Asianet Suvarna News Asianet Suvarna News

ಈಶ್ವರಪ್ಪ ಗುಂಡಿಕ್ಕಿ ಕೊಲ್ಲುವ ಹೇಳಿಕೆ ಹಿಂಪಡೆಯಲಿ: ಸಚಿವ ಎಚ್.ಕೆ.ಪಾಟೀಲ್‌ ಎಚ್ಚರಿಕೆ

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಸಂಸದ ಡಿ.ಕೆ. ಸುರೇಶ್ ಹಾಗೂ ವಿನಯ್‌ ಕುಲಕರ್ಣಿ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಈ ಹೇಳಿಕೆಯನ್ನು 24 ಗಂಟೆಯಲ್ಲಿ ಹಿಂಪಡೆಯದಿದ್ದರೆ ಸರ್ಕಾರ ತನ್ನ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್‌ ಎಚ್ಚರಿಕೆ ನೀಡಿದ್ದಾರೆ. 

Minister HK Patil Slams On KS Eshwarappa At Bengaluru gvd
Author
First Published Feb 10, 2024, 1:59 PM IST

ಬೆಂಗಳೂರು (ಫೆ.10): ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಸಂಸದ ಡಿ.ಕೆ. ಸುರೇಶ್ ಹಾಗೂ ವಿನಯ್‌ ಕುಲಕರ್ಣಿ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಈ ಹೇಳಿಕೆಯನ್ನು 24 ಗಂಟೆಯಲ್ಲಿ ಹಿಂಪಡೆಯದಿದ್ದರೆ ಸರ್ಕಾರ ತನ್ನ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್‌ ಎಚ್ಚರಿಕೆ ನೀಡಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ್ದ ಕೆ.ಎಸ್‌. ಈಶ್ವರಪ್ಪ, ವಿನಯ್‌ ಕುಲಕರ್ಣಿ, ಡಿ.ಕೆ. ಸುರೇಶ್ ದೇಶ ಇಬ್ಭಾಗದ ಮಾತನಾಡಿದ್ದಾರೆ. ದೇಶದ ಇಬ್ಭಾಗದ ಮಾತನಾಡುವವರು ಹಾಗೂ ದೇಶದ್ರೋಹಿಗಳನ್ನು ಗುಂಡಿಟ್ಟಿ ಕೊಲ್ಲಬೇಕು ಎಂದು ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಚ್‌.ಕೆ. ಪಾಟೀಲ್‌, ಈಶ್ವರಪ್ಪ ಹೇಳಿಕೆ ಖಂಡನೀಯ. ಅನಗತ್ಯ ಹೇಳಿಕೆಗಳ ಮೂಲಕ ಹೀರೋ ಆಗಲು ಹೊರಟಿದ್ದಾರೆ. ನಲವತ್ತು ವರ್ಷಗಳ ರಾಜಕೀಯ ಅನುಭವ ಇರುವ ಅವರಿಗೆ ಈ ಹೇಳಿಕೆ ಶೋಭೆ ತರುವುದಿಲ್ಲ. ಕೂಡಲೇ ಅವರು ಹೇಳಿಕೆಯನ್ನು ಹಿಂಪಡೆಯಬೇಕು. 24 ಗಂಟೆಗಳ ಒಳಗಾಗಿ ಅವರು ಹಿಂಪಡೆಯದಿದ್ದರೆ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡುತ್ತೇವೆ. ಕೇಸು ಹಾಕುತ್ತೇವೆಯೋ ಅಥವಾ ಬೇರೆ ಕ್ರಮವೋ ಬಳಿಕ ಹೇಳುತ್ತೇವೆ ಎಂದರು.

ಕೃಷಿ ಅಭಿವೃದ್ದಿಯ ಬಗ್ಗೆ ರಾಜ್ಯ, ಕೇಂದ್ರದ ನಿಲುವುಗಳು ಬದಲಾಗಬೇಕಿದೆ: ವೀರಪ್ಪ ಮೊಯ್ಲಿ

ಕಾಂಟ್ರಾಕ್ಟರ್‌ ಸಾವಿಗೆ ಕಾರಣರಾದವರಿಗೆ ಏನ್‌ ಮಾಡಬೇಕು?: ಸಂಸದ ಡಿ.ಕೆ ಸುರೇಶ್‌ ವಿರುದ್ಧ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದಿರುವ ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿಕೆಗೆ, ಕಾಂಟ್ರಾಕ್ಟರ್ ಸಾವಿಗೆ ಕಾರಣರಾದರಲ್ಲ ಅವರಿಗೆ ಏನು ಮಾಡಬೇಕು.? ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಈಶ್ವರಪ್ಪಗೆ ಸಚಿವ ರಾಮಲಿಂಗಾರೆಡ್ಡಿ ಟಾಂಗ್ ನೀಡಿದರು. ಕಲಬರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಕಂಡ ಅತಿ ಭ್ರಷ್ಟ ಸರಕಾರ ಅಂದ್ರೆ ಅದು ಬೊಮ್ಮಾಯಿ ಅವಧಿಯ ಸರ್ಕಾರ ಎಂದು ದೂರಿದರು. ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ನಮಗೆ ಕಾಣಿಸುತ್ತಿಲ್ಲ. 

ಟೆಂಡರ್‌ಗಳಲ್ಲಿ ಸಣ್ಣ ಪುಟ್ಟ ಪ್ಯಾಕೇಜ್ ಮಾಡಿದ್ರೆ ಕಾಂಟ್ರಾಕ್ಟರ್ಸಗೆ ತೊಂದರೆ ಆಗುತ್ತೆ ಅಂತ ಸಂಘದವರು ಹೇಳಿದ್ದಾರೆ. ಬಿಜೆಪಿಗೆ ಹೋಲಿಕೆ ಮಾಡಿದ್ರೆ ನಮ್ಮಲ್ಲಿ ಭ್ರಷ್ಟಾಚಾರ ಕಾಣಿಸ್ತಾನೆ ಇಲ್ಲ. ಈ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವ ನೈತಿಕ ಹಕ್ಕು ಇಲ್ಲವೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ್ದೆ ಯಡಿಯೂರಪ್ಪ ಮತ್ತು ಬೊಮ್ಮಾಯಿ. ಇವರಿಬ್ಬರ ಅವಧಿಯಲ್ಲಿ ರಾಜ್ಯದ ಸಾಲ ದ್ವಿಗುಣವಾಗಿದೆ. ನಾವು ಜನರಿಗೆ ಅನುಕೂಲವಾಗುವ ಗ್ಯಾರಂಟಿ ಕೊಟ್ಟಿದ್ದೇವೆ. ಆದ್ರೆ ಬಿಜೆಪಿಯವರು ಜನರಿಗೆ ಸಾಲದ ಗ್ಯಾರಂಟಿ ಕೊಟ್ಟಿದ್ದಾರೆ. ದೇಶದಲ್ಲಿ ಮೋದಿ ಕಥೆಯೂ ಇದೆ. ಅವರೂ ದೇಶದ ಜನರಿಗೆ ಸಾಲದ ಗ್ಯಾರಂಟಿ ಕೊಟ್ಟಿದ್ದಾರೆಂದು ತಿವಿದರು.

ನಾನು ಲೋಕಸಭಾ ಚುನಾವಣೆಯ ಅಭ್ಯರ್ಥಿಯಲ್ಲ: ಸಚಿವ ಮಹದೇವಪ್ಪ ಸ್ಪಷ್ಟನೆ

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ 40 ಪರ್ಸೆಂಟ್‌ ಆರೋಪವನ್ನು ಯಾರ ವಿರುದ್ಧ ಮಾಡಿದ್ದಾರೋ ಗೊತ್ತಿಲ್ಲ. ನಮ್ಮ ಸರ್ಕಾರ ಅಂತಹ ಯಾವುದೇ ಆರೋಪವನ್ನೂ ಎದುರಿಸುತ್ತಿಲ್ಲ. ಕೆಂಪಣ್ಣ ಹೇಳಿಕೆಗಳು ಪುರಾವೆ ರಹಿತ.
-ಎಚ್.ಕೆ.ಪಾಟೀಲ್‌, ಸಚಿವ

Follow Us:
Download App:
  • android
  • ios