Asianet Suvarna News Asianet Suvarna News

ಇಡೀ ಬಿಜೆಪಿ ಕಿತ್ತುಕೊಂಡು ಕಾಂಗ್ರೆಸ್‌ಗೆ ಬರಲು ರೆಡಿಯಾಗಿದೆ: ಸಚಿವ ಈಶ್ವರ ಖಂಡ್ರೆ

ಬಿಜೆಪಿಗರಲ್ಲಿ ನೈತಿಕತೆ ಇಲ್ಲ. ಹತಾಶ ಮನೋಭಾವದಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅದಕ್ಕೆ ಯಾರೂ ಕ್ಯಾರೆ ಎನ್ನುತ್ತಿಲ್ಲ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಇನ್ನು ಡಿಕೆ ಶಿವಕುಮಾರ ಅವರು ಪಕ್ಷದ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾಗಿದ್ದು ಎಲ್ಲರಿಗೂ ಒಳ್ಳೆಯ ಆಡಳಿತ ನೀಡುವಂತೆ ಸೂಚನೆ ಕೊಡುತ್ತಿದ್ದಾರೆ ಅತ್ಯುತ್ತಮ ಆಡಳಿತದಿಂದ ಜನರು ಕಾಂಗ್ರೆಸ್‌ ಮೆಚ್ಚಿಕೊಂಡಿದ್ದಾರೆ ಎಂದ ಸಚಿವ ಈಶ್ವರ ಖಂಡ್ರೆ 

Minister Eshwar Khandre Slams BJP grg
Author
First Published Nov 2, 2023, 10:30 PM IST

ಬೀದರ್‌(ನ.02): ರಮೇಶ ಜಾರಕಿಹೊಳಿ ಅವರು ಹಗಲುಕನಸು, ತಿರುಕನ ಕನಸು ಕಾಣುತ್ತಿದ್ದಾರೆ. ಬಿಜೆಪಿಯವರೇ ಕಾಂಗ್ರೆಸ್‌ ಸೇರಲು ಸಾಲಾಗಿ ನಿಂತಿದ್ದಾರೆ ಪರಿಶೀಲನೆ ಮಾಡುತ್ತಿದ್ದಾರೆ, ಒಂದು ವೇಳೆ ಕಮಲಪಾಳಯದವರು ಬಂದಲ್ಲಿ ಇಡೀ ಬಿಜೆಪಿಗೆ ಬಿಜೆಪಿ ಕಿತ್ತುಕೊಂಡು ಬರುತ್ತದೆ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಿರುಗೇಟು ನೀಡಿದರು.

ಅವರು ಬುಧವಾರ ಬೀದರ್‌ನಲ್ಲಿ ಈ ಕುರಿತಾದ ಪ್ರಶ್ನೆಗೆ ಉತ್ತರಿಸಿ, ಅವರಲ್ಲಿ ನೈತಿಕತೆ ಇಲ್ಲ. ಹತಾಶ ಮನೋಭಾವದಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅದಕ್ಕೆ ಯಾರೂ ಕ್ಯಾರೆ ಎನ್ನುತ್ತಿಲ್ಲ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಇನ್ನು ಡಿಕೆ ಶಿವಕುಮಾರ ಅವರು ಪಕ್ಷದ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾಗಿದ್ದು ಎಲ್ಲರಿಗೂ ಒಳ್ಳೆಯ ಆಡಳಿತ ನೀಡುವಂತೆ ಸೂಚನೆ ಕೊಡುತ್ತಿದ್ದಾರೆ ಅತ್ಯುತ್ತಮ ಆಡಳಿತದಿಂದ ಜನರು ಕಾಂಗ್ರೆಸ್‌ ಮೆಚ್ಚಿಕೊಂಡಿದ್ದಾರೆ ಎಂದರು.

ಬೀದರ್: ಹಾಸ್ಟಲ್ ವಾರ್ಡನ್‌ಗೆ ಜೈಲಿಗೆ ಕಳುಹಿಸುವ ಧಮ್ಕಿ ಹಾಕಿದ ಬಿಜೆಪಿ ಶಾಸಕ..!

ಬೀದರ್‌ನಲ್ಲಿ ಜಿಂಕೆ ಧಾಮ:

ಬೀದರ್‌ ಜಿಲ್ಲೆಯಲ್ಲಿ ಕೃಷ್ಣಮೃಗ ಧಾಮ ನಿರ್ಮಿಸುವ ಕುರಿತಂತೆ ಅಧಿಕಾರಿಗಳು ಮೀಸಲಿಟ್ಟಿರುವ 2ಕೋಟಿ ರು.ಗಳ ಅನುದಾನಕ್ಕಾಗಿ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಿದ್ದು, ಅದನ್ನು ಎಲ್ಲೆಲ್ಲಿ ಮಾಡಬೇಕು ಎಂಬ ಕುರಿತು ಗುರುತಿಸಿದ್ದಾರೆ ಮಾರ್ಚ್‌ ಒಳಗಾಗಿ ಅನುಷ್ಠಾನಕ್ಕೆ ತಂದು ಉದ್ಘಾಟನೆ ಮಾಡುತ್ತೇವೆ ಎಂದು ತಿಳಿಸಿದರು.

ಬೀದರ್‌ನಲ್ಲಿ ರಾಷ್ಟ್ರ, ರಾಜ್ಯಮಟ್ಟದ ಅಧಿಕಾರಿಗಳ ತರಬೇತಿ ಕೇಂದ್ರ:

ಬೀದರ್‌ನಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ತರಬೇತಿ ಕೇಂದ್ರ ಆರಂಭಿಸಲು 5ಕೋಟಿ ರು.ಗಳ ಅನುದಾನ ಮಂಜೂರಿಸಿದ್ದು, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲು ಕೇಂದ್ರ ಆರಂಭಿಸಿ ಅರಣ್ಯೀಕರಣ ಹೆಚ್ಚಿಸುವ ಯೋಜನೆ ಇದಾಗಿದೆ, ದೇವದೇವ ವನ ಅಥವಾ ಹೊನ್ನಿಕೇರಿ ಸಮೀಪವೂ ಮಾಡಬಹುದಾಗಿದೆ ಇನ್ನೂ ಸ್ಥಳ ನಿರ್ಧಾರ ಆಗಿಲ್ಲ ಎಂದರು.

Follow Us:
Download App:
  • android
  • ios