Asianet Suvarna News Asianet Suvarna News

ಡಿಸಿಎಂ ಹುದ್ದೆ ಸಮರ್ಥಿಸಿಕೊಂಡ ಸಚಿವ ಪರಮೇಶ್ವರ್‌

ಹೈಕಮಾಂಡ್ ಇದರ ಬಗ್ಗೆ ವಿಶ್ಲೇಷಣೆ ಮಾಡಿ, ಪರಿಶೀಲಿಸಿ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಅನುಕೂಲ ಆಗಬಹುದು ಎಂದು ಇದೇ ವೇಳೆ ಜಾರಕಿಹೊಳಿ ಅವರ ವಾದವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡ ಪರಮೇಶ್ವರ್‌ 

Minister Dr G Parameshwar Defended the DCM Post in Karnataka grg
Author
First Published Dec 30, 2023, 6:43 AM IST

ತುಮಕೂರು(ಡಿ.30):  ಡಿಸಿಎಂ ಹುದ್ದೆ ಸಂಬಂಧಿಸಿ ಸತೀಶ್ ಜಾರಕಿಹೊಳಿ ತಮ್ಮ ಅಭಿಪ್ರಾಯವನ್ನು ಹೈಕಮಾಂಡ್‌ ಮುಂದೆ ಹೇಳಿದ್ದಾರೆ. ಅದನ್ನು ಪರಿಗಣಿಸೋದು, ಬಿಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಅವರ ದೃಷ್ಟಿಯಲ್ಲಿ ಆಯಾ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಹುದ್ದೆ ಕೊಟ್ಟರೆ ಉತ್ತಮ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಕಾಂಗ್ರೆಸ್‌ನತ್ತ ವಾಲಬಹುದು ಎಂಬ ಅಭಿಪ್ರಾಯ ಅವರಲ್ಲಿದೆ‌ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದರು. 

ಹೈಕಮಾಂಡ್ ಇದರ ಬಗ್ಗೆ ವಿಶ್ಲೇಷಣೆ ಮಾಡಿ, ಪರಿಶೀಲಿಸಿ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಅನುಕೂಲ ಆಗಬಹುದು ಎಂದು ಇದೇ ವೇಳೆ ಜಾರಕಿಹೊಳಿ ಅವರ ವಾದವನ್ನು ಪರಮೇಶ್ವರ್‌ ಪರೋಕ್ಷವಾಗಿ ಸಮರ್ಥಿಸಿಕೊಂಡರು.

PSI Scam: ಎಚ್ಡಿಕೆ, ಇತರರಿಗೆ ಯಾಕೆ ನೋಟಿಸ್‌ ನೀಡಿದ್ದಾರೆಂದು ಗೊತ್ತಿಲ್ಲ: ಸಚಿವ ಪರಮೇಶ್ವರ್‌

ಸಿಎಂ, ಡಿಸಿಎಂ ಹುದ್ದೆ ಕೊಡುವಂತೆ ಕೇಳಿಲ್ಲ-ಸತೀಶ್‌

ಬೆಳಗಾವಿ: ಸಿಎಂ, ಡಿಸಿಎಂ ಹುದ್ದೆ ನೀಡುವಂತೆ ನಾನೇನೂ ಕೇಳಿಲ್ಲ. ನನಗೆ ಹುದ್ದೆ ನೀಡುವುದು, ಬಿಡುವುದು ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಡಿ.24 ರಂದು ಮಾತನಾಡಿದ್ದ ಅವರು, ನಾನು ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದು ನಿಜ. ಆದರೆ, ನಾನು ಸಿಎಂ, ಡಿಸಿಎಂ ಹುದ್ದೆ ಕೊಡುವಂತೆ ಕೇಳಿಲ್ಲ. ಲೋಕಸಭಾ ಚುನಾವಣೆ ವಿಚಾರವಾಗಿ ಚರ್ಚೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios