ಬಿಜೆಪಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಕೆ.ಸುಧಾಕರ್
ಪ್ರಧಾನಿಗಳ 8 ವರ್ಷದ ಆಡಳಿತ, ಬಡವರಿಗೆ ನೀಡಿದ ಕಾರ್ಯಕ್ರಮಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ಮುಟ್ಟಿರುವ ಕಾರಣ ಬಿಜೆಪಿ ವಿಸ್ವಾಸಾರ್ಹ ಪಕ್ಷವಾಗಿ ಪರಿವರ್ತನೆಯಾಗಿದೆ ಎಂದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್.
ಚಿಕ್ಕಬಳ್ಳಾಪುರ(ಏ.06): ನಟ ಕಿಚ್ಚ ಸುದೀಪ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯ ಮೆಚ್ಚಿ ಪ್ರಚಾರ ಮಾಡಲು ಒಪ್ಪಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿಗಳ 8 ವರ್ಷದ ಆಡಳಿತ, ಬಡವರಿಗೆ ನೀಡಿದ ಕಾರ್ಯಕ್ರಮಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ಮುಟ್ಟಿರುವ ಕಾರಣ ಬಿಜೆಪಿ ವಿಸ್ವಾಸಾರ್ಹ ಪಕ್ಷವಾಗಿ ಪರಿವರ್ತನೆಯಾಗಿದೆ ಎಂದರು.
10 ವರ್ಷದಿಂದ ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವೆ: ಸಚಿವ ಸುಧಾಕರ್
ಬಿಜೆಪಿ ರಾಜಕೀಯ ಆಂದೋಲನವಾಗಿ ಉಳಿಯದೆ, ಸಾಮಾಜಿಕ ಆಂದೋಲನವಾಗಿ ಪರಿವರ್ತನೆಯಾಗಿದೆ. ಇದರಿಂದ ಪಕ್ಷದ ಮೇಲೆ ಜನರಿಗೆ ನಂಬಿಕೆ, ವಿಶ್ವಾಸ ಹೆಚ್ಚಾಗಿದೆಯೆಂದ ಸಚಿವ ಸುಧಾಕರ್, ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಜಿಲ್ಲಾಕೇಂದ್ರ ಬಿಜೆಪಿ ಪಾಲಾಗಿದ್ದು, ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಆದಷ್ಟುಶೀಘ್ರದಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸಿದರೆ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ಸಹಕಾರಿಯಾಗಲಿದೆಂದರು.
ಕಾಂಗ್ರೆಸ್ ಸುಳ್ಳು ಭರವಸೆಗಳು
ಕಾಂಗ್ರೆಸ್ ಭರವಸೆಗಳ ಸುಳ್ಳುಗಳನ್ನು ಆರಂಭಿಸಿದ್ದಾರೆ, ಪ್ರತಿ ಮಹಿಳೆಗೆ 2 ಸಾವಿರ ನೀಡುವ ಭರವಸೆ ನೀಡಿದ್ದಾರೆ. ಸಿದ್ದರಾಮಯ್ಯ 13 ಬಾರಿ ಬಜೆಟ್ ಮಂಡಿಸಿದವರು. ರಾಜ್ಯದಲ್ಲಿ 2 ಕೋಟಿ ಮಹಿಳೆಯರಿದ್ದರೆ ತಿಂಗಳಿಗೆ 4 ಸಾವಿರ ಕೋಟಿ, ವರ್ಷಕ್ಕೆ 48 ಸಾವಿರ ಕೋಟಿ ಅಗತ್ಯ. ಅಂದರೆ ಬಜೆಟ್ ನ ಒಟ್ಟು ಮೊತ್ತದಲ್ಲಿ 50 ಸಾವಿರ ಕೋಟಿ ಮಹಿಳೆಯರಿಗೆ ನೀಡಿದರೆ ರಾಜ್ಯದ ಗತಿ ಏನು ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.