Asianet Suvarna News Asianet Suvarna News

ಶಿವಮೊಗ್ಗದಲ್ಲಿ ಗಲಭೆಗೆ ಆಗುವ ಮುನ್ನವೇ ನಾವು ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದೆವು: ಸಚಿವ ಪರಮೇಶ್ವರ್

ಶಿವಮೊಗ್ಗದಲ್ಲಿ ಕಲ್ಲು ತೂರಾಟ ಪ್ರಕರಣವು ಕಾಂಗ್ರೆಸ್ ನಿಂದಲೇ ಎಂಬ ಈಶ್ವರಪ್ಪ ಹೇಳಿಕೆಗೆ ಅದಕ್ಕೆ ಆಗಲೇ ಜನ ಉತ್ತರ ಕೊಟ್ಟಿದ್ದಾರೆ. ಗಲಭೆ, ಆಗೋದಕ್ಕೆ ಮೊದಲೇ ನಾವು ಎಲ್ಲಾ ಪ್ರೀಕಾಷನ್ ತಗೊಂಡಿದ್ವಿ. ಆದ್ರೂ ಕೂಡಾ ಒಂದು ಸಣ್ಣ ಘಟನೆ ನಡೆದು ಹೋಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. 

minister dr g parameshwar said that there was a small commotion in shivamogga gvd
Author
First Published Oct 2, 2023, 10:23 PM IST

ವರದಿ: ಮಹಂತೇಶ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು

ತುಮಕೂರು (ಅ.02): ಶಿವಮೊಗ್ಗದಲ್ಲಿ ಕಲ್ಲು ತೂರಾಟ ಪ್ರಕರಣವು ಕಾಂಗ್ರೆಸ್ ನಿಂದಲೇ ಎಂಬ ಈಶ್ವರಪ್ಪ ಹೇಳಿಕೆಗೆ ಅದಕ್ಕೆ ಆಗಲೇ ಜನ ಉತ್ತರ ಕೊಟ್ಟಿದ್ದಾರೆ. ಗಲಭೆ, ಆಗೋದಕ್ಕೆ ಮೊದಲೇ ನಾವು ಎಲ್ಲಾ ಪ್ರೀಕಾಷನ್ ತಗೊಂಡಿದ್ವಿ. ಆದ್ರೂ ಕೂಡಾ ಒಂದು ಸಣ್ಣ ಘಟನೆ ನಡೆದು ಹೋಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಅದನ್ನ ಯಾವ ರೀತಿಯಾಗಿ ಕ್ರಮ ಕೈಗೊಳ್ಳಬೇಕು ಆ ರೀತಿಯಾಗಿ ಮಾಡಿದ್ದಾರೆ. ಸುಮನ್ನೆ ಅನಾವಶ್ಯಕವಾಗಿ ಮಾತನಾಡಿ ಪ್ರಚೋದನೆ ಮಾಡೋದು ಸರಿ ಕಾಣೋಲ್ಲ ಮಾನ್ಯ ಈಶ್ವರಪ್ಪನವರು ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.

ಮೆರವಣಿಗೆಯಲ್ಲಿ ತಲ್ವಾರ್ ಪ್ರದರ್ಶನ: ನಾನು ಕೂಡ ಈ ಕುರಿತು ವಿಚಾರ ಮಾಡಿದ್ದೇನೆ. ಮರದ ತುಂಡನ್ನ ಕತ್ತಿ ತರಹ ಮಾಡಿ ಬಣ್ಣ ಹಾಕಿ ಅದನ್ನ ಪ್ರದರ್ಶನ ಮಾಡಿದ್ದಾರೆ ಅಂತ ಎಸ್ ಪಿ ನನಗೆ ಮಾಹಿತಿ ಕೊಟ್ಟಿದ್ದಾರೆ. ಅಂತಹದ್ದು ಏನು ನಡೆದಿಲ್ಲ ಎಂದರು, ಯಾರಿಗೂ ಚಾಕು ಹಾಕಿದ್ರು, ಯಾರಿಗೋ ಕತ್ತಿಯಲ್ಲಿ ಹೊಡೆದಿದ್ದು, ಇಂತಹದ್ದನೆಲ್ಲಾ ಮಾತನಾಡಬಾರದು. ಮೊದಲೇ ನಾವು ಸಾಕಷ್ಟು ಪೊಲೀಸರನ್ನ ನಿಯೋಜನೆ ಮಾಡಿದ್ವಿ ಎಂದರು. ಮೊದಲೇಲ್ಲ ಶಿವಮೊಗ್ಗದಲ್ಲಿ ನಡೆದ ಘಟನೆಗಳ ಬಗ್ಗೆ ನಮಗೆ ಗೊತ್ತಿದೆ. ಹಾಗಾಗಿ ಪ್ರೀಕಾಷನ್ ತಗೊಂಡಿದ್ವಿ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.ಕಲ್ಲು ಹೊಡೆದಂತಹವರನ್ನ 50 ಜನರನ್ನ ಅರೆಸ್ಟ್ ಮಾಡಿದಿವಿ ಎಂದರು. ಸಿಸಿಟಿವಿಯಲ್ಲಿ ದೃಶ್ಯಗಳಲ್ಲಿ ಸೆರೆಯಾದವರನ್ನು ವಿಚಾರಣೆ ಮಾಡ್ತಿದಿವಿ. ಯಾವುದೇ ಗಲಭೆ ಈಗ ಇಲ್ಲ. ನಿನ್ನೆಯೇ ಎಲ್ಲವೂ ಮುಗಿದು ಹೋಗಿದೆ ಎಂದರು.

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಪತನ: ಸಂಸದ ಬಿ.ವೈ.ರಾಘವೇಂದ್ರ

ನಿಜವಾದ ತಲ್ವರ್ ಎಂಬ ಪ್ರಶ್ನೆಗೆ ಗರಂ ಆದ ಪರಮೇಶ್ವರ್: ನಿಜವಾದ ತಲ್ವಾರ್ ಅಂತ ಹೇಳ್ತಿದ್ದಾರೆ. ನಾನು ಅದನ್ನ ಹೋಗಿ ನೋಡಿದ್ನ, ನಿಜವಾದ ತಲ್ವಾರ್ ಇರಬಹುದು. ಆದ್ದರಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ‌. ಹೊರರಾಜ್ಯದಿಂದ ಹೊರ ಜಿಲ್ಲೆಯಿಂದಲೂ ಯಾರು ಬಂದಿಲ್ಲ ಎಂದರು. ಯಾರು ಹೊರಗಡೆಯಿಂದ ಬರಬಾರದು ಅಂತ ಸ್ಕ್ರೀನಿಂಗ್ ಮಾಡಿದ್ದಿವಿ. ಬೇಕಂತ ಆಗಿರಬಹುದು, ಅವರು ಕಲ್ಲು ಹೊಡೆದಿದ್ದಾರೆ ಅಂತ ಇವರು ಕಲ್ಲು ಹೊಡೆದಿದ್ದಾರೆ. ಸೆಲೆಕ್ಟಿವ್ ಆಗಿ ಅಂತ ಪೊಲೀಸರಿಗೆ ಏನು ಹೊಡೆದಿಲ್ಲ ಎಂದರು.ಸಾಮೂಹಿಕ ಕಲ್ಲು ತೂರಿದಾಗ ಪೊಲೀಸರ ಮೇಲೆ ಕಲ್ಲು ಬಿದ್ದಿದೆ. ಅವರು, ಇವರು ಅಂತ ನಿಮಗೆ ಎಕ್ಸಪ್ಲೀಶನ್ ಕೊಡುವಂತಹ ಅಗತ್ಯತೆ ಇಲ್ಲ ತಿಳಿದುಕೊಳ್ಳಿ. 

ಕಾಂಗ್ರೆಸ್ ಸೋಲಿಸಲು ಬಿಜೆಪಿ-ಜೆಡಿಎಸ್ ಒಂದಾಗಿದೆ: ನಿಖಿಲ್ ಕುಮಾರಸ್ವಾಮಿ

ಯಾವುದೇ ದೊಡ್ಡ ಪ್ರಮಾಣದಲ್ಲಿ ಅಹಿತಕರ ಘಟನೆ ನಡೆದಿಲ್ಲ ಎಂದರು. ಕಲ್ಲು ತೂರಾಟ ಮಾಡಿದವರ ವಿರುದ್ಧ ಯಾವ ರೀತಿ ಕಾನೂನು ಕ್ರಮ ಕೈಗೊಳ್ಳಬೇಕು ಆ ರೀತಿ ಕೈಗೊಂಡಿದ್ದಾರೆ. ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ತಿವಿ. ನಾವು ಪರಿಸ್ಥಿತಿ ಲಾಭ ತೆಗೆದುಕೊಳ್ಳಲು ಬಿಡಲ್ಲ ಎಂದು ಹೇಳಿದರು. ನಾನು ಶಿವಮೊಗ್ಗಕ್ಕೆ ಹೋಗುವ ಅಗತ್ಯತೆ ಇಲ್ಲ.ಅಂತಹದ್ದು ಏನು ಆಗಿಲ್ಲ ಸುಮ್ನೆ ನೀವು ಏನು ಹೇಳ್ಬೇಡಿ. ಘಟನೆಗಳು ದೊಡ್ಡದಾಗೋಕೆ ನಾವು ಬಿಡೋದಿಲ್ಲ ಎಂದು ತಿಳಿಸಿದರು. ಸರ್ಕಾರ 6 ತಿಂಗಳಲ್ಲಿ ಬಿಳುತ್ತೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಆಗಿ ಕುಮಾರಸ್ವಾಮಿ ಅವರು ಹೇಳ್ತಾನೆ ಇರ್ತಾರೆ. ನಾವು ಸರ್ಕಾರ ನಡೆಸ್ತಾನೆ ಇರ್ತಿವಿ ಎಂದರು.

Follow Us:
Download App:
  • android
  • ios