Asianet Suvarna News Asianet Suvarna News

ZP-TP Election: ಆಯೋಗದ ವರದಿ ಬಳಿಕ ಜಿಪಂ, ತಾಪಂ ಚುನಾವಣೆ: ಈಶ್ವರಪ್ಪ

*  ಒಬಿಸಿಗೆ ಮೀಸಲು ನೀಡಲೂ ಕ್ರಮ
*  ವಿಧಾನಪರಿಷತ್ತಿಗೆ ಸಚಿವ ಈಶ್ವರಪ್ಪ ಭರವಸೆ
*  ಕ್ಷೇತ್ರಗಳ ಸೀಮಾ ನಿರ್ಣಯದ ವಿರುದ್ಧ 888 ಆಕ್ಷೇಪಣೆ
 

Minister KS Eshwarappa React on ZP and TP Election in Karnataka grg
Author
First Published Mar 12, 2022, 10:14 AM IST

ಬೆಂಗಳೂರು(ಮಾ.12):  ಸೀಮಾ ನಿರ್ಣಯ ಆಯೋಗ ತನ್ನ ವರದಿಯನ್ನು ಸಲ್ಲಿಸಿದ ನಂತರ ಜಿಲ್ಲಾ ಪಂಚಾಯತಿ(Zilla Panchayat) ಹಾಗೂ ತಾಲೂಕು ಪಂಚಾಯತಿ(Taluk Panchayat) ಚುನಾವಣೆ ನಡೆಸುವ ಕುರಿತು ಸೂಕ್ತ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ(KS Eshwarappa) ಹೇಳಿದರು.

ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಸರ್ಕಾರ(Government of Karnataka) ನಿವೃತ್ತ ಐಎಎಸ್‌ ಅಧಿಕಾರಿ ಲಕ್ಷ್ಮಿನಾರಾಯಣ ಅವರ ಅಧ್ಯಕ್ಷತೆಯಲ್ಲಿ ಸೀಮಾ ನಿರ್ಣಯ ಆಯೋಗ ರಚಿಸಿದೆ. ಆ ಸಮಿತಿ ಸರ್ಕಾರಕ್ಕೆ ಸೂಕ್ತ ವರದಿಯನ್ನು ಸಲ್ಲಿಸಬೇಕಿದೆ. ವರದಿ ಸಲ್ಲಿಕೆಯಾದ ನಂತರ ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Karnataka: ನರೇಗಾದಡಿ 30 ಲಕ್ಷ ಮಹಿಳೆಯರಿಗೆ ಕೆಲಸ: ಸಚಿವ ಈಶ್ವರಪ್ಪ

ಒಬಿಸಿಗೆ ಮೀಸಲು ನೀಡಿಕೆಗೆ ಕ್ರಮ:

ಹಾಗೆಯೇ ಸುಪ್ರೀಂ ಹಿಂದುಳಿದ ವರ್ಗಗಳಿಗೆ (OBC)ಮೀಸಲಾತಿ ಇಲ್ಲದೆ ಚುನಾವಣೆ(Election) ಮಾಡಿ ಎಂದು ಹೇಳಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗದಡಿ ಚುನಾವಣೆ ಮಾಡಬೇಕು. ಇದರಿಂದ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಮುಖ್ಯಮಂತ್ರಿಯವರೊಂದಿಗೆ ಸಭೆ ನಡೆಸಿದ್ದೇವೆ. ಹಿಂದುಳಿದ ವರ್ಗದವರಿಗೆ ಅವಕಾಶ ಮಾಡಿಕೊಟ್ಟಬಳಿಕವೇ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌(BK Hariprasad) ಅವರು, ಸಿದ್ದರಾಮಯ್ಯ(Siddaramaiah) ಅವರು ಮುಖ್ಯಮಂತ್ರಿಯಾಗಿದ್ದಾಗ ನೇಮಕ ಮಾಡಿದ್ದ ಎಚ್‌.ಕಾಂತರಾಜು ಆಯೋಗದ ವರದಿಯನ್ನು ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡುವ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಕಾಂತರಾಜು ಆಯೋಗದ ವರದಿ ಬಹಿರಂಗಪಡಿಸುವಂತೆ ಹಲವು ಬಾರಿ ಕೇಳಲಾಗಿತ್ತು. ಅವರು ಇಂದು, ನಾಳೆ ಎಂದು ಮುಂದೂಡುವ ಮೂಲಕ ಸಿದ್ದರಾಮಯ್ಯ ಹಿಂದುಳಿದ ವರ್ಗಕ್ಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್‌ ಸದಸ್ಯ ಪ್ರಕಾಶ್‌ ರಾಥೋಡ್‌, ಈ ಮಾತನ್ನು ಸಚಿವ ವಾಪಸ್‌ ಪಡೆಯಬೇಕು. ಸಿದ್ದರಾಮಯ್ಯ ಅಹಿಂದ ನಾಯಕರಾಗಿದ್ದು ಹಿಂದುಳಿದ ವರ್ಗಕ್ಕೆ ಮೋಸ ಮಾಡಿದ್ದಾರೆಂದಿರುವ ಸಚಿವರ ಹೇಳಿಕೆ ಸರಿಯಲ್ಲ ಎಂದು ಕಿಡಿಕಾರಿದರು.

Harsha Murder Case: ಕೆಲವು ಗೂಂಡಾ ಮುಸ್ಲಿಂರ ವಿಕೃತಿ ಕಡಿ​ಮೆ​ಯಾ​ಗಿ​ಲ್ಲ: ಈಶ್ವ​ರಪ್ಪ

ಕ್ಷೇತ್ರಗಳ ಸೀಮಾ ನಿರ್ಣಯದ ವಿರುದ್ಧ 888 ಆಕ್ಷೇಪಣೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗವನ್ನು ರಚಿಸಲಾಗಿದ್ದು ಈ ಆಯೋಗವು ನಿಯಮಾನುಸಾರ ಪರಿಶೀಲಿಸಿ ಸರ್ಕಾರಕ್ಕೆ ಸೂಕ್ತ ವರದಿಯನ್ನು ಸಲ್ಲಿಸಲಿದೆ. ಆ ನಂತರ ವರದಿ ಪರಿಶೀಲಿಸಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುತ್ತೇವೆ. ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತ್‌ ಚುನಾವಣೆ ದಿಸೆಯಲ್ಲಿ ಸರ್ಕಾರದಿಂದ ಯಾವ ರೀತಿಯಿಂದಲೂ ವಿಳಂಬವಾಗಿಲ್ಲ ಎಂದರು.

ವಿಶ್ವಸಂಸ್ಥೆ ಬಂದ್ರೂ ಬೆಂಗ್ಳೂರನ್ನು ರಿಪೇರಿ ಮಾಡೋದು ಸಾಧ್ಯವಿಲ್ಲ

ಖುದ್ದಾಗಿ ವಿಶ್ವಸಂಸ್ಥೆಯೇ (United Nations) ಬಂದರೂ ಬೆಂಗಳೂರನ್ನು (Bengaluru) ರಿಪೇರಿ  ಮಾಡಲು ಸಾಧ್ಯವಿಲ್ಲ. ಈ ಮಹಾನಗರ ಅಷ್ಟೊಂದು ಅವ್ಯವಸ್ಥೆಯಿಂದ ಕೂಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ (Rural Development and Panchayat Raj Minister ) ಕೆ.ಎಸ್‌.ಈಶ್ವರಪ್ಪ ಹೇಳಿದರು.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ( Congress ) ಸದಸ್ಯ ಪಿ.ಆರ್‌. ರಮೇಶ್‌ ( PR Ramesh ) ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ ಎಲ್ಲೆಲ್ಲೋ ಮನೆ ನಿರ್ಮಾಣ ಆಗಿದೆ. ಅದನ್ನು ಸರಿಪಡಿಸುವ ಉದ್ದೇಶದಿಂದ ಸಂಪುಟ ಉಪ ಸಮಿತಿ ( Cabinet Sub Commite ) ರಚಿಸಲಾಗಿದೆ. ಕೊಳಚೆ ನೀರು ಕೆರೆಗಳಿಗೆ ಹೋಗದಂತೆ ಕ್ರಮಕೈಗೊಳ್ಳುತ್ತಿದ್ದು 554 ಕೆರೆಗಳ ಅಭಿವೃದ್ಧಿಗೆ ಯೋಜನಾ ವರದಿ ಸಿದ್ಧಪಡಿಸುತ್ತಿದ್ದೇವೆ ಎಂದರು.
 

Follow Us:
Download App:
  • android
  • ios