Karnataka Politics : 'ಸಿದ್ದರಾಮಯ್ಯಗೆ ಎರಡು ನಾಲಿಗೆ : ಆತನ ರಕ್ತದ ಕಣಕಣದಲ್ಲೂ ಮೋಸ ಇದೆ'
- ಸಿದ್ದರಾಮಯ್ಯ ಯಾವಾಗ ಕುಡಿತಾರೋ, ಯಾವಾಗ ಕುಡಿಯಲ್ವೊ ಗೊತ್ತಿಲ್ಲ
- ಹೆಂಡಾ ಕುಡಿದಾಗ ಒಂದು ಮಾತಾಡ್ತಾರೆ, ಕುಡಿದೇ ಇದ್ದಾಗ ಒಂದು ಮಾತಾಡ್ತಾರೆ
- ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಕೆಎಸ್ ಈಶ್ವರಪ್ಪ ತೀವ್ರ ವಾಗ್ದಾಳಿ
ಕಲಬುರಗಿ(ಡಿ.01): ಸಿದ್ದರಾಮಯ್ಯ (Siddaramaiah) ಯಾವಾಗ ಕುಡಿತಾರೋ, ಯಾವಾಗ ಕುಡಿಯಲ್ವೊ ಗೊತ್ತಿಲ್ಲ. ಹೆಂಡಾ ಕುಡಿದಾಗ ಒಂದು ಮಾತಾಡ್ತಾರೆ, ಕುಡಿದೇ ಇದ್ದಾಗ ಒಂದು ಮಾತಾಡ್ತಾರೆ. ಅವರು ಒಬ್ಬ ಮಹಾನ್ ಮೋಸಗಾರ. ಅವರ ರಕ್ತದ ಕಣಕಣದಲ್ಲಿ ಮೋಸ ಇದೆ ಎಂದು ಹೇಳುವ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಕೆಎಸ್ ಈಶ್ವರಪ್ಪ (KS Eshwaraooa) ತೀವ್ರ ವಾಗ್ದಾಳಿ ನಡೆಸಿದ್ದಾರೆ.ಕಲಬುರಗಿಯಲ್ಲಿ (Kalaburagi) ಹಿಂದುಳಿದ ವರ್ಗ ಮೋರ್ಚಾ ಕಲ್ಯಾಣ ಕರ್ನಾಟಕ (kalyana karnataka) ಪ್ರಮುಖರ ಸಮಾವೇಶದಲ್ಲಿ ಪಾಲ್ಗೊಳ್ಳಲು ಕಲಬುರಗಿಗೆ ಆಗಮಿಸಿದ್ದ ಈಶ್ವರಪ್ಪ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯರನ್ನು ಏಕ ವಚನದಲ್ಲೇ ಸಂಬೋಧಿಸಿದ ಈಶ್ವರಪ್ಪ ಅವರೊಬ್ಬ ಕುಡುಕ ಎಂದು ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ಹೆಂಡಾ ಕುಡಿದಾಗ ಒಂದು ಮಾತಾಡ್ತಾರೆ. ಹೆಂಡ ಕುಡಿದೇ ಇದ್ದಾಗ ಒಂದು ಮಾತಾಡ್ತಾರೆ ಎಂದು ಲೇವಡಿ ಮಾಡುತ್ತ ಹರಿ ಹಾಯ್ದರು.
ದೇಶದ ಪ್ರಧಾನಿ, ಇಡೀ ವಿಶ್ವವೇ ಮೆಚ್ಚಿ ಪೂಜಿಸುತ್ತಿರುವ ಪ್ರಧಾನಿ ಮೋದಿಯವರಿಗೆ (Prime Minister narendra modi) ಏಕ ವಚನದಲ್ಲಿ, ಬಿಜೆಪಿ(bjp) ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟಿಲ್ (Nalin KumarKateel) ಅವರನ್ನೊಬ್ಬ ಭಯೋತ್ಪಾದಕ ಎನ್ನುವ ಸಿದ್ದಾಮಯ್ಯ ನಾಲಿಗೆ ಮೇಲೆ ಹಿಡಿತವೇ ಇಲ್ಲದ ವ್ಯಕ್ತಿ ಎಂದು ತೀರುಗೇಟು ನೀಡಿದರು.
ಸಿದ್ದರಾಮಯ್ಯ ಒಬ್ಬ ಮಹಾನ್ ಮೋಸಗಾರ ಅವರ ರಕ್ತದ ಕಣಕಣದಲ್ಲಿ ಮೋಸ ಇದೆ. ಮೊದಲು ಜೆಡಿಎಸ್‌ಗೆ (JDS) ಮೋಸ ಮಾಡಿದ್ರು. ಆಮೇಲೆ ಶ್ರೀನಿವಾಸ್ ಪ್ರಸಾದಗೆ ಮೋಸ ಮಾಡಿದ್ದಾರೆ. ಈಗ ಕಾಂಗ್ರೆಸ್‌ಗೂ (Congress) ಮೋಸ ಮಾಡಲು ರೆಡಿ ಆಗಿದ್ದಾರೆ ಎಂದು ಆರೋಪಿಸಿದರು.
ಉಚಿತ ವ್ಯಾಕ್ಸಿನ್ (Free Vaccine), ರೇಷನ್ ಕೊಡುತ್ತಿರುವ ಮೋದಿಯವರಿಗೆ ದೇಶದ ಬಡ ಜನರೆಲ್ಲರು ಹಾಡಿ ಹೊಗಳುತ್ತಿರುವಾಗ ಸಿದ್ದರಾಮಯ್ಯ ಅಕ್ಕಿ ಕೊಟ್ಟಾವ್ನೆ, ವ್ಯಾಕ್ಸಿನ್ ಕೊಟ್ಟಾವ್ನೆ ಎಂದು ಏಕ ವಚನದಲ್ಲಿ ಮಾತನಾಡುತ್ತಾರೆ, ಮೋದಿ ವಿಶ್ವ ಮೆಚ್ಚಿದ ನಾಯಕ, ನಳಿನ ಕುಮಾರ ಕಟೀಲ್ ಒಬ್ಬ ದೇಶಭಕ್ತ, ಅಂಥವರ ಬಗ್ಗೆ ಮೋಸಗಾರ ಸಿದ್ದರಾಮಯ್ಯ ಏನು ಮಾತಾಡ್ತಾರೆ? ಮೊದಲು ತಮ್ಮ ಪಕ್ಷದಲ್ಲಿನ ಹುಳುಕು ನೋಡಿಕೊಳ್ಳಲಿ ಎಂದರು.
ಶಾಸಕ ಜಮೀರ್ ಅಹ್ಮದ್ (Zameerahmed) ಅಂಥವರನ್ನು ಸಿದ್ದಾಮಯ್ಯ ಹೊಗಳ್ತಾರೆ. ಕಟೀಲ್ ಅಂತಹ ದೇಶ ಭಕ್ತರನ್ನ ಭಯೋತ್ಪಾದಕ ಅಂತಾರೆ ಎಂದು ಏಕವಚನದಲ್ಲೆ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಬಿಜೆಪಿ (bjp) ಹೈಕಮಾಂಡ್ ಸಚಿವರ ರಹಸ್ಯ ವರದಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಈ ರಹಸ್ಯ ವರದಿ ಬಗ್ಗೆ ನನಗಂತು ಗೊತ್ತಿಲ್ಲ, ನೀವು ಸಿಐಡಿ ಡಿಪಾಟ್ರ್ಮೆಂಟ್‌ನಲ್ಲಿ ಇರಬಹುದೇನೋ, ಆರ್‌ಎಸ್‌ಎಸ್ ಮತ್ತು ಬಿಜೆಪಿಯಲ್ಲಿರುವ ಸಿಐಡಿ ಡಿಪಾಟ್ರ್ಮೆಂಟ್‌ನಲ್ಲಿ ನೀವು ಇರಬಹುದು. ಇದೆಲ್ಲ ಸುಳ್ಳು ಸುದ್ದಿ, ಹೈಕಮಾಂಡ್ ಯಾವುದೇ ರಹಸ್ಯ ವರದಿಯನ್ನು ತರಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಿರಾಣಿ ಸಿಎಂ ಆಗ್ತಾರೆ :
ಮುರುಗೇಶ್ ನಿರಾಣಿ (Murugesh Nirani) ಆದಷ್ಟು ಬೇಗ ಮುಖ್ಯಮಂತ್ರಿ ಆಗುತ್ತಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ(KS Eshwarappa) ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆ (Bagalkot) ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಇಂದು (ನ.28)ನಡೆದ ಬಿಜೆಪಿ (BJP) ಹಿಂದುಳಿದ ವರ್ಗದ ಘಟಕದ ಕಾರ್ಯಕಾರಿ ಸಭೆಯಲ್ಲಿ ಈ ಮಾತನ್ನು ಹೇಳಿದರು.
ಸಿಎಂ ರೇಸ್‌ನಲ್ಲಿರೋ ಮುರುಗೇಶ್ ನಿರಾಣಿಯ ಮನದ ಮಾತು
ಗೊತ್ತಿಲ್ಲ ಮುಂದೆ ಯಾವತ್ತೋ ಮುರುಗೇಶ್ ನಿರಾಣಿ ಮುಖ್ಯಮಂತ್ರಿ (Chief Minister) ಆಗ್ತಾರೆ. ಅವರಿಗೆ ಸಿಎಂ ಆಗೋ ಶಕ್ತಿ ಇದೆ. ಯಾವತೋ ಸಿಎಂ ಅಗೋ ಶಕ್ತಿ ಇದೆ. ಕರ್ತೃ ಶಕ್ತಿ ಇದೆ. ಇವತ್ತಲ್ಲ ನಾಳೆ ಮುಖ್ಯಮಂತ್ರಿ ಆಗ್ತಾರೆ.. ಹಾಗಂತ ನಾಳೆನೇ ಬಸವರಾಜ ಬೊಮ್ಮಾಯಿನಾ ತೆಗಿತಾರಾ ಅಂತ ಬರೀಬೇಡಿ ಎಂದು ಈಶ್ವರಪ್ಪ ಮಾಧ್ಯಮಗಳಿಗೆ ಹೇಳಿದರು.
ಇನ್ನು ಇದೇ ವೇಳೆ ಮಾತನಾಡುತ್ತ ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡ್ತಿಯೇನಪ್ಪ ಎಂದು ನಿರಾಣಿಗೆ ಈಶ್ವರಪ್ಪ ಕೇಳಿದರು. ಇದಕ್ಕೆ
ನಿರಾಣಿ ಫುಲ್ ಖುಷಿಯಾಗಿ ಓಕೆ ಗುರುತು ತೋರಿ ನಕ್ಕರು.
ಸಿಎಂ ರೇಸ್‌ನಲ್ಲಿದ್ದ ಮುರುಗೇಶ್ ನಿರಾಣಿ
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ಸುದ್ದಿ ಹರಡುತ್ತಲೇ ಬಹುತೇಕರು ಸಿಎಂ ಗದ್ದುಗೆಗೆ ಏರಲು ಹಲವರು ಅನೇಕ ಶತ ಪ್ರಯತ್ನಗಳನ್ನು ಮಾಡಿದರು. ಬಯಸದೇ ಬಂದ ಭಾಗ್ಯ ಎಂದು ಹೇಳಲು ಸಾಧ್ಯವಿಲ್ಲವಾದರೂ ಅದೃಷ್ಟ ಹಾಗೂ ಯಡಿಯೂರಪ್ಪ ಕೃಪಾಕಟಾಕ್ಷದಿಂದ ಬಸವರಾಜ ಬೊಮ್ಮಾಯಿ ರಾಜ್ಯದ ಸಿಎಂ ಆಗಿದ್ದಾರೆ.
ಆದರೆ ಸಿಎಂ ರೇಸ್‌ನಲ್ಲಿ ಪ್ರಮುಖವಾಗಿ ಸದ್ದು ಮಾಡಿದ್ದು ಬೀಳಗಿ ಶಾಸಕ ಮುರುಗೇಶ್ ನಿರಾಣಿ, ಧಾರವಾಡ ಪಶ್ಚಿಮ ಶಾಸಕ ಅರವಿಂದ್ ಬೆಲ್ಲದ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿ ಹಲವರ ಹೆಸರುಗಳು.
ಅದರಲ್ಲೂ ಒಂದು ಕಾಲದಲ್ಲಿ ಯಡಿಯೂರಪ್ಪ ಅವರ ಮಾನಸ ಪುತ್ರ ಎಂದು ಗುರುತಿಸಿಕೊಂಡಿದ್ದ ಮುರುಗೇಶ್ ನಿರಾಣಿ ಹೆಸರು ತುಸು ಹೆಚ್ಚು ಮುಂಚೂಣಿಯಲ್ಲಿತ್ತು.
ಅನೇಕ ದಿನಗಳ ಕಾಲ ದೆಹಲಿಯಲ್ಲಿ ತಂಗಿದ್ದ ಮುರುಗೇಶ್ ನಿರಾಣಿ, ಒಂದು ಮಟ್ಟಕ್ಕೆ ಹೈಕಮಾಂಡ್ ನಾಯಕರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ತಮಗೆ ಸಿಎಂ ಸ್ಥಾನ ಪಕ್ಕಾ ಮಾಡಿಕೊಂಡೇ ಬೆಂಗಳೂರಿಗೆ ಆಗಮಿಸಿದ್ದರು. ಯಡಿಯೂರಪ್ಪ ಸರ್ಕಾರದ 2 ವರ್ಷದ ಸಾಧನೆ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಅತ್ಯಂತ ಆತ್ಮವಿಶ್ವಾಸದಲ್ಲಿದ್ದರು.
ಅಷ್ಟೊತ್ತಿಗಾಗಲೇ ನಿರಾಣಿ ಮುಂದಿನ ಸಿಎಂ ಎಂದು ಹೈಕಮಾಂಡ್ ಕೂಡ ನಿರ್ಣಯ ಮಾಡಿತ್ತು. ಹೈಕಮಾಂಡ್ ವೀಕ್ಷಕರ ತಂಡವೂ ನಿರಾಣಿ ಹೆಸರೇ ಹೇಳಿದ್ದರು. ಆದರೆ ಯಡಿಯೂರಪ್ಪ ಅವರೇ ನಿರಾಣಿಗೆ ಮರ್ಮಾಘಾತ ನೀಡಿಬಿಟ್ಟರು. ನಿರಾಣಿ ಬೇಡ ಬೇರೆ ಯಾರನ್ನಾದರು ಮಾಡಿ, ಬೇಕಾದರೆ ಆರ್.ಅಶೋಕ್ ಅವರನ್ನಾದ್ರು ಮಾಡಿ ಎಂದು ಹೇಳಿಬಿಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ನಿರಾಣಿ ಸಿಎಂ ಕನಸು ನನಸಾಗಲಿಲ್ಲ.