Asianet Suvarna News Asianet Suvarna News

ಬಿ.ಆರ್‌.ಪಾಟೀಲ ಟೀಕೆ, ದೂರು ನನ್ನ ಇಲಾಖೆಗೆ ಸಂಬಂಧಿಸಿದಲ್ಲ: ಸಚಿವ ಕೃಷ್ಣ ಭೈರೇಗೌಡ

ಸದನದಲ್ಲಿ ಪಾಟೀಲ ಅವರು ಗ್ರಾಮೀಣಾಭಿವೃದ್ಧಿ ಇಲಾಖೆ ಸಂಬಂಧಿಸಿದ ಪ್ರಶ್ನೆ ಕೇಳಿದ್ದರು. ಗ್ರಾಮೀಣ ಸಚಿವರ ಗೈರಲ್ಲಿ ಆಗ ನಾನು ಉತ್ತರ ನೀಡಿದ್ದೆ. ಅವರು ದಾಖಲೆ ಇವೆ ಎನ್ನುತ್ತಿರುವುದು ನನ್ನ ಇಲಾಖೆಗೆ ಸಂಬಂಧಿಸಿದ್ದಲ್ಲ: ಕಂದಾಯ ಸಚಿವ ಕೃಷ್ಣ ಭೈರೇಗೌಡ 

Minister Krishna Byre Gowda React to BR Patil Letter to CM grg
Author
First Published Nov 30, 2023, 10:30 PM IST

ವಿಜಯಪುರ(ನ.30):  ಶಾಸಕ ಬಿ.ಆರ್. ಪಾಟೀಲ ಅವರು ಮಾಡುತ್ತಿರುವ ಟೀಕೆ, ದೂರುಗಳು ನನ್ನ ಇಲಾಖೆಗೆ ಸಂಬಂಧಿಸಿದ್ದಲ್ಲ. ಯಾವುದೇ ತನಿಖೆ ಮಾಡಿಸಲಿ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಇಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸದನದಲ್ಲಿ ಪಾಟೀಲ ಅವರು ಗ್ರಾಮೀಣಾಭಿವೃದ್ಧಿ ಇಲಾಖೆ ಸಂಬಂಧಿಸಿದ ಪ್ರಶ್ನೆ ಕೇಳಿದ್ದರು. ಗ್ರಾಮೀಣ ಸಚಿವರ ಗೈರಲ್ಲಿ ಆಗ ನಾನು ಉತ್ತರ ನೀಡಿದ್ದೆ. ಅವರು ದಾಖಲೆ ಇವೆ ಎನ್ನುತ್ತಿರುವುದು ನನ್ನ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದಾರೆ. 

ಸಚಿವರ ವಿರುದ್ಧ ಮತ್ತೆ ಶಾಸಕ ಲೆಟರ್‌ಬಾಂಬ್‌: ಸಿಎಂಗೆ ಕೈ ಶಾಸಕ ಬಿ.ಆರ್‌.ಪಾಟೀಲ್‌ ಪತ್ರ

ಕಳೆದ ಬಾರಿಯ ಸಿದ್ದರಾಮಯ್ಯರ ಸರ್ಕಾರದಲ್ಲಿ ಲ್ಯಾಂಡ್ ಆರ್ಮಿಯಿಂದ ಕೆಲಸ ಇನ್ನೂ ಆಗದೇ ಉಳಿದಿವೆ. ಅವು ಮುಂದುವರಿಸಬೇಕು ಎಂದು ಪಾಟೀಲರು ಸದನದಲ್ಲಿ ತಕರಾರು ಎತ್ತಿದ್ದರು. ಅದಕ್ಕೆ ಗ್ರಾಮೀಣ ಇಲಾಖೆ ಸಚಿವರ ಪರವಾಗಿ ನಾನು ಉತ್ತರಿಸಿದ್ದೆ. ಪಾಟೀಲ ಅವರು ಮುಖ್ಯಮಂತ್ರಿಗೆ ಪತ್ರವೂ ಬರೆದಿದ್ದಾರೆ. ಯಾವುದೇ ತನಿಖೆ ಕೂಡ ಮಾಡಿಸಬಹುದು ಎಂದು ಹೇಳಿದರು.

Follow Us:
Download App:
  • android
  • ios