ಕಾಂಗ್ರೆಸ್‌ ಜನರಿಗೆ ಮತ್ತೆ ಮೋಸ ಮಾಡಲು ಹೊರಟಿದೆ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

60 ವರ್ಷ ದೀರ್ಘ ಅವಧಿ ಆಡಳಿತ ನಡೆಸಿದ ರಾಷ್ಟ್ರೀಯ ಕಾಂಗ್ರೆಸ್‌ ಚುನಾವಣೆ ಪ್ರಣಾಳಿಕೆಯ ಮೂಲಕ ಚುನಾವಣೆಗೆ ಹೋಗಬೇಕಾದವರು ಗ್ಯಾರಂಟಿ ಕಾರ್ಡ್‌ ಮೂಲಕ ಚುನಾವಣೆಗೆ ಹೋಗಿದ್ದಾರೆ, ಮತ್ತೆ ಪ್ರತಿಪಕ್ಷದ ಸ್ಥಳದಲ್ಲಿ ಕೂರುವುದು ಗ್ಯಾರಂಟಿ, ಆದ್ದರಿಂದ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ: ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

Minister Kota Shrinivas Poojari Slams Congress grg

ಟಿ. ನರಸೀಪುರ(ಏ.06):  60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಜನರ ವಿಶ್ವಾಸ ಕಳೆದುಕೊಂಡು ಗ್ಯಾರಂಟಿ ಕಾರ್ಡ್‌ ಕೊಡ್ತೀವಿ ಎಂದು ಹೇಳಿ ಜನರಿಗೆ ಮತ್ತೆ ಮೋಸ ಮಾಡಲು ಹೊರಟಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ವರುಣ ವಿಧಾನಸಭಾ ಕ್ಷೇತ್ರದ ಸುತ್ತೂರು ಗ್ರಾಮದಲ್ಲಿ ಜಿಲ್ಲಾ ಮಟ್ಟದ ಓಬಿಸಿ ಮೋರ್ಚಾ ಸಮಾವೇಶವನ್ನು ಉದ್ದೇಶಿ ಅವರು ಮಾತಾಡಿದವರು.

60 ವರ್ಷ ದೀರ್ಘ ಅವಧಿ ಆಡಳಿತ ನಡೆಸಿದ ರಾಷ್ಟ್ರೀಯ ಕಾಂಗ್ರೆಸ್‌ ಚುನಾವಣೆ ಪ್ರಣಾಳಿಕೆಯ ಮೂಲಕ ಚುನಾವಣೆಗೆ ಹೋಗಬೇಕಾದವರು ಗ್ಯಾರಂಟಿ ಕಾರ್ಡ್‌ ಮೂಲಕ ಚುನಾವಣೆಗೆ ಹೋಗಿದ್ದಾರೆ, ಮತ್ತೆ ಪ್ರತಿಪಕ್ಷದ ಸ್ಥಳದಲ್ಲಿ ಕೂರುವುದು ಗ್ಯಾರಂಟಿ, ಆದ್ದರಿಂದ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ, ಮೈಸೂರು ಜಿಲ್ಲೆ ಹನ್ನೊಂದು ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

8 ರಂದೇ ಮೈಸೂರಿಗೆ ಪ್ರಧಾನಿ ಭೇಟಿ : ಬಂಡೀಪುರದಲ್ಲಿ ಸಫಾರಿ, ಬೊಮ್ಮಾಯಿ ದಂಪತಿ ಭೇಟಿ

ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ನೆ.ಲ. ನರೇಂದ್ರ ಬಾಬು ಮಾತನಾಡಿ, ಬಿಜೆಪಿ ಸರ್ಕಾರ ಸಂವಿಧಾನದ ಆಶಯದಂತೆ ತಳ ಸಮುದಾಯದವರಿಗೂ ಸಹ ರಾಜಕೀಯ ಸಮಾನತೆಯನ್ನು ನೀಡಿದೆ ಎಂದರು.

ಕುರುಬ ಸಮಾಜದ ಮುಖಂಡರಾದ ಗ್ರಾಪಂ ಸದಸ್ಯ ನಾಗರಾಜು, ಮುದ್ದಬೀರನ ಹುಂಡಿ ನಿಂಗರಾಜು, ಅಪಾರ ಮುಖಂಡರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆಯಾದರು.

ಮೈಸೂರು ಜಿಲ್ಲಾ ಅಧ್ಯಕ್ಷ ಮಂಗಳ ಸೋಮಶೇಖರ್‌, ವರುಣ ಮಂಡಲ ಅಧ್ಯಕ್ಷ ವಿಜಯಕುಮಾರ್‌, ಪ್ರಧಾನ ಕಾರ್ಯದರ್ಶಿ ರಂಗುನಾಯಕ, ಜಿಲ್ಲಾ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಪರಮೇಶ್ವರಪ್ಪ, ವರುಣ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಮಂಜು ಕುಮಾರ್‌, ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ವೆಂಕಟರಮಣ ಶೆಟ್ಟಿ, ಮೈಮುಲ… ನಿರ್ದೇಶಕ ಸದಾನಂದ್‌ ಇದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios