ಎಚ್.ಡಿ.ಕುಮಾರಸ್ವಾಮಿ ಈ ಮಟ್ಟಕ್ಕೆ ಇಳಿಬಾರದು: ಸಚಿವ‌ ರಾಜಣ್ಣ ತಿರುಗೇಟು

ಬೇಲೂರು ತಾಲೂಕಿನ ನಂದಗೊಂಡನಹಳ್ಳಿಯ ಸರ್ಕಾರಿ ಜಾಗದಲ್ಲಿ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಸಹಕಾರ ಸಚಿವ‌ ಕೆ.ಎನ್.ರಾಜಣ್ಣ ತಿರುಗೇಟು ನೀಡಿದರು. 

Minister KN Rajanna Slams On HD Kumaraswamy At Hassan gvd

ಬೇಲೂರು (ಜ.07): ಬೇಲೂರು ತಾಲೂಕಿನ ನಂದಗೊಂಡನಹಳ್ಳಿಯ ಸರ್ಕಾರಿ ಜಾಗದಲ್ಲಿ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಸಹಕಾರ ಸಚಿವ‌ ಕೆ.ಎನ್.ರಾಜಣ್ಣ ತಿರುಗೇಟು ನೀಡಿದರು. ತಾಲೂಕಿನ ಬಿಕ್ಕೋಡು ಹೋಬಳಿಯ ಮತ್ತಾವರ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಗುರುವಾರ ರಾತ್ರಿ ಕಾಡಾನೆ ದಾಳಿಯಿಂದ ಮೃತಪಟ್ಟ ವಸಂತರವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಿರಿಯ ರಾಜಕಾರಣಿ. ಆದರೂ ಈ ವಿಚಾರವಾಗಿ ಬಾಲಿಶವಾದ ಹೇಳಿಕೆ ನೀಡಿದ್ದಾರೆ. ಬೇರೆಯವರು ಯಾರೇ ಮುಖ್ಯಮಂತ್ರಿ ಆಗಲಿ ಆ ಮಟ್ಟಕ್ಕೆ ಇಳಿದು ನಡೆದುಕೊಳ್ಳಬಾರದು. ಅವರು ಸಿಎಂ ಆಗಿದ್ದಾಗ ಈ ರೀತಿಯ ಕೆಲಸ ಮಾಡಿಸುತ್ತಿದ್ದರೇನೋ... ಹಾಗಾಗಿಯೇ ಈ ಪ್ರಕರಣವನ್ನು ಬೆಂಬಲಿಸಿ ಹೀಗೆ ಹೇಳಿದ್ದಾರೆ. ಈ ಹಿಂದೆ ಇದೇ ದೇವೇಗೌಡರ ಕುಟುಂಬದವರು ಯಾವ್ಯಾವ ಸಂದರ್ಭದಲ್ಲಿ ಬೇರೆಯವರ ಬಗ್ಗೆ ಹೇಗೆ ಟೀಕೆ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ನಾವು ಹೆಚ್ಚು ಮಾತನಾಡುವುದು ಸೂಕ್ತವಲ್ಲ’ ಎಂದರು.

ಕಾಡಾನೆ ದಾಳಿ: ಕುಟುಂಬಸ್ಥರಿಗೆ ಸಚಿವ ರಾಜಣ್ಣ ಸಾಂತ್ವನ, ಭರವಸೆ

ಕನ್ನಡ ಪರ ಹೋರಾಟಗಾರರಿಗೆ ಹಿಡನ್‌ ಅಜೆಂಡಾ ಇರುತ್ತೆ: ಹೋರಾಟಗಾರರಿಗೆ ಕೆಲ ಹಿಡನ್ ಅಜೆಂಡಾ ಇರುತ್ತದೆ. ಆ ಹಿಡನ್ ಅಜೆಂಡಾ ಈಡೇರದಿದ್ದಾಗ ಹೀಗೆ (ಬೆಂಗಳೂರಿನ ಪ್ರತಿಭಟನೆ) ಹೋರಾಟ ಆಗುತ್ತದೆ ಎಂದು ಸಹಕಾರ ಸಚಿವ ರಾಜಣ್ಣ ಕನ್ನಡಪರ ಸಂಘಟನೆಗಳು ಹಾಗೂ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅದರ ಮುಖಂಡರ ಹೋರಾಟದ ಕುರಿತು ಪ್ರತಿಕ್ರಿಯಿಸಿದ್ದಾರೆ. ತಾಲೂಕಿನ ಬಿಕ್ಕೋಡು ಹೋಬಳಿಯ ಮತ್ತಾವರ ಗ್ರಾಮದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ‘ಕನ್ನಡ ಪರ ಹೋರಾಟಗಾರ ನಾರಾಯಣಗೌಡ ಬಂಧನ ವಿಚಾರದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. 

ಆದರೆ ತಮಿಳುನಾಡಿನಲ್ಲಿ ಯಾರೂ ತಮಿಳು ಪರವಾಗಿ, ಕೇರಳದಲ್ಲಿ ಮಲೆಯಾಳಂ ಪರ ಯಾವುದೇ ಹೋರಾಟ ನಡೆಸುವ ಸಂಘಟನೆಗಳು ಇಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡಕ್ಕಾಗಿ ಹೋರಾಟ ಮಾಡುವ ಹೋರಾಟಗಾರರು ಬಹಳಷ್ಟು ಜನ ಇದ್ದಾರೆ. ಹೋರಾಟಗಾರರು ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಹೋರಾಟದಿಂದ ಆಸ್ತಿ ಹಾನಿ ಆದರೆ ಕನ್ನಡಿಗರಿಗೇ ನಷ್ಟ ತಾನೆ? ನಾವೇ ಕನ್ನಡದ ಹೆಸರಿನಲ್ಲಿ ಕನ್ನಡಿಗರ ಆಸ್ತಿ ನಾಶ ಮಾಡುವುದು ಸರಿಯಲ್ಲ’ ಎಂದರು.

ಸಿದ್ದರಾಮಯ್ಯ ಸರ್ಕಾರದಿಂದ ದಲಿತ ಸಮಾಜಗಳಿಗೆ ಅನ್ಯಾಯ: ಬಿ.ವೈ.ವಿಜಯೇಂದ್ರ

‘ರಾಜ್ಯದಲ್ಲಿ ನಿನ್ನೆ, ಮೊನ್ನೆಯಿಂದ ಇಂಗ್ಲಿಷ್‌ನಲ್ಲಿ ನಾಮಫಲಕ ಇವೆಯಾ? ಹಲವುವಾರು ವರ್ಷಗಳಿಂದ ಹಾಕಿದ್ದಾರೆ. ಅವುಗಳನ್ನೆಲ್ಲ ಒಂದೇ ದಿನಕ್ಕೆ ತೆಗೆಯಲು ಆಗುತ್ತಾ? ಸಚಿವ ಸಂಪುಟದಲ್ಲಿ ನಾಮಫಲಕದಲ್ಲಿ ಕನ್ನಡಕ್ಕೆ ಶೇ.60 ರಷ್ಟು ಜಾಗ ಮೀಸಲಿರಬೇಕು ಎಂದು ತೀರ್ಮಾನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios