ತಪ್ಪಿತಸ್ಥರ ರಕ್ಷಣೆ ಮಾಡುವಂತ ಪ್ರವೃತ್ತಿ ಕಾಂಗ್ರೆಸಿನದ್ದು: ಸಚಿವ ಗೋವಿಂದ ಕಾರಜೋಳ
ಲೋಕಾಪುರ(ಜು.24): ಸಂವಿಧಾನ ರಕ್ಷಣೆಯಲ್ಲಿ ಇರುವ ಸ್ವಾಯತ್ತ ಸಂಸ್ಥೆಯಾದ ಇಡಿ, ಸಿಬಿಐ, ಐಟಿ, ಪೊಲೀಸ್ ಇಲಾಖೆ ತಮ್ಮ ವ್ಯಾಪ್ತಿಯಲ್ಲಿ ಬರುವ ತನಿಖೆಗಳಾಗುತ್ತವೆ. ಸುಳ್ಳು ಆರೋಪ ಮಾಡಿ ತಪ್ಪಿತಸ್ಥರ ರಕ್ಷಣೆ ಮಾಡುವಂತ ಪ್ರವೃತ್ತಿ ಕಾಂಗ್ರೆಸಿನದ್ದು, ನರಿ ಬುದ್ಧಿ ಇರುವುದು ಕಾಂಗ್ರೆಸ್‌ಗೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಸಮೀಪದ ಜಂಬಗಿ ಕೆ.ಡಿ.ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸಿನವರು ಭ್ರಷ್ಟಾಚಾರ ಮಾಡಿದ್ದಾರೆ ಎಂದು ನಾವು ಹೇಳುವ ಅವಶ್ಯಕತೆ ಇಲ್ಲ. ಸ್ವತಃ ಮಾಜಿ ಸ್ಪೀಕರ್, ಮಾಜಿ ಸಚಿವ ರಮೇಶ ಕುಮಾರವರೇ ಹೇಳಿದ್ದಾರೆ. ನಾಲ್ಕು ತಲೆಮಾರಿನಷ್ಟುನಾವು ಮಾಡಿಕೊಂಡಿದ್ದೇವೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ರಕ್ಷಣೆಗೆ ಬರಬೇಕು. ಇಲ್ಲದಿದ್ದರೇ ತಿನ್ನುವ ಅನ್ನದಲ್ಲಿ ಹುಳ ಬೀಳುತ್ತವೆ ಎಂದು ಅವರೇ ಹೇಳಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾಗಿಲ್ಲ. ನಾವು ಹೇಳಿದ ಮಾತಲ್ಲ ಇದು ಕಾಂಗ್ರೆಸ್‌ನವರೇ ಹೇಳಿ ಸರ್ಟಿಫೀಕೇಟ್ ನೀಡಿದ್ದಾರೆ. ಅದಕ್ಕೆ ಕಾಂಗ್ರೆಸ್ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸುಮಾರು .5000 ಸಾವಿರ ಕೋಟಿ ಆಸ್ತಿಯನ್ನು ಕೇವಲ .50 ಕೋಟಿಗೆ ಮಾರಿದ್ದಾರೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗುತ್ತದೆ. ಅದಕ್ಕೆ ಹೇದರುವ ಅವಶ್ಯಕತೆ ಇಲ್ಲ ಎಂದರು.
ಅಗ್ನಿಪಥ ಯೋಜನೆ ವಿರೋಧಿಸುವುದರ ಹಿಂದೆ ರಾಜಕೀಯ ಕೈವಾಡ: ಕಾರಜೋಳ
ಜಾತಿಗೆ ಒಬ್ಬ ಮುಖ್ಯಮಂತ್ರಿ ಕಾಂಗ್ರೆಸ್‌ನಲ್ಲಿ ಹುಟ್ಟಿಕೊಳ್ಳುತ್ತಿದ್ದಾರೆ. 2023 ಚುನಾವಣೆಯಲ್ಲಿ ಸೋಲಿನ ಭಯದಿಂದ ಹಾತಶರಾಗಿದ್ದಾರೆ. ಕಾಂಗ್ರೆಸ್ಸಿನವರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಜನಪರ, ಸಮಾಜ ಸೇವೆ, ಯಾವ ಪಕ್ಷಗಳು ತತ್ವ ಸಿದ್ಧಾಂತಗಳು ಈ ದೇಶವನ್ನು ಗಟ್ಟಿಗೊಳಿಸುತ್ತಿವೆ. ಅಭಿವೃದ್ಧಿ ಮಾಡುವವರೇ ನಿಜವಾದ ಮುಖ್ಯಮಂತ್ರಿಗಳಾಗುವ ಇದುವರೆಗೆ ನಡೆದ ಬಂದ ಸಂಪ್ರದಾಯ. ಕಾಂಗ್ರೆಸಿನವರು ಜಾತಿ ಹೆಸರು ಹೇಳಿಕೊಂಡು ನಾನು ಮುಖ್ಯಮಂತ್ರಿಯಾಗುತ್ತೀನಿ ಅಂದರೆ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಈ ನಾಡಿನ ಜನರಿಗೆ ಗೊತ್ತು ಯಾರನ್ನು ಮುಖ್ಯಮಂತ್ರಿ ಮಾಡಬೇಕೆಂದು. ಕಾಂಗ್ರೆಸಿನವರು ಕೇವಲ ಹಗಲು ಕನಸು ಕಾಣುತ್ತಿದ್ದಾರೆ. ಜಾತಿ, ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವುದು ನೀಚ ರಾಜಕಾರಣ ಅದಕ್ಕೆ ಕಾಂಗ್ರೆಸ್ ಪಕ್ಷವನ್ನು ಖಂಡಿಸುತ್ತೇನೆ ಎಂದರು.
ಈ ವೇಳೆ ಆರ್.ಎಸ್.ತಳೇವಾಡ, ಲಕ್ಷ್ಮಣ ತಳೇವಾಡ, ಕುಮಾರ ಹುಲಕುಂದ, ಅರುಣ ಕಾರಜೋಳ, ಶ್ರೀಶೈಲಗೌಡ ಪಾಟೀಲ, ಹಣಮಂತ ತುಳಸಿಗೇರಿ, ಸಂಜಯ ತಳೇವಾಡ, ಶಿವನಗೌಡ ಪಾಟೀಲ, ಗುರುಪಾದಪ್ಪ ಕುಳಲಿ, ರಾಜು ಯಡಹಳ್ಳಿ, ಬಸವರಾಜ ಚಿಕ್ಕೂರ, ಅರ್ಜುನ ಚೌರಡ್ಡಿ ಮುಂತಾದವರು ಇದ್ದರು.
