ಬಿ.ಆರ್‌.ಪಾಟೀಲ ಅವರ ಬಳಿ ದಾಖಲೆ ಇವೆ ಎನ್ನುತ್ತಾರೆ. ಇದ್ದರೆ ಸಂಬಂಧಿಸಿದವರಿಗೆ ಕೊಡಲಿ. ನನ್ನ ಬಳಿಯೂ ದಾಖಲೆಗಳಿವೆ ಎಂದು ಮಾಧ್ಯಮದ ಮುಂದೆ ತೋರಿಸಿ ಎಂದು ಬಿ.ಆರ್‌.ಪಾಟೀಲ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಕೃಷ್ಣ ಬೈರೇಗೌಡ 

ವಿಜಯಪುರ(ನ.30): ಶಾಸಕ ಬಿ.ಆರ್.ಪಾಟೀಲರ ಬಳಿ ದಾಖಲೆಗಳಿದ್ದರೆ ಅವನ್ನು ಮುಖ್ಯಮಂತ್ರಿಗೆ ಕೊಡಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಬುಧವಾರ ಇಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಆರ್‌.ಪಾಟೀಲ ಅವರ ಬಳಿ ದಾಖಲೆ ಇವೆ ಎನ್ನುತ್ತಾರೆ. ಇದ್ದರೆ ಸಂಬಂಧಿಸಿದವರಿಗೆ ಕೊಡಲಿ. ನನ್ನ ಬಳಿಯೂ ದಾಖಲೆಗಳಿವೆ ಎಂದು ಮಾಧ್ಯಮದ ಮುಂದೆ ತೋರಿಸಿ ಬಿ.ಆರ್‌.ಪಾಟೀಲ ಹೇಳಿಕೆಗೆ ತಿರುಗೇಟು ನೀಡಿದರು.

ಸಚಿವರ ವಿರುದ್ಧ ಮತ್ತೆ ಶಾಸಕ ಲೆಟರ್‌ಬಾಂಬ್‌: ಸಿಎಂಗೆ ಕೈ ಶಾಸಕ ಬಿ.ಆರ್‌.ಪಾಟೀಲ್‌ ಪತ್ರ

ಸಿಎಂ ಕರೆಸಿ ಮಾತಾಡಲಿ:

ಶಾಸಕ ಯಶವಂತರಾಯಗೌಡ ಪಾಟೀಲರು ಕೂಡ ಈ ವಿಷಯಕ್ಕೆ ಸಂಬಂಧಿಸಿ ಮಾತನಾಡಿ, ನಾನು ಬಿ.ಆರ್.ಪಾಟೀಲರನ್ನು ಭೇಟಿಯಾಗಿಲ್ಲ. ಪತ್ರ ಮತ್ತು ಅವರ ರಾಜೀನಾಮೆ ವಿಷಯ ನನಗೆ ಗೊತ್ತಿಲ್ಲ. ನಾನು ಶಾಸಕಾಂಗ ಸಭೆಯಲ್ಲಿ ಅವರಿಗೆ ಬೆಂಬಲಿಸಿದ್ದೆ. ಅವರೊಬ್ಬ ಹಿರಿಯ ನಾಯಕ. ಅಂದು ಅವರು ಮಾತನಾಡಿದ್ದ ವಿಷಯಕ್ಕೆ ನನ್ನದೂ ಸೇರಿ ಅನೇಕರ ಬೆಂಬಲವಿದೆ. ಮುಖ್ಯಮಂತ್ರಿಗಳು ಅವರನ್ನು ಕರೆಸಿ ಮಾತನಾಡಬಹುದು ಎಂದು ಹೇಳಿದರು.