹಾಕಿಲ್ಲ. ನಾವು ಅವರಿಗೆ ಅಭಿಮಾನ ತೋರಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಸಚಿವ ಸಂಪುಟ ವಿಸ್ತರಣೆ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌ ಅವರು, ಇದೆಲ್ಲ ಸುಳ್ಳು ನನ್ನ ಪ್ರಕಾರ ಈಗ ಅದ್ಯಾವುದೂ ಇಲ್ಲ. ಆತರ ಏನಾದ್ರು ಇದ್ರೆ ಸಿಎಂಗೆ ಕೇಳಿನೋಡಿ ಎಂದು ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios