ಬೆಂಗಳೂರು, (ಜೂನ್.22): ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರ ಮನೆ ಕೆಲಸದ ಸಿಬ್ಬಂದಿಗೂ ಕೊರೋನಾ ಪಾಸಿಟಿವ್ ದೃಢವಾಗಿದ್ದು, ಸಚಿವರ ಕುಟುಂಬಕ್ಕೆ ಕೊರೋನಾ ಭೀತಿ ಶುರುವಾಗಿದೆ.

"

ಬೆಂಗಳೂರಿನ ಸದಾಶಿವ ನಗರದಲ್ಲಿರೋ ನಿವಾಸದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸುಧಾಕರ್ ಅವರು ಇಂದು (ಸೋಮವಾರ) ಕರೆದ ಸಭೆಗೆ ಹೋಗದೇ ಗೈರಾಗಿದ್ದು, ಮತ್ತೊಮ್ಮೆ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಲು ತೀರ್ಮಾನಿಸಿದ್ದಾರೆ.

ಕೊರೋನಾ ಭೀತಿ: ಕರ್ನಾಟಕದ ಇಬ್ಬರು ಸಚಿವರು, ಓರ್ವ ಶಾಸಕ ಬಚಾವ್

ಇನ್ನು ಗುಟ್ಟಹಳ್ಳಿಯ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಭೇಟಿ ನೀಡಿದ್ದು, ಯಾರೆಲ್ಲ ಅವರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದರು ಎಂಬ ಮಾಹಿತಿ ಪಡೆದು ತೆರಳಿದರು.

ಈ ಹಿಂದೆ ಕೊರೋನಾ ಸೋಂಕಿತ ಕನ್ನಡ ಖಾಸಗಿ ಸುದ್ದಿ ವಾಹಿನಿ ಕ್ಯಾಮರಾಮನ್‌ ಸಂಪರ್ಕದಲ್ಲಿದ್ದ ಸುಧಾಕರ್ ಹೋಮ್ ಕ್ವಾರಂಟೈನ್‌ಗೆ ಒಳಗಾಗಿದ್ದರು. ಅಲ್ಲದೇ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದು, ನೆಗೆಟಿವ್ ವರದಿ ಬಂದಿತ್ತು. ಇದೀಗ ತಮ್ಮ ಮನೆಯ ಅಡುಗೆ ಭಟ್ಟನಿಗೆ ಕೊರೋನಾ ಇರುವುದರಿಂದ ಮತ್ತೊಮ್ಮೆ ಹೋಮ್ ಕ್ವಾರಂಟೈನ್‌ ಆಗಲು ನಿರ್ಧರಿಸಿದ್ದಾರೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"