ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ನೇಮಕ: ಆಶ್ಚರ್ಯಗೊಂಡ ಬಿಜೆಪಿ ನಾಯಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅವರನ್ನ ನೇಮಕ ಮಾಡಲಾಗಿದೆ. ಡಿಕೆಶಿ ನೇಮಕ ಮಾಡಿದ್ದರಿಂದ ಬಿಜೆಪಿ ನಾಯಕರೊಬ್ಬರು ಆಶ್ಚರ್ಯವಾಗಿದೆ ಎಂದು ಹೇಳಿದ್ದಾರೆ. 

Minister KS Eshwarappa Reacts On DK Shivakumar appointed As KPCC President

ಬೆಂಗಳೂರು (ಮಾ.11): ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಕೊನೆಗೂ ಡಿಕೆ ಶಿವಕುಮಾರ್ ಅವರನ್ನ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

"

ಇದಕ್ಕೆ ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಡಿಕೆಶಿಗೆ ಶಭಾಶಯ ತಿಳಿಸಿದ್ದಾರೆ. ಆದ್ರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅಚ್ಚರಿಯಾಗಿದೆ ಎಂದಿದ್ದಾರೆ.

ಕೊನೆಗೂ ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರ ನೇಮಕ: ಸಿದ್ದರಾಮಯ್ಯಗೆ ಮೇಲುಗೈ

ಇಂದು (ಬುಧವಾರ) ವಿಧಾನಸೌಧದಲ್ಲಿ ಮಾತನಾಡಿದ ಅವರು, ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿಗೆ ಅಧ್ಯಕ್ಷರನ್ನಾಗಿ ಕನಕಪುರ ಶಾಸಕ ಡಿಕೆ ಶಿವಕುಮಾರ್​ ಅವರನ್ನು ನೇಮಕ ಮಾಡಿರುವುದು ಆಶ್ಚರ್ಯ ತಂದಿದೆ ಎಂದು ಈಶ್ವರಪ್ಪ ಹೇಳಿದರು. 

ಡಿಕೆ ಶಿವಕುಮಾರ್​ ಈ ಹಿಂದೆ ಅಧ್ಯಕ್ಷರಾದಾಗ ಏನೆಲ್ಲಾ ಆಗಿದೆ ಎಂಬುದು ಗೊತ್ತಿದೆ. ಈಗ ಅವರು ಪಕ್ಷದ ನಾಯಕರ ವಿರೋಧದ ನಡುವೆ ಅಧ್ಯಕ್ಷರಾಗಿರುವುದು ಮತ್ತೊಮ್ಮೆ ಪಕ್ಷದ ಗುಂಪುಗಾರಿಕೆ ಹೊರಬರಲಿದೆ ಎಂದು ಭವಿಷ್ಯ ನುಡಿದರು.

ಡಿಕೆ ಶಿವಕುಮಾರ್‌ಗೆ ಕೆಪಿಸಿಸಿ ಒಲಿಯಲು ಈ ಲೆಕ್ಕಾಚಾರವೇ ಕಾರಣ..!

ಡಿಕೆ ಶಿವಕುಮಾರ್​ ಈಗಾಗಲೇ ಪಕ್ಷದಲ್ಲಿ ಹಿಡಿತ ಸಾಧಿಸಲು ಹವಣಿಸುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಇತರೆ ಗುಂಪುಗಳನ್ನು ಪಕ್ಷದಲ್ಲಿ ಮುಂದುವರೆಯಲು ಬಿಡುವುದಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ ವಿಭಜನೆಯಾಗಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

Latest Videos
Follow Us:
Download App:
  • android
  • ios