Karnataka Politics: ಕಾಂಗ್ರೆಸ್‌ ನಾಯಕರ ವಿರುದ್ಧ ಸುಧಾಕರ್‌ ಮತ್ತೆ ವಾಗ್ದಾಳಿ

ದೇಶದಲ್ಲಿಯೇ ವೈಶಿಷ್ಟ ಪೂರ್ಣವಾದ ರಾಜಕಾರಣಕ್ಕೆ ಹೆಸರಾಗಿದ್ದ ಕರ್ನಾಟದ ರಾಜಕಾರಣವನ್ನು ಅತ್ಯಂತ ಕೀಳು ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೆಲಸ ರಾಜ್ಯ ಕಾಂಗ್ರೆಸ್‌ ನಾಯಕರಿಂದ ಆಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮತ್ತೆ ವಾಗ್ದಾಳಿ ನಡೆಸಿದರು.

minister dr k sudhakar slams congress over santosh patil suicide case gvd

ಚಿಕ್ಕಬಳ್ಳಾಪುರ (ಏ.15): ದೇಶದಲ್ಲಿಯೇ ವೈಶಿಷ್ಟ ಪೂರ್ಣವಾದ ರಾಜಕಾರಣಕ್ಕೆ ಹೆಸರಾಗಿದ್ದ ಕರ್ನಾಟದ ರಾಜಕಾರಣವನ್ನು (Karnataka Politics) ಅತ್ಯಂತ ಕೀಳು ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೆಲಸ ರಾಜ್ಯ ಕಾಂಗ್ರೆಸ್‌ ನಾಯಕರಿಂದ ಆಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಾಂಗ್ರೆಸ್‌ (Congress) ವಿರುದ್ಧ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Dr K Sudhakar) ಮತ್ತೆ ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರದಲ್ಲಿ ಅಂಬೇಡ್ಕರ್‌ ಹಾಗೂ ಬಾಬು ಜಗಜೀವನ್‌ ರಾಂ ಜಯಂತಿಯಲ್ಲಿ ಪಾಲ್ಗೊಂಡ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಗಳು ಬರುತ್ತವೆ. ಹೋಗುತ್ತೇವೆ. 

ಆದರೆ ನಾವು ಯಾವ ರೀತಿ ನಡೆದುಕೊಳ್ಳಬೇಕೆಂದು ರಾಜಕಾರಣದಲ್ಲಿ ಬಹಳ ಮುಖ್ಯವೆಂದರು. ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದ (Santosh Patil Suicide Case) ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ. ಕಾಂಗ್ರೆಸ್‌ ನಾಯಕರು (Congress Leaders) ನಾವು ಎಂದೂ ಅಧಿಕಾರಕ್ಕೆ ಬರುವುದಿಲ್ಲ ಎಂಬ ತೀರ್ಮಾನ ತೆಗೆದುಕೊಂಡಿದ್ದಾರೆ. ಆಡಳಿತಕ್ಕೆ ಬರುತ್ತೇವೆಂದು ತಿಳಿದುಕೊಂಡಿದ್ದರೆ ಅವರು ಈ ರೀತಿ ವ್ಯವಹರಿಸುತ್ತಿರಲಿಲ್ಲ ಎಂದು ಪರೋಕ್ಷವಾಗಿ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಹಿಂದೆ ರಾಜಕೀಯ ಷಡ್ಯಂತ್ರ ಇದೆಯೆಂಬುದನ್ನು ಸಚಿವ ಸುಧಾಕರ್‌ ಹೇಳಿದರು.

ಎಸ್ಟೋನಿಯಾ ಜತೆ ಒಪ್ಪಂದದಿಂದ ಕರ್ನಾಟಕಕ್ಕೆ ಲಾಭ: ಡಾ. ಕೆ. ಸುಧಾಕರ್‌

ಅಂಬೇಡ್ಕರ್‌ರನ್ನು ಸೋಲಿಸಿದ್ದು ಕಾಂಗ್ರೆಸ್‌: ಇದಕ್ಕೂ ಮೊದಲು ಅಂಬೇಡ್ಕರ್‌ ಜಯಂತಿ ಉದ್ದೇಶಿಸಿ ಮಾತನಾಡಿದ ಸಚಿವ ಸುಧಾಕರ್‌, ಕಾಂಗ್ರೆಸ್‌ ಎರಡು ಬಾರಿ ಅಂಬೇಡ್ಕರ್‌ರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿತು. ಬಾಬು ಜಗಜೀವನರಾಂರನ್ನು ಪ್ರಧಾನಿ ಆಗುವ ಅವಕಾಶ ಕಾಂಗ್ರೆಸ್‌ ನಾಯಕರು ತಪ್ಪಿಸಿದರು. ಅಂಬೇಡ್ಕರ್‌ರನ್ನು ಬಹಳ ಕೊಂಡಾಡುವ ಕಾಂಗ್ರೆಸ್‌ ನಾಯಕರು ಅಂಬೇಡ್ಕರ್‌ಗೆ ಮಾಡಿದ ಅವಮಾನ ಇದು. ಕೊನೆಗೆ ಯಾವ ಪಕ್ಷ ಅಂಬೇಡ್ಕರ್‌ರನ್ನು ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಆರಿಸಿ ಕಳುಹಿಸಿತು ಎಂಬುದು ದೇಶದ ಜನತೆ ಅರ್ಥ ಮಾಡಿಕೊಳ್ಳಬೇಕು, ನಾವು ಯಾವುದೇ ರಾಜಕೀಯ ಲಾಭಕ್ಕಾಗಿ ಈ ಕಾರ್ಯಕ್ರಮ ಮಾಡುತ್ತಿಲ್ಲ. ಶೋಷಿತರ ಪರವಾಗಿದ್ದೇವೆ ಎಂಬುದು ಈ ಕಾರ್ಯಕ್ರಮದಿಂದ ಜನ ಅರ್ಥ ಮಾಡಿಕೊಳ್ಳಬೇಕೆಂದರು.

ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಪಾಪ ಅಮಾಯಕರ ಜನ ಇದ್ದಾರೆ. ದೊಡ್ಡ ಪ್ರಮಾಣದಲ್ಲಿ ಆಸೆ ತೋರಿಸಿ ಇಂತಹ ಮಂತ್ರಿ ಮೇಲೆ ಆರೋಪ ಮಾಡುವಂತೆ ಪ್ರಚೇದಿಸಿ ಅವರ ಜೀವಕ್ಕೆ ಕುತ್ತು ತರುವ ಕೆಲಸ ಪ್ರಯತ್ನಗಳು ರಾಜಕಾರಣದಲ್ಲಿ ನಡೆಯುತ್ತಿದೆ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿದೆ. ಯಾರನ್ನು ರಕ್ಷಿಸುವ ಪ್ರಶ್ನೆ ಇಲ್ಲ ಎಂದರು.

ಇನ್ನೂ ಸುಮ್ಮನ್ನೆ ಕೂರಲ್ಲ: ರಾಜ್ಯ ಸರ್ಕಾರವನ್ನು ಮಾನಸಿಕವಾಗಿ ಕುಗ್ಗಿಸುವ ಕಾಂಗ್ರೆಸ್‌ ಪ್ರಯತ್ನಕ್ಕೆ ನಾವು ಸೊಪ್ಪು ಹಾಕಲ್ಲ. ಮೇಲಿಂದ ಕೆಳಗಡೆಗೆ ಇವರು ಏನಿದ್ದಾರೆಂಬುದು ನಮಗೂ ಗೊತ್ತಿದೆ. ಈ ಬಗ್ಗೆ ಮಾತನಾಡುವ ಕಾಲ ನಮಗೂ ಬರುತ್ತದೆ. ಅವರು ನಿರ್ವಹಿಸಿದ ಇಲಾಖೆಗಳಲ್ಲಿ ಏನು ಮಾಡಿದ್ದಾರೆಂಬುದನ್ನು ಅಂಕಿ, ಅಂಶಗಳ ಸಮೇತ ನೀಡುತ್ತೇವೆ. ಆ ಬಗ್ಗೆ ತನಿಖೆಯನ್ನು ಸರ್ಕಾರ ಮಾಡಲಿದೆ. ಇನ್ನೂ ಸುಮ್ಮನೆ ಕೂರುವ ಪ್ರಶ್ನೆ ಇಲ್ಲ. ಎಲ್ಲಾ ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಹೇಳಿದ್ದಾರೆ. ಕಾಂಗ್ರೆಸ್‌ ಶಾಸಕರಿಗೂ ಇದು ಅನ್ವಯಿಸುವುದಿಲ್ಲವೇ ಎಂದು ಸುಧಾಕರ್‌ ಪ್ರಶ್ನಿಸಿದರು.

Covid 4th Wave: ಕರ್ನಾಟಕದಲ್ಲಿ 4ನೇ ಅಲೆ ಬಗ್ಗೆ ಸಚಿವ ಸುಧಾಕರ್‌ ಹೇಳಿದ್ದಿಷ್ಟು

ಭ್ರಷ್ಟಾಚಾರದ ಜನಕ ಕಾಂಗ್ರೆಸ್‌: ದೇಶದಲ್ಲಿ ಭ್ರಷ್ಟಾಚಾರವನ್ನು ಹುಟ್ಟಿಹಾಕಿರುವ ಪಕ್ಷ ಯಾವುದರೂ ಇದ್ದರೆ ಅದು ಕಾಂಗ್ರೆಸ್‌ ಮಾತ್ರ. ಕಾಂಗ್ರೆಸ್‌ ನಾಯಕರು, ಪ್ರಧಾನಿಮಂತ್ರಿಗೆ ಆ ಹೆಸರು ಬಂದಿತ್ತು. ಅವರ ಬಗ್ಗೆಯು ಹಲವು ವರ್ಷ ತನಿಖೆ ನಡೆದಿತ್ತು. ನರೇಂದ್ರ ಮೋದಿ ಬಂದು 7 ವರ್ಷ ಆಗಿದೆ. ಅವರ ಬಗ್ಗೆ ಎಲ್ಲಿಯಾದರೂ ಒಂದು ಆರೋಪ ಬಂದಿದೆಯೇ. ಅವರ ಜನಪ್ರಿಯತೆಯನ್ನು ಕಾಂಗ್ರೆಸ್‌ಗೆ ಸಹಿಕೊಳ್ಳಲಾಗುತ್ತಿಲ್ಲ. ಕಾಂಗ್ರೆಸ್‌ ಎಲ್ಲಾ ರಾಜ್ಯಗಳನ್ನ ಕಳೆದುಕೊಂಡಿದೆ. ಮುಂದೆ ಕರ್ನಾಟಕವನ್ನು ಕಳೆದುಕೊಳ್ಳಲಿದೆ. ಅಧಿಕಾರದ ತಿರುಕನ ಕನಸು ನಾಯಕರು ಕಾಣುತ್ತಿದ್ದಾರೆ ಎಂದು ಸಚಿವರು ಟೀಕಿಸಿದರು.

Latest Videos
Follow Us:
Download App:
  • android
  • ios