ಕೊರೋನಾತಂಕ: ರಾಜ್ಯದ 5 ಸಚಿವರಿಗೆ ಸೋಂಕು ಟೆಸ್ಟ್!
5 ಸಚಿವರಿಗೂ ಈಗ ಕೊರೋನಾ ಭೀತಿ| ಅಶ್ವತ್ಥ, ಬೊಮ್ಮಾಯಿ, ಸುಧಾಕರ್ ಫಲಿತಾಂಶ ‘ನೆಗೆಟಿವ್’| ಆದರೂ ಈ ಮೂವರು ಸಚಿವರುಗಳು ಕ್ವಾರಂಟೈನ್‌ನಲ್ಲಿ| ಸೋಮಣ್ಣ, ಸಿ.ಟಿ.ರವಿ ಕೊರೋನಾ ಫಲಿತಾಂಶ ಬಾಕಿ| ಸೋಂಕಿತ ಟೀವಿ ಕ್ಯಾಮರಾಮ್ಯಾನ್ ಸಂಪರ್ಕಕ್ಕೆ ಬಂದಿದ್ದ ಸಚಿವರು| ಇದನ್ನು ಪ್ರಶ್ನಿಸಿದ್ದ ಡಿಕೆಶಿ, ಬಳಿಕ ತಪಾಸಣೆಗೆ ಒಳಗಾದ ಸಚಿವರು
ಬೆಂಗಳೂರು(ಏ.30): ಬೆಂಗಳೂರಿನಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದ ಖಾಸಗಿ ಸುದ್ದಿ ವಾಹಿನಿ ಕ್ಯಾಮೆರಾಮನ್ ಸಂಪರ್ಕಕ್ಕೆ ಬಂದಿದ್ದ ಉಪ ಮುಖ್ಯಮಂತ್ರಿ ಸೇರಿ ರಾಜ್ಯದ ಐದು ಮಂದಿ ಸಚಿವರಿಗೂ ಸೋಂಕು ಭೀತಿ ಸೃಷ್ಟಿಯಾಗಿದೆ.
"
ಗೃಹಸಚಿವ ಬಸವರಾಜ್‌ಬೊಮ್ಮಾಯಿ, ಡಿಸಿಎಂ ಅಶ್ವತ್‌್ಥ ನಾರಾಯಣ, ಸಚಿವರಾದ ಸೋಮಣ್ಣ, ಸಿ.ಟಿ.ರವಿ. ಸುಧಾಕರ್ ಅವರಿಗೆ ಕೊರೋನಾ ಸೋಂಕು ಭೀತಿ ಎದುರಾಗಿದೆ. ‘ಈ ಕಾರಣ ಎಲ್ಲರನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ನಡುವೆ, ಟ್ವೀಟ್ ಮಾಡಿರುವ ಸಚಿವರಾದ ಬಸವರಾಜ್ ಬೊಮ್ಮಾಯಿ, ಸುಧಾಕರ್ ಮತ್ತು ಅಶ್ವತ್‌್ಥ ನಾರಾಯಣ ಅವರು ತಾವು ಕ್ವಾರಂಟೈನ್‌ನಲ್ಲಿ ಇರುವುದಾಗಿ ಹೇಳಿದ್ದು, ತಪಾಸಣಾ ಫಲಿತಾಂಶ ‘ನೆಗೆಟಿವ್’ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನಿಬ್ಬರು ಮಂತ್ರಿಗಳಾದ ಸೋಮಣ್ಣ ಮತ್ತು ಸಿ.ಟಿ.ರವಿ ಅವರ ಪರೀಕ್ಷಾ ಫಲಿತಾಂಶಕ್ಕೆ ಕಾಯಲಾಗುತ್ತಿದೆ.
ಸೋಂಕು ದೃಢಪಟ್ಟಿದ್ದ ಕ್ಯಾಮೆರಾಮನ್ ನೀಡಿದ ಪ್ರಾಥಮಿಕ ಸಂಪರ್ಕ ಮಾಹಿತಿಯಲ್ಲಿ ಉಪ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರ ಹೆಸರು ಇದ್ದು, ಅವರು ಏಕೆ ಕ್ವಾರಂಟೈನ್‌ಗೆ ಒಳಗಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬುಧವಾರ ಟ್ವೀಟ್ ಮಾಡಿ ಪ್ರಶ್ನಿಸಿದ್ದರು.
ಲಾಕ್‌ಡೌನ್: ಪರವಾನಗಿ ಇದ್ರೂ ಡ್ರೈವರ್‌ಗೆ ಮನಬಂದಂತೆ ಪೊಲೀಸರಿಂದ ಥಳಿತ
ಇದರ ಬೆನ್ನಲ್ಲೇ ಆರೋಗ್ಯ ಇಲಾಖೆಯು, ‘ಐವರು ಸಚಿವರು ಕ್ಯಾಮೆರಾಮನ್ ಸಂಪರ್ಕಕ್ಕೆ ಬಂದಿದ್ದು ಅವರ ಸ್ವಾಬ್ ಪರೀಕ್ಷೆ ಮಾಡಲಾಗಿದೆ’ ಎಂದು ತಿಳಿಸಿದೆ.
ಸಚಿವರು ಕ್ವಾರಂಟೈನ್‌ಗೆ ಏಕೆ ಒಳಪಡಿಸಿಲ್ಲ ಎಂಬ ಪ್ರಶ್ನೆಗೆ ಎಲ್ಲಾ ಸಚಿವರು ಸೋಂಕಿತ ವ್ಯಕ್ತಿಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ಹೀಗಾಗಿ ಅವರನ್ನು ಪ್ರಾಥಮಿಕ ಸಂಪರ್ಕವಾಗಿ ಪರಿಗಣಿಸಿ ಕ್ವಾರಂಟೈನ್ ಮಾಡಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಲಾಕ್‌ಡೌನ್: ಪರವಾನಗಿ ಇದ್ರೂ ಡ್ರೈವರ್‌ಗೆ ಮನಬಂದಂತೆ ಪೊಲೀಸರಿಂದ ಥಳಿತ
ಕ್ವಾರಂಟೈನ್‌ನಲ್ಲಿ 3 ಸಚಿವರು:
ಕೊರೋನಾ ಸೋಂಕಿತ ಖಾಸಗಿ ಚಾನೆಲ್ ಕ್ಯಾಮೆರಾಮನ್ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಕಾರಣಕ್ಕೆ ತಾವು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿರುವುದಾಗಿ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ಬಗ್ಗೆ ಪ್ರತ್ಯೇಕವಾಗಿ ಟ್ವೀಟ್ ಮಾಡಿರುವ ಮೂವರೂ ನಾಯಕರು, ಉಭಯ ನಾಯಕರು ಕೊರೋನಾ ಪರೀಕ್ಷೆಗೆ ಒಳಗಾಗಿದ್ದು, ತಮ್ಮ ವರದಿಯೂ ನೆಗೆಟಿವ್ ಬಂದಿದೆ. ಆದರೂ ಕೂಡ ನಿಯಮಾವಳಿ ಪ್ರಕಾರ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿರುವುದಾಗಿ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಆರೋಗ್ಯಾಧಿಕಾರಿಗಳ ಸೂಚನೆಯ ಪ್ರಕಾರ ಭಾನುವಾರದಿಂದಲೇ ಸ್ವಯಂ ಕ್ವಾರಂಟೈನ್‌ನಲ್ಲಿದ್ದಾರೆ. ಯಾವುದೇ ಸಭೆಗಳನ್ನು ಮುಖಾಮುಖಿ ನಡೆಸಿಲ್ಲ ಎಂದು ಟ್ವೀಟರ್‌ನಲ್ಲಿ ಅವರು ತಿಳಿಸಿದ್ದಾರೆ. ಇನ್ನು ಸಚಿವ ಬಸವರಾಜ ಬೊಮ್ಮಾಯಿ ಅವರು ತಮ್ಮ ವರದಿ ನೆಗೆಟಿವ್ ಬಂದಿದ್ದು, ತಾವು ಆರೋಗ್ಯವಾಗಿದ್ದೇನೆ ಮತ್ತು ಸ್ವಯಂ ಕ್ವಾರಂಟೈನ್‌ನಲ್ಲಿ ಇದ್ದೇನೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇನ್ನು ಸಚಿವ ಕೆ. ಸುಧಾಕರ್ ಅವರು, ‘ಪಾಸಿಟಿವ್ ಬಂದಿರುವ ಪತ್ರಕರ್ತನ ಜತೆ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದೇನೆ. ವರದಿ ನೆಗೆಟಿವ್ ಬಂದಿದೆ. ಆದರೂ 7 ದಿನ ಕ್ವಾರಂಟೈನ್‌ನಲ್ಲಿರಲಿದ್ದೇನೆ’ ಎಂದಿದ್ದಾರೆ.