ಬೆಂಗಳೂರು [ನ.12]: ಸಿದ್ಧಾಂತಕ್ಕಾಗಿ ಪಕ್ಷದಲ್ಲಿರುವವರಿಗೆ 2 ನೇ ಆಯ್ಕೆ ಇರುವುದಿಲ್ಲ, ಆದರೆ, ವೈಯಕ್ತಿಕ ನೆಲೆಯಲ್ಲಿ ಆಲೋಚನೆ ಮಾಡುವವರು ಪಕ್ಷ ತೊರೆಯುವ ಆಲೋಚನೆ ಮಾಡಲಿದ್ದಾರೆ. ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವವ ರು ಉದ್ಧಾರವಾಗುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಬಿಜೆಪಿ ತೊರೆದ ರಾಜು ಕಾಗೆ ಅವರಿಗೆ ತಿರುಗೇಟು ನೀಡಿದ್ದಾರೆ. 

ಬಿಜೆಪಿ ಕಚೇರಿಯಲ್ಲಿ ಸೋಮವಾರ ಪಕ್ಷದ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಪಕ್ಷವು ಸಿದ್ಧಾಂತ ಹೊಂದಿರುವ ರಾಜಕೀಯ ಪಕ್ಷವಾಗಿದೆ. ಪಕ್ಷದಿಂದ ಹೊರಗೆ ಹೋದವರು ಕೆಡಲಿದ್ದಾರೆಯೇ ಹೊರತು ಪಕ್ಷವಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಿಂದೆ ಇಂತಹ ಹಲವು ಘಟನೆಗಳು ಜರುಗಿವೆ. ಈ ಅನುಭವದ ನಂತರವೂ ಪಕ್ಷದಿಂದ ಹೊರ ಹೋದರೆ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ. ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಉಪಚುನಾವಣೆ ಯಲ್ಲಿ ಕಣಕ್ಕಿಳಿಯಲು ಮುಂದಾಗಿರುವ ಶರತ್ ಬಚ್ಚೇಗೌಡ ಮತ್ತವರ ಕುಟುಂಬಕ್ಕೆ ಪಕ್ಷವು ಸಾಕಷ್ಟು ಅನುಕೂಲ ಮಾಡಿ ಕೊಟ್ಟಿದೆ ಎಂದು ಹೇಳಿದರು.