ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪ್ರಯತ್ನಿಸಬೇಕಿದೆ: ಗೃಹ ಸಚಿವ ಪರಮೇಶ್ವರ್
ಸದ್ಯಕ್ಕೆ ದಲಿತ ಮುಖ್ಯಮಂತ್ರಿ ವಿಚಾರ ಚರ್ಚೆ ಮಾಡದಿರುವುದೇ ಸೂಕ್ತ. ಇದನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಾರೆ. ಮತ ಹಾಕಿಸಿಕೊಳ್ಳಲು ದಲಿತರ ಮನ ವೊಲಿಕೆ ಮಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಮತ್ತೊಬ್ಬರು ಈಗ ಆ ವಿಚಾರ ಯಾಕೆ ಎನ್ನುತ್ತಾರೆ. ಹೀಗಾಗಿ ಸುಗಮ ಆಡಳಿತಕ್ಕಾಗಿ ಈ ವಿಚಾರ ಚರ್ಚಿಸಬಾರದು ಎಂದ ಗೃಹ ಸಚಿವ ಡಾ.ಜಿ. ಪರಮೇಶ್ವರ್
ಬೆಂಗಳೂರು(ಮಾ.10): ರಾಜ್ಯದಲ್ಲಿ ಪ್ರಸ್ತುತ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಸ್ಥಿರವಾದ ಸರ್ಕಾರವಿದೆ. ಹೀಗಾಗಿ ಈಗ ದಲಿತ ಮುಖ್ಯಮಂತ್ರಿ ಚರ್ಚೆಯೇ ಅಪ್ರಸ್ತುತ. ನಾವು ಕೇವಲ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಮಾತ್ರ ಪ್ರಯತ್ನಿಸಬೇಕಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ದಲಿತ ಮುಖ್ಯಮಂತ್ರಿ ವಿಚಾರ ಚರ್ಚೆ ಮಾಡದಿರುವುದೇ ಸೂಕ್ತ. ಇದನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಾರೆ. ಮತ ಹಾಕಿಸಿಕೊಳ್ಳಲು ದಲಿತರ ಮನ ವೊಲಿಕೆ ಮಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಾರೆ ಎಂದು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ ನಂತ್ರ ದಲಿತ ಸಿಎಂ ಬಗ್ಗೆ ದನಿ: ಸಚಿವ ಸತೀಶ್ ಜಾರಕಿಹೊಳಿ
ಮತ್ತೊಬ್ಬರು ಈಗ ಆ ವಿಚಾರ ಯಾಕೆ ಎನ್ನುತ್ತಾರೆ. ಹೀಗಾಗಿ ಸುಗಮ ಆಡಳಿತಕ್ಕಾಗಿ ಈ ವಿಚಾರ ಚರ್ಚಿಸಬಾರದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು.