Asianet Suvarna News Asianet Suvarna News

'ಡಿಕೆಶಿ ಜೈಲಿಗೆ ಕಳಿಸೋಕೆ ಕುಮಾರಸ್ವಾಮಿ ಬಿಜೆಪಿ ಜೊತೆ ಕೈ ಜೋಡಿಸಿದ್ರಾ?'

ಬಡವರಿಗೆ ಸಹಾಯ ಮಾಡಿದ್ದು ಬಿಜೆಪಿ, ಜೆಡಿಎಸ್‌ಗೆ ಕಣ್ಣು ಕುಕ್ಕುತ್ತಿರಬಹುದು. ಅವರು ಅಧಿಕಾರದಲ್ಲಿ ಇದ್ದಾಗ ಬರೀ ಲಂಚ ಹೊಡೆದು ಕಾಲ ಕಳೆದರು. ಬಡವರ, ರೈತರ ಪರ ಸರ್ಕಾರ ಇರುವುದು ಸಹಿಸಲು ಆಗುತ್ತಿಲ್ಲ. ಹೀಗಾಗಿ ನಮ್ಮ ಲೀಡರ್ ಗಳನ್ನ ಜೈಲಿಗೆ ಹಾಕುತ್ತೇವೆ ಎಂದು ಸೇಡಿನ ರಾಜಕೀಯ ಮಾಡುತ್ತಿದ್ದಾರೆ: ಕೃಷ್ಣ ಭೈರೇಗೌಡ 

Minister Krishna Byre Gowda Talks Over Former CM HD Kumaraswamy grg
Author
First Published Oct 11, 2023, 7:59 AM IST

ಚಿತ್ರದುರ್ಗ(ಅ.11):  ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳಿಸಲೆಂದೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿಕೊಂಡ್ರಾ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವ್ಯಂಗ್ಯವಾಡಿದರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಜೈಲಿಗೆ ಹೋಗುತ್ತಾರೆಂಬ ಕುಮಾರಸ್ವಾಮಿ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು. ಕುಮಾರಸ್ವಾಮಿ ಒಳಗಿನ ಸಂಚನ್ನು ಮಾಧ್ಯಮಗಳ ಮುಂದೆ ಬಯಲು ಮಾಡಿದ್ದಾರೆ. ನಾವು ಎಲ್ಲವನ್ನು ಎದುರಿಸಲು ಸಜ್ಜಾಗಿದ್ದೇವೆ. ಜನ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದರು.

ಕಾಂಗ್ರೆಸ್‌ ಸರ್ಕಾರದ 'ಕತ್ತಲೆಭಾಗ್ಯ ಗ್ಯಾರಂಟಿ ನಂಬರ್ ಆರು' ಘೋಷಣೆ ಮಾಡಿದ ಎಚ್.ಡಿ. ಕುಮಾರಸ್ವಾಮಿ!

ಜನಪರ ಆಡಳಿತ ನೀಡಲು ನಾವು ಕೆಲಸ ಮಾಡುತ್ತಿದ್ದೇವೆ. ಪ್ರಪಂಚದಲ್ಲಿ ಯಾವುದೇ ಪಕ್ಷ ಮಾಡದ ಕ್ರಾಂತಿಕಾರಿ ಗ್ಯಾರಂಟಿ ಕಾರ್ಡ್ ನೀಡಿದ್ದೇವೆ.

ಬಡವರಿಗೆ ಸಹಾಯ ಮಾಡಿದ್ದು ಬಿಜೆಪಿ, ಜೆಡಿಎಸ್‌ಗೆ ಕಣ್ಣು ಕುಕ್ಕುತ್ತಿರಬಹುದು. ಅವರು ಅಧಿಕಾರದಲ್ಲಿ ಇದ್ದಾಗ ಬರೀ ಲಂಚ ಹೊಡೆದು ಕಾಲ ಕಳೆದರು. ಬಡವರ, ರೈತರ ಪರ ಸರ್ಕಾರ ಇರುವುದು ಸಹಿಸಲು ಆಗುತ್ತಿಲ್ಲ. ಹೀಗಾಗಿ ನಮ್ಮ ಲೀಡರ್ ಗಳನ್ನ ಜೈಲಿಗೆ ಹಾಕುತ್ತೇವೆ ಎಂದು ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದ ಜನ ಎರಡೂ ಪಕ್ಷಗಳಿಗೂ ಪಾಠ ಕಲಿಸಿದ್ದಾರೆ, ಮುಂದೆಯೂ ಕಲಿಸುತ್ತಾರೆ ಎಂದು ಕೃಷ್ಣ ಭೈರೇಗೌಡ ಹೇಳಿದರು.

Follow Us:
Download App:
  • android
  • ios