ದಾವಣಗೆರೆ, (ಜ.19):  ಧಮ್ ಇದ್ರೆ ಮುಂದಿನ ಸಿಎಂ ಎಂದು ಘೋಷಿಸಿಕೊಳ್ಳಲಿ ಎಂದು ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ಕೊಟ್ಟಿದ್ದಾರೆ.

 ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯನವರ ಮೇಲೆ ಕಂಟ್ರೋಲ್ ಇಲ್ಲ. ಸಿದ್ದರಾಮಯ್ಯರನ್ನು ಯಾರೂ ಕಂಟ್ರೋಲ್ ಮಾಡುತ್ತಿಲ್ಲ. ತಾಕತ್ತಿದ್ದರೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯಗೆ ನೋಟಿಸ್ ಕೊಡಲಿ ಎಂದು ಸವಾಲು ಹಾಕಿದರು.

ಲೆಕ್ಕ ಕೇಳಿದ ಅಮಿತ್ ಶಾಗೆ ಅಂಕಿ-ಸಂಖ್ಯೆ ಸಮೇತ ಉತ್ತರ ಕೊಟ್ಟ ಸಿದ್ದರಾಮಯ್ಯ

ಈಶ್ವರಪ್ಪ ಸಿಎಂ ಆಗಲು ಕುರುಬರ ಎಸ್ ಟಿ ಹೋರಾಟ ನಡೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಒಬ್ಬ ಮುಖ್ಯಮಂತ್ರಿ ಆಗಿದ್ದವರು ಈ ರೀತಿ ನೀಚತನಕ್ಕೆ ಇಳಿದು ಮಾತನಾಡಬಾರದು. ನಾನು ಮುಖ್ಯಮಂತ್ರಿ ಆಗುವುದನ್ನು ಬಿಜೆಪಿ ಪಕ್ಷ ನಿರ್ಧಾರ ಮಾಡುತ್ತದೆ. ನಮ್ಮ ಪಕ್ಷದಲ್ಲಿ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುವ ಸಿಸ್ಟಂ ಇಲ್ಲ ಎಂದು ತಿರಗೇಟು ಕೊಟ್ಟರು.

 ಪಾದಯಾತ್ರೆ ಮಾಡುತ್ತಿರುವುದು ಕನಕ ಗುರುಪೀಠದ ಸ್ವಾಮೀಜಿ. ನಾನು ಪಾದಯಾತ್ರೆ ಮಾಡುತ್ತಿಲ್ಲ. ಕನಿಷ್ಟ ಅರ್ಧ ಕಿಲೋಮೀಟರ್ ಆದ್ರೂ ಸಿದ್ದರಾಮಯ್ಯ ಪಾದಯಾತ್ರೆ ಮಾಡಲಿ ಎಂದು ಇದೇ ವೇಳೆ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.