ಮತ್ತೆ ಲಾಕ್‌ಡೌನ್‌ ಬಗ್ಗೆ ಸುಳಿವು ಕೊಟ್ಟ ಸಚಿವ

ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಲ್ ಲಾಕ್‍ಡೌನ್ ಮಾತು ಕೇಳಿ ಬಂದಿದೆ. ಇದರ ಬೆನ್ನಲ್ಲೇ ಸಚಿವರು ಅವರು ಮತ್ತೆ ಲಾಕ್‍ಡೌನ್ ಮಾಡುವ ಕುರಿತ ಸುಳಿವನ್ನು ನೀಡಿದ್ದಾರೆ.

minister CT Ravi Hints again Lockdown for Covid19 rbj

ಬೆಂಗಳೂರು, (ಸೆ.24): ಕೊರೋನಾ ಸೋಂಕಿನ ಪ್ರಮಾಣ ದಿನೇ- ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್‌ಡೌನ್ ಬಗ್ಗೆ ರ್ಚೆಗಳು ಆಗುತ್ತಿವೆ. ಇದರ ಮಧ್ಯೆ  ಸಚಿವ ಸಿಟಿ ರವಿ ಅವರು ಲಾಕ್‌ಡೌನ್ ಸುಳಿವು ಕೊಟ್ಟಿದ್ದಾರೆ.

 ಇಂದು (ಗುರುವಾರ) ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೋನಾ ನಮ್ಮ ಊಹೆಗೂ ನಿಲುಕದ ವೈರಸ್ ಆಗಿದ್ದು, ಈ ಬಗ್ಗೆ ಯೋಚನೆ ಮಾಡಬೇಕಾದ ಸ್ಥಿತಿ ಬಂದಿದೆ ಎಂದರು.

ಕರ್ನಾಟಕದ ಪ್ರಮುಖ ರಾಜಕೀಯ ನಾಯಕರನ್ನ ಬಲಿ ಪಡೆದ ಕೊರೋನಾ

ಹಲವು ಕೊರೋನಾ ಪ್ರಕರಣದಲ್ಲಿ 90 ವರ್ಷದವರೂ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ 30 ವರ್ಷಗಳ ವಯಸ್ಸಿನವರು ಸಾವನ್ನಪ್ಪುತ್ತಿದ್ದಾರೆ. ಈಗ ಕೊರೋನಾವನ್ನು ನಿರ್ಲಕ್ಷ್ಯ ಮಾಡುವ ಸ್ಥಿತಿ ಇಲ್ಲ. ಅಚಾನಕ್ ಸಾವುಗಳು ಸಂಭವಿಸುತ್ತಿದೆ. ಆದ್ದರಿಂದ ಆರೋಗ್ಯ ಇಲಾಖೆ ನೀಡಿರುವ ಎಲ್ಲಾ ಎಚ್ಚರಿಕೆಗಳನ್ನು ವೈಯುಕ್ತಿಕವಾಗಿಯೂ ಅನುಸರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂಬ ಸಂದೇಶ ಲಭಿಸಿದೆ ಎಂದು ಹೇಳಿದರು.

ಬುಧವಾರ ಸಿಎಂಗಳ ಸಭೆ ಬಳಿಕ ಮತ್ತೆ 2 ದಿನ ಲಾಕ್‌ಡೌನ್ ಮಾಡಿದ್ರೆ ಹೇಗೆ..? ಆರ್ಥಿಕತೆ ಮೇಲೆ ಹೊಡೆತ ಬೀಳುತ್ತಾ? ಎನ್ನುವ ಚರ್ಚೆಗಳು ಸಹ ನಡೆದಿವೆ.
 

Latest Videos
Follow Us:
Download App:
  • android
  • ios