Asianet Suvarna News Asianet Suvarna News

ಲೋಕ ಕದನ: ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ಹಿನ್ನಡೆ, ಸಚಿವ ಮಹದೇವಪ್ಪ

ಬಿಜೆಪಿಗೆ ಜನ ಎಚ್ಚರಿಕೆ ಗಂಟೆ ನೀಡಿದ್ದಾರೆ. ವಿಧಾನದ ವಿರೋಧಿ ನೀತಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಬೇರೆ ಪಕ್ಷಗಳನ್ನ ಆಶ್ರಯಿಸೇ ಸರ್ಕಾರ ರಚನೆ ಮಾಡಬೇಕು. ಬಿಜೆಪಿ ಹಿಡನ್ ಅಜೆಂಡಾ ಜಾರಿ‌ ಮಾಡುವುದು ಸುಲಭವಲ್ಲ. ಎಚ್ಚರಿಕೆಯ ಹೆಜ್ಜೆ ಇಡುವ ರಾಜಕೀಯ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂಡಿಯಾ ಮೈತ್ರಿಕೂಟ ವಿಪಕ್ಷವಾಗಿ ಗಟ್ಟಿ ಧ್ವನಿಯಾಗಲಿದೆ: ಸಚಿವ ಹೆಚ್.ಸಿ ಮಹದೇವಪ್ಪ 

Minister HC Mahdevappa React to Congress Performance in Lok Sabha Election 2024 Result grg
Author
First Published Jun 8, 2024, 5:03 PM IST

ಬೆಂಗಳೂರು(ಜೂ.08):  ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಮತದಾರರು ಶಾಂತಿಯುತವಾಗಿ ಮತದಾನ ಮಾಡಿದ್ದಾರೆ. 70% ಮತದಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ 100% ಆಗಲಿ. ಮತದಾನ ಮಾಡಿದವರಿಗೆ ಧನ್ಯವಾದಗಳು. 2019 ರಲ್ಲಿ ಒಂದು ಸ್ಥಾನ ಗೆದ್ದಿದ್ವಿ‌, ಈ ಬಾರಿ 9 ಸ್ಥಾನ ಗೆದ್ದಿದ್ದೇವೆ. ಕನಿಷ್ಠ 12-14 ಸ್ಥಾನ ಗೆಲ್ಲಬೇಕಿತ್ತು. ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಮತಗಳ ಧ್ರುವೀಕರಣ ಆಗಿದೆ. ಇದರಿಂದಾಗಿ 5-6 ಕ್ಷೇತ್ರಗಳಲ್ಲಿ ಹಿನ್ನಡೆ ಆಗಿದೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದರರೊಂದಿಗೆ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ ಅವರು, ಬಿಜೆಪಿಗೆ ಜನ ಎಚ್ಚರಿಕೆ ಗಂಟೆ ನೀಡಿದ್ದಾರೆ. ವಿಧಾನದ ವಿರೋಧಿ ನೀತಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಬೇರೆ ಪಕ್ಷಗಳನ್ನ ಆಶ್ರಯಿಸೇ ಸರ್ಕಾರ ರಚನೆ ಮಾಡಬೇಕು. ಬಿಜೆಪಿ ಹಿಡನ್ ಅಜೆಂಡಾ ಜಾರಿ‌ ಮಾಡುವುದು ಸುಲಭವಲ್ಲ. ಎಚ್ಚರಿಕೆಯ ಹೆಜ್ಜೆ ಇಡುವ ರಾಜಕೀಯ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂಡಿಯಾ ಮೈತ್ರಿಕೂಟ ವಿಪಕ್ಷವಾಗಿ ಗಟ್ಟಿ ಧ್ವನಿಯಾಗಲಿದೆ ಎಂದು ಹೇಳಿದ್ದಾರೆ. 

ದೇವದೂತ ಬಂದ ನಂತರವೇ ಬೆಲೆ ಏರಿಕೆ, ಕೊರೊನಾ ಸಾವು ನೋವು ಆಗಿದ್ದು: ಮೋದಿ ವಿರುದ್ಧ ಎಚ್‌ಸಿ ಮಹದೇವಪ್ಪ ಕಿಡಿ

ಸಚಿವ ಕ್ಷೇತ್ರದಲ್ಲಿ ಹಿನ್ನಡೆ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಹೆಚ್.ಸಿ ಮಹಾದೇವಪ್ಪ ಅವರು, ಆಡಳಿತ ವಿರೋಧಿ ಅಲೆ ಇಲ್ಲ. ಬಿಜೆಪಿ- ಜೆಡಿಎಸ್ ರಾಜಕೀಯ ಒಡಂಬಡಿಕೆ ಮತಗಳು ಧ್ರುವೀಕರಣ ಆಗಿದೆ. ಮೇಲ್ಜಾತಿಯವರು ಒಂದಾದರು. ಅಹಿಂದವರು ಒಂದಾದರೂ ಹಾಗಾಗಿ ನಾವು 9 ಸ್ಥಾನ ಗೆದ್ದಿದ್ದೇವೆ. ಒಳ್ಳೆಯ ಕಾರ್ಯ ಆಗಿದೆ, ಆದರೆ ನಿರೀಕ್ಷೆ ಹುಸಿಯಾಗಿದೆ. ಏನು ಕಾರಣ ,ವೋಟ್ ಫ್ಯಾಟರ್ನ್ ಏನು ಎಂದು ಚರ್ಚೆ ಆಗಲಿದೆ. ಉಳಿದ ಎಲ್ಲಾ ವಿಚಾರಗಳು ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಲಿದೆ ಎಂದು ತಿಳಿಸಿದ್ದಾರೆ. 

ಸಮುದಾಯವಾರು ಡಿಸಿಎಂ ಸೃಷ್ಟಿ ಆಗಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಮಹದೇವಪಪ್ಪ ಅವರು, ಅದು ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಬೇಕು. ಹುದ್ದೆ ಸೃಷ್ಟಿ ಆಗಬೇಕೋ ಬೇಡವೋ ಎಂದು ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಲಿದೆ. ಸದ್ಯಕ್ಕೆ ಯಾವುದೇ ಚರ್ಚೆ ಇಲ್ಲ. ಚುನಾವಣಾ ಫಲಿತಾಂಶ ಬಗ್ಗೆ ಚರ್ಚೆಯಿಲ್ಲ. ಪಕ್ಷವನ್ನು ಹೇಗೆ ಸಂಘಟಿಸಬೇಕು ಎಂದು ಚರ್ಚೆ ಆಗಲಿದೆ. ಸದ್ಯಕ್ಕೆ ನನ್ನ‌ಮುಂದೆ ಪ್ರಸ್ತಾಪ ಇಲ್ಲ. ಅದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದಿದ್ದಾರೆ. 

ಮೈಸೂರಿನಲ್ಲಿ ನಮಗೆ ಹಿನ್ನಡೆ ಆಗಿಲ್ಲ. ನನ್ನ ಕ್ಷೇತ್ರ, ಸಿಎಂ ಕ್ಷೇತ್ರ ಅಲ್ಲಿ ಬರಲಿದೆ. ಅಹಿಂದ ಮತಗಳು ಸಾಲಿಡ್ ಆಗಿ ಮತ ಹಾಕಿದ್ದಾರೆ. ಅವರು (ಒಕ್ಕಲಿಗರು) ಒಂದಾಗಿದ್ದಾರೆ. ಎಚ್ಚರಿಕೆಯಿಂದ ನಡೆಯಬೇಕು ಎಂಬ ವಾತಾವರಣ ಸೃಷ್ಟಿಸುವ ಫಲಿತಾಂಶ ಬಂದಿದೆ. ಕೇಂದ್ರದ ಎನ್‌ಡಿಎ ಸರ್ಕಾರ ದೇಶದ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡಬೇಕು. ವಿರೋಧ ಪಕ್ಷವಾಗಿ ಇಂಡಿಯಾ ಮಿತ್ರ ಪಕ್ಷಗಳು ಕೆಲಸ ಮಾಡಲಿವೆ. ಬಿಜೆಪಿಯವರು ಸಂವಿಧಾನ ಬದಲಾವಣೆಯ ಮಾತುಗಳನ್ನ ಆಡಿದ್ದರು. ಈಗ ಮೋದಿ ಸಂವಿಧಾನಕ್ಕೆ ನಮಸ್ಕರಿಸಿದ್ದಾರೆ. ಸಂವಿಧಾನದ ಪೀಠಿಕೆ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ. ನಾವು ಅದೇ ಕಾರಣಕ್ಕೆ ಜಾಗೃತಿ ಜಾಥಾ ಮಾಡಿದೆವು. ಸಂವಿಧಾನ ಪೀಠಿಕೆಯ ಜಾಥಾ ಮಾಡಿದ್ದೆವು ಎಂದು ತಿಳಿಸಿದ್ದಾರೆ. 

ಪ್ರಧಾನಿಗಳು ಜನ ಸಾಮಾನ್ಯರ ದೂತರೇ ಹೊರತು ದೇವದೂತರಲ್ಲ: ಎಚ್ ಸಿ ಮಹದೇವಪ್ಪ

ಸಚಿವರ ಕ್ಷೇತ್ರಗಳಲ್ಲಿ ಲೀಡ್ ಸಿಗದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಮಹದೇವಪ್ಪ ಅವರು, ಇದು ಸರ್ಕಾರದ ವಿರುದ್ಧದ ಫಲಿತಾಂಶ ಅಲ್ಲ, ಅಥವಾ ಆಡಳಿತ ವಿರೋಧಿ ಫಲಿತಾಂಶ ಅಲ್ಲ. ವಿಧಾನಸಭಾ ಚುನಾವಣೆಯೇ ಬೇರೆ ಲೋಕಸಭಾ ಚುನಾವಣೆಯೇ ಬೇರೆ. ಬಿಜೆಪಿ, ಜೆಡಿಎಸ್ ಮೈತ್ರಿಯ ಕಾರಣಕ್ಕೆ ನಮ್ಮ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಿದೆ. ಮುಂದುವರೆದ ಸಮುದಾಯ ಒಗ್ಗಟ್ಟಾದವು. ಹಿಂದುಳಿದ ಸಮುದಾಯ ಕಾಂಗ್ರೆಸ್ ಜೊತೆಯೇ ಇದೆ ಎಂದು ತಿಳಿಸಿದ್ದಾರೆ. 

ವಾಲ್ಮೀಕಿ ನಿಗಮದ ಹಗರಣದ ವಿಚಾರಕ್ಕೆ ಬಗ್ಗೆ ಮಾತನಾಡಿದ ಸಚಿವ ಮಹದೇವಪ್ಪ ಅವರು, ಎಸ್.ಐ.ಟಿ ತನಿಖೆ ನಡೆಯುತ್ತಿದೆ. ಸಿಬಿಐ ಕೂಡ ಇಂಟರ್ ಫಿಯರ್ ಆಗಿದೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಕ್ರಮ ಆಗಲಿದೆ.  ತನಿಖಾ ಹಂತದಲ್ಲಿದ್ದಾಗ ನಾನು ಹೆಚ್ಚು ಮಾತಾಡಲ್ಲ ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios