ಮಾದಿಗರಿಗೆ ಡಿಸಿಎಂ ಹುದ್ದೆ ಸಿಎಂಗೆ ಬಿಟ್ಟ ವಿಚಾರ: ಸಚಿವ ಮುನಿಯಪ್ಪ
ಮಾದಿಗ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂಬ ಬೇಡಿಕೆ ನನ್ನ ಗಮನಕ್ಕೂ ಇದೆ. ಆದರೆ, ಇದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದಷ್ಟೇ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು(ನ.07): ಮಾದಿಗ ಸಮುದಾಯದವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮಾದಿಗ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂಬ ಬೇಡಿಕೆ ನನ್ನ ಗಮನಕ್ಕೂ ಇದೆ. ಆದರೆ, ಇದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದಷ್ಟೇ ಪ್ರತಿಕ್ರಿಯಿಸಿದರು.
ನಮ್ಮದೇ ಸರ್ಕಾರ ಇದ್ರೂ ಮಾದಿಗ ಒಳಮೀಸಲಾತಿ ನೀಡಲಾಗುತ್ತಿಲ್ಲ:-ಕೆಎಚ್ ಮುನಿಯಪ್ಪ ಬೇಸರ
ಇನ್ನು, ಎಚ್.ಆಂಜನೇಯ ಅವರಿಗೆ ಹೈಕಮಾಂಡ್‌ನವರೇ ನಿಮ್ಮ ಕ್ಷೇತ್ರದ ರಿಪೋರ್ಟ್ ಸರಿಯಿಲ್ಲ. ನೀವು ದೊಡ್ಡ ನಾಯಕರು, ಚುನಾವಣೆ ಎದುರಿಸುವ ಬಗ್ಗೆ ಯೋಚಿಸಿ ಎಂದು ಹೇಳಿದ್ದರು. ಆದರೆ, ಚುನಾವಣೆಯಲ್ಲಿ ವ್ಯತಿರಿಕ್ತ ಫಲಿತಾಂಶ ಬಂತು. ಅವರನ್ನು ಸಚಿವ ಸ್ಥಾನದಲ್ಲಿ ನೋಡಲು ನಾನು ಬಯಸುತ್ತೇನೆ. ನಾನೇನು ಬಯಸಿ ರಾಜ್ಯ ರಾಜಕಾರಣಕ್ಕೆ ಬಂದಿಲ್ಲ. ಹೈಕಮಾಂಡ್ ಸೂಚನೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕೆಂಬ ಕಾರಣಕ್ಕೆ ಬಂದೆ ಎಂದರು.