ಪ್ರಜ್ವಲ್ ರೇವಣ್ಣದು ವಿಶ್ವದಲ್ಲೇ ದೊಡ್ಡ ಲೈಂಗಿಕ ಹಗರಣ: ಸಚಿವ ಕೃಷ್ಣ ಬೈರೇಗೌಡ
ಹಾಸನ ಸಂಸದ ಹಾಗೂ ಎನ್‌ಡಿಎ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದ್ದು ಪ್ರಪಂಚದ ಇತಿಹಾಸದಲ್ಲೇ ಅತಿ ದೊಡ್ಡ ಲೈಂಗಿಕ ಹಗರಣ. ರಾಜ್ಯದ ಮಹಿಳೆಯರ ಮಾಂಗಲ್ಯ ಕಸಿದ ಎನ್‌ಡಿಎ ಅಭ್ಯರ್ಥಿ ಮೇಲೆ ಪ್ರಧಾನಿ ಮೋದಿ ಅವರ ಕ್ರಮವೇನು? ಎಂದು ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದ್ದಾರೆ.
ಬೆಂಗಳೂರು (ಏ.29): ಹಾಸನ ಸಂಸದ ಹಾಗೂ ಎನ್‌ಡಿಎ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದ್ದು ಪ್ರಪಂಚದ ಇತಿಹಾಸದಲ್ಲೇ ಅತಿ ದೊಡ್ಡ ಲೈಂಗಿಕ ಹಗರಣ. ರಾಜ್ಯದ ಮಹಿಳೆಯರ ಮಾಂಗಲ್ಯ ಕಸಿದ ಎನ್‌ಡಿಎ ಅಭ್ಯರ್ಥಿ ಮೇಲೆ ಪ್ರಧಾನಿ ಮೋದಿ ಅವರ ಕ್ರಮವೇನು? ಎಂದು ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರೇ ಏನು ಮಾಡುತ್ತೀರಿ? ನಿಮ್ಮ ಅಭ್ಯರ್ಥಿ ನಿಮ್ಮ ಕಣ್ಣ ಮುಂದೆಯೇ ಮಾಂಗಲ್ಯ ಕಿತ್ತು ಹಾಕುತ್ತಿದ್ದಾರೆ. ಎಲ್ಲಿದೆ ನಿಮ್ಮ ಇ.ಡಿ., ಐಟಿ, ಸಿಬಿಐ? ಎಷ್ಟು ಜನರ ತಾಳಿ ಕಸಿದಿದ್ದಾರೆ ಎಂಬುದನ್ನು ನೀವೇ ಹೇಳಿ ಎಂದು ಆಗ್ರಹಿಸಿದರು.
ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳುತ್ತಾರೆ. ಈಗ ದಾರಿ ತಪ್ಪಿದ್ದು ಯಾರು? ಅವರ ಮನೆಯ ಮಗನೇ ದಾರಿ ತಪ್ಪಿದ್ದಾನೆ. ಈ ಬಗ್ಗೆ ದೇಶದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಉತ್ತರ ಕೊಡಬೇಕು. ಇಷ್ಟು ದಿನ ಏನು ಮಾಡುತ್ತಿದ್ದಿರಿ ಎಂಬುದನ್ನು ತಿಳಿಸಬೇಕು ಎಂದರು.
ಕುಟುಂಬದವರು ಪ್ರೋತ್ಸಾಹಿಸಿದ್ರಾ?: ಇಷ್ಟು ದೊಡ್ಡ ಲೈಂಗಿಕ ಹಗರಣ ನಡೆದಿದ್ದರೂ ಬಿಜೆಪಿಯವರು ಖಂಡಿಸುತ್ತಿಲ್ಲ. ನೂರಾರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದಾರೆ. ಇಷ್ಟೆಲ್ಲ ಮಾಡಿದರೂ ಪ್ರಜ್ವಲ್ ಮನೆಯವರಿಗೆ ಗೊತ್ತೇ ಇಲ್ವಾ? ಅಥವಾ ಗೊತ್ತಿದ್ದರೂ ಈ ಕೃತ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ರಾ? ಅವರ ತಾಯಿ, ತಂದೆ ಇದಕ್ಕೆಲ್ಲ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಬಳ್ಳಾರಿ ಜೀನ್ಸ್‌ಗೆ ಜಾಗತಿಕ ಮಟ್ಟದಲ್ಲಿ ಸ್ಥಾನ: ಪ್ರಧಾನಿ ಮೋದಿ
ಪ್ರಜ್ವಲ್ ಕುಟುಂಬಕ್ಕೆ ಅಧಿಕಾರ ಇದ್ದರೆ ಸಾಕು. ಅಪ್ಪನಿಗೆ ಲೋಕೋಪಯೋಗಿ ಇಲಾಖೆಯೇ ಬೇಕು. ಚಿಕ್ಕಪ್ಪ, ಮಗ, ಅತ್ತೆ, ಸೊಸೆ ಎಲ್ಲರಿಗೂ ಅಧಿಕಾರ ದಾಹ. ಈ ಬಗ್ಗೆ ಸಿಬಿಐ ಸುಮೋಟೊ ಪ್ರಕರಣ ದಾಖಲಿಸಿ ವಿಸ್ತೃತ ತನಿಖೆ ನಡೆಸಬೇಕಿತ್ತು ಎಂದು ಹೇಳಿದರು.