Asianet Suvarna News Asianet Suvarna News

ವಿಧಾನ ಪರಿಷತ್‌ ಚುನಾವಣೆ 2024: ಹಿರಿಯರನ್ನ ಕೇಳದೆ ಮೇಲ್ಮನೆ ಅಭ್ಯರ್ಥಿ ಆಯ್ಕೆ, ಪರಂ ಗರಂ..!

ಮುಖ್ಯಮಂತ್ರಿಗಳು ಅವರು, ಮತ್ತು ಕೆಪಿಸಿಸಿ ಅಧ್ಯಕ್ಷರು ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಅಭ್ಯರ್ಥಿಗಳನ್ನು ಪಕ್ಷದ ಅಂತಿಮಗೊಳಿಸುವ ಮುನ್ನ ನನ್ನಂತಹ ಹಿರಿಯರ ಅಭಿಪ್ರಾಯವನ್ನೂ ಪಡೆಯಬೇಕು. ಕೆಪಿಸಿಸಿಯ ಮಾಜಿ ಅಧ್ಯಕ್ಷರುಗಳು ಸೇರಿದಂತೆ ಪಕ್ಷ ಹಾಗೂ ಸರ್ಕಾರದಲ್ಲಿ ಅನೇಕ ಸ್ಥಾನಮಾನದ ಅನುಭವ ಇರುವವರು ಇದ್ದಾರೆ. ಅಂತಹ ಎಲ್ಲ ಹಿರಿಯರು, ಅನುಭವಿಗಳ ಅಭಿಪ್ರಾಯ ಪಡೆದರೆ ಒಳ್ಳೆಯದು: ಗೃಹ ಸಚಿವ ಡಾ.ಜಿ.ಪರಮೇಶ್ವರ್ 

Minister G Parameshwar React to Congress Candidate Selection for Council Elections 2024 grg
Author
First Published May 29, 2024, 10:46 AM IST

ಬೆಂಗಳೂರು(ಮೇ.29):  ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಕಾಂ ಗ್ರೆಸ್ ಅಭ್ಯರ್ಥಿಗಳ ಅಂತಿಮಗೊಳಿಸು ವಾಗ ಮುಖ್ಯ ಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರು ಇಬ್ಬರೇ ತೀರ್ಮಾನ ತೆಗೆದುಕೊಂಡರೆ ಸರಿ ಕಾಣುವುದಿಲ್ಲ. ಅವರು ಪಕ್ಷ ಹಾಗೂ ಸರ್ಕಾರದಲ್ಲಿನ ಎಲ್ಲ ಹಿರಿಯರ ಅಭಿಪ್ರಾಯವನ್ನು ಕೇಳಬೇಕೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ. 

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ 'ಮುಖ್ಯಮಂತ್ರಿಗಳು ಅವರು, ಮತ್ತು ಕೆಪಿಸಿಸಿ ಅಧ್ಯಕ್ಷರು ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಅಭ್ಯರ್ಥಿಗಳನ್ನು ಪಕ್ಷದ ಅಂತಿಮಗೊಳಿಸುವ ಮುನ್ನ ನನ್ನಂತಹ ಹಿರಿಯರ ಅಭಿಪ್ರಾಯವನ್ನೂ ಪಡೆಯಬೇಕು. ಕೆಪಿಸಿಸಿಯ ಮಾಜಿ ಅಧ್ಯಕ್ಷರುಗಳು ಸೇರಿದಂತೆ ಪಕ್ಷ ಹಾಗೂ ಸರ್ಕಾರದಲ್ಲಿ ಅನೇಕ ಸ್ಥಾನಮಾನದ ಅನುಭವ ಇರುವವರು ಇದ್ದಾರೆ. ಅಂತಹ ಎಲ್ಲ ಹಿರಿಯರು, ಅನುಭವಿಗಳ ಅಭಿಪ್ರಾಯ ಪಡೆದರೆ ಒಳ್ಳೆಯದು. ಹಿರಿಯರ ಅಭಿಪ್ರಾಯ ಪಡೆಯದೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಇಬ್ಬರೇ ನಿರ್ಧರಿಸಿದರೆ ಅದು ನನ್ನ ಪ್ರಕಾರ ಸರಿ ಕಾಣುವುದಿಲ್ಲ' ಎಂದರು.

ವಿಧಾನ ಪರಿಷತ್ ಚುನಾವಣೆ 2024: 7 ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ 300 ಆಕಾಂಕ್ಷಿ..!

'ಅಭ್ಯರ್ಥಿಗಳ ಆಯ್ಕೆಗೆ ಜಾತಿವಾರು, ಪ್ರಾದೇಶಿಕವಾರು ಆದ್ಯತೆ ನೀಡಿ ಎಂದು ವಿವಿಧ ಸಚಿವರು ಒತ್ತಾಯಿಸಿದ್ದಾರಲ್ಲ ಎಂಬ ಪ್ರಶ್ನೆಗೆ, ಅದೇ ಅಭ್ಯರ್ಥಿಗಳ ಆಯ್ಕೆ ವೇಳೆ ಜಿಲ್ಲಾವಾರು, ಜಾತಿವಾರು, ಪ್ರಾದೇಶಿಕವಾರು ಜೊತೆಗೆ ಯಾರು ಪಕ್ಷಕ್ಕಾಗಿ ದುಡಿದಿದ್ದಾರೆ, ಯಾವ ಸಮುದಾಯದ ಪಕ್ಷದ ಜೊತೆ ನಿಂತಿದೆ. ಇದೆಲ್ಲವನ್ನೂ ಪರಿಗಣಿಸಬೇಕಾಗುತ್ತದೆ. ಹಾಗಾಗಿಯೇ ಏಕಾಏಕಿ ಅವರಿಬ್ಬರೇ ಕೂತು ತೀರ್ಮಾನ ಮಾಡಬಾರದು ಎಂಬುದು ನನ್ನ ಅಭಿಪ್ರಾಯ' ಎಂದರು.
ಪರಂ ಅಭಿಪ್ರಾಯ ಕೂಡ ಕೇಳುತ್ತೇವೆ

ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆ ವೇಳೆ ಪರಮೇಶ್ವರ್ ಅವರ ಅಭಿಪ್ರಾಯವನ್ನೂ ತೆಗೆದುಕೊಳ್ಳಲಾಗುವುದು. ಯಾವುದನ್ನೂ ನಾವೇ ತೀರ್ಮಾನಿಸುವುದಿಲ್ಲ. ಎಲ್ಲರ ಅಭಿಪ್ರಾಯ ಪಡೆದೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios