Asianet Suvarna News Asianet Suvarna News

ಉರಿಗೌಡ, ನಂಜೇಗೌಡ ಯಾರೆಂದು ನನಗೆ ಗೊತ್ತಿಲ್ಲ: ಸಚಿವ ಸುಧಾಕರ್‌

ತಮಗೆ ಮಾಜಿ ಪ್ರಧಾನಿ ದೇವೇಗೌಡರು ಗೊತ್ತು, ರಂಗೇಗೌಡರು ಗೊತ್ತು ಆದರೆ ಇವರ ಬಗ್ಗೆ ಗೊತ್ತಿಲ್ಲ. ಇವರ ಬಗ್ಗೆ ಇತಿಹಾಸದಲ್ಲಿ ಓದಿಲ್ಲ, ಚರಿತ್ರೆಯಲ್ಲಿ ದೇಶ ಸೇವೆ ಮಾಡಿದ್ದರೆ ಮಾನ್ಯತೆ ಕೊಟ್ಟು ಗೌರವ ಸೂಚಿಸೋಣ, ಗೊತ್ತಿರದ ವ್ಯಕ್ತಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. 

minister dr k sudhakar refuses to answer about urigowda and nanjegowda gvd
Author
First Published Mar 21, 2023, 1:30 AM IST

ಚಿಕ್ಕಬಳ್ಳಾಪುರ (ಮಾ.21): ತಮಗೆ ಮಾಜಿ ಪ್ರಧಾನಿ ದೇವೇಗೌಡರು ಗೊತ್ತು, ರಂಗೇಗೌಡರು ಗೊತ್ತು ಆದರೆ ಇವರ ಬಗ್ಗೆ ಗೊತ್ತಿಲ್ಲ. ಇವರ ಬಗ್ಗೆ ಇತಿಹಾಸದಲ್ಲಿ ಓದಿಲ್ಲ, ಚರಿತ್ರೆಯಲ್ಲಿ ದೇಶ ಸೇವೆ ಮಾಡಿದ್ದರೆ ಮಾನ್ಯತೆ ಕೊಟ್ಟು ಗೌರವ ಸೂಚಿಸೋಣ, ಗೊತ್ತಿರದ ವ್ಯಕ್ತಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ರಾಜ್ಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಉರಿಗೌಡ ಮತ್ತು ನಂಜೇಗೌಡರ ಬಗ್ಗೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಮರಾವತಿಯಲ್ಲಿ ನಡೆದ ಬೆಂಗಳೂರು ಉತ್ತರ ವಿವಿ ಹೊಸ ಕ್ಯಾಂಪಸ್‌ ನಿರ್ಮಾಣಕ್ಕೆ ಅಡಿಗಲ್ಲು ಕಾರ್ಯಕ್ರಮದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಉತ್ತರಿಸಿದ ಪರಿ ಇದು.

25ಕ್ಕೆ ಪ್ರಧಾನಿ ಮೋದಿ ಜಿಲ್ಲೆಗೆ: ಮುದ್ದೇನಹಳ್ಳಿಯ ಸತ್ಯಸಾಯಿ ಟ್ರಸ್ಟ್‌ನ ವೈದ್ಯಕೀಯ ಕಾಲೇಜು ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾ.25ಕ್ಕೆ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಇದೇ ಸಂದರ್ಭದಲ್ಲಿ ತಿಳಿಸಿದರು. ಪ್ರಧಾನಿಯವರಿಗೆ ಇನ್ನೂ ಅನೇಕ ಕಾರ್ಯಕ್ರಮಗಳಿರುವ ಕಾರಣ ಸಮಯದ ಅಭಾವದಿಂದ ಸರ್ಕಾರಿ ವೈದ್ಯಕೀಯ ಕಾಲೇಜು ಉದ್ಘಾಟಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ಒಂದು ವಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜು ಉದ್ಘಾಟನೆ ಮಾಡುವುದಾಗಿ ಅವರು ಹೇಳಿದರು.

ಬಸ್‌ ನಿಲ್ದಾಣ ಎಲ್ಲಾ ಕಡೆ ಕಟ್ಟಲಾಗಲ್ಲ, ಪುನಃ ಬಿಜೆಪಿ ಸರ್ಕಾರ ಬರುತ್ತೆ: ಸಚಿವ ಸೋಮಣ್ಣ

ಎಚ್ಡಿಕೆ ವಿರುದ್ದ ಕಿಡಿ: ಜಾತಿ ರಾಜಕಾರಣದ ಬಗ್ಗೆ ಎಚ್‌.ಡಿ. ಕುಮಾರಸ್ವಾಮಿ ಅವರು ಮಾಡಿರುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿಯವರು ಜಾತಿ ರಾಜಕಾರಣ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದರು. ಅವರು ಜಾತಿಯ ಬಗ್ಗೆ ಹೇಳಿಕೊಳ್ಳುವುದಿಲ್ಲವೇ, ರಾಜಕಾರಣದಲ್ಲಿ ಮಾಡುವುದೇ ಜಾತಿ, ನಾವು ಹೇಳುವುದು ಒಂದು, ಮಾಡುವುದು ಮತ್ತೊಂದು ಜಾತಿ ರಾಜಕಾರಣ ಯಾರು ಮಾಡುತ್ತಿಲ್ಲ ಎಂದು ಹೇಳಲಿ ಎಂದು ಕುಮಾರಸ್ವಾಮಿಗೆ ಸುಧಾಕರ್‌ ಸವಾಲೆಸೆದರು.

ಸಿದ್ದು ವರುಣಾದಿಂದಲೇ ಸ್ಪರ್ಧೆ ಉತ್ತಮ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರಕ್ಕಿಂತ ವರುಣಾದಿಂದಲೇ ಸ್ಪರ್ಧಿವುದು ಉತ್ತಮವೆಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು. ಬೆಂಗಳೂರು ಉತ್ತರ ವಿವಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರು ಇಲ್ಲಿ ದೃಷ್ಟಿಇಟ್ಟಿಕೊಂಡು, ಹಿಂದೆ ಗುಂಡು ಹಾರಿಸುತ್ತಾರೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ, ತಮ್ಮ ಮಾತು ಈಗ ಸತ್ಯವಾಗಿದೆ. ರಾಹುಲ್‌ ಗಾಂಧಿ ಹೇಳಿದ್ದರೂ ನಾನು ಅಲ್ಲಿಯೇ ನಿಲ್ಲುವುದಾಗಿ ಸಿದ್ದರಾಮಯ್ಯ ಅವರು ಹೇಳುತ್ತಿದ್ದರು. ಇದು ಅವರ ದೃಷ್ಟಿಕೋನದಿಂದ ಒಳ್ಳೆಯ ತೀರ್ಮಾನ ಎಂದು ನಾನು ಭಾವಿಸಿದ್ದೇನೆ ಎಂದ ಸಚಿವ ಸುಧಾಕರ್‌ ಹೇಳಿದರು.

ಆದಾಯ ಮೀರಿ ಶೇ.216ರಷ್ಟು ಆಸ್ತಿ: ರಾಮನಗರ ಉಪವಿಭಾಗಾಧಿಕಾರಿ ಮಂಜುನಾಥ್‌ ಅಮಾನತು

ಸಮ್ಮಿಶ್ರ ಸರ್ಕಾರ ಅಭಿವೃದ್ಧಿಗೆ ಮಾರಕ: ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ ಬಿಜೆಪಿ ಪ್ರಮುಖ ದ್ಯೇಯೋದ್ಧೇಶವಾಗಿದ್ದು ಬಿಜೆಪಿಗೆ ಮತ ನೀಡಿ ಅಭಿವೃದ್ಧಿಗೆ ಸಹಕರಿಸಿ ಎಂದು ಆರೋಗ್ಯ ಸಚಿವ ಡಾ.ಸುಧಾಕರ್‌ ತಿಳಿಸಿದರು. ನಗರದ ಕೋಟೆ ವೃತ್ತದಲ್ಲಿ ಏರ್ಪಡಿಸಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಇತಿಹಾಸದಲ್ಲಿ ಈವರೆಗೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನೇ ಆಯ್ಕೆ ಮಾಡಿ ಕಳುಹಿಸುತ್ತಿದ್ದು, ಯಾವುದೇ ಅಭಿವೃದ್ಧಿ ಕಾಣದೆ ಹಿಂದುಳಿದ ತಾಲೂಕಾಗಿದೆ. ಬಿಜೆಪಿ ಸರ್ಕಾರ ತಾಲೂಕಿನ ಅಭಿವೃದ್ಧಿಗಾಗಿ 75 ಕೋಟಿ ವೇಚ್ಚದಲ್ಲಿ ಹೈಟೆಕ್‌ ರೇಷ್ಮೆ ಮಾರುಕಟ್ಟೆಗೆ ಅನುಮೋದನೆ ನೀಡಿದೆ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಟ್ಟಡದ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಎಂದರು.

Follow Us:
Download App:
  • android
  • ios