ಅತ್ತ ಜಾರಕಿಹೊಳಿ ದಿಲ್ಲಿಗೆ, ಇತ್ತ ಯೋಗೇಶ್ವರ್-ಯತ್ನಾಳ್ ರಹಸ್ಯ ಮಾತುಕತೆ
* ಕುತೂಹಲ ಮೂಡಿಸಿದ ಬಿಎಸ್‌ವೈ ವಿರೋಧಿಗಳು ಭೇಟಿ
* ಯತ್ನಾಳ್ ಭೇಟಿಯಾದ ಸಚಿವ ಸಿ.ಪಿ. ಯೋಗೇಶ್ವರ್
* ವಿಜಯಪುರದ ಹೋಟೆಲ್‌ನಲ್ಲಿ ರಹಸ್ಯ ಮಾತುಕತೆ
ವಿಜಯಪುರ, (ಜೂನ್.29): ಒಂದೆಡೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ದೆಹಲಿ ದಂಡೆಯಾತ್ರೆ ಕೈಗೊಂಡಿದ್ರೆ, ಇತ್ತ ಸಚಿವ ಸಿ.ಪಿ.ಯೋಗೇಶ್ವರ್ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಭೇಟಿಯಾಗಿರುವುದು ರಾಜ್ಯ ಬಿಜೆಪಿಯಲ್ಲಿ ಸಂಚಲಚನ ಮೂಡಿಸಿದೆ.
ಹೌದು...ಕಲಬುರಗಿಯಿಂದ ವಿಜಯಪುರ ಜಿಲ್ಲೆಗೆ ಆಗಮಿಸಿರೋ ಪ್ರವಾಸೋದ್ಯಮ ಇಲಾಖೆ ಸಚಿವ ಯೋಗೇಶ್ವರ್ ಇಂದು (ಮಂಗಳವಾರ) ಯತ್ನಾಳ್ ಅವರನ್ನ ನಗರದ ಹೊರವಲಯದಲ್ಲಿರುವ ಹೋಟೆಲ್ ಒಂದರಲ್ಲಿ ಭೇಟಿಯಾದರು. ಈ ವೇಳೆ ಕೆಲ ಕಾಲ ರಹಸ್ಯ ಮಾತುಕತೆಯನ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ದಿಲ್ಲಿಯಲ್ಲಿ ಸಾಹುಕಾರ, RSS ಮುಖಂಡರೊಬ್ಬರ ಮನೆಯಲ್ಲಿ ಮಹತ್ವದ ಚರ್ಚೆ
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಈ ಉಭಯ ನಾಯಕರ ರಹಸ್ಯ ಭೇಟಿಯ ಮಾತುಕತೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿವೈ ವಿಜಯೇಂದ್ರ ವಿರುದ್ಧ ಬಂಡಾಯವೆದ್ದಿದ್ದಾರೆ. ಅಲ್ಲದೇ ಸಿಪಿ ಯೋಗೇಶ್ವರ್ ಕೂಡ ಇತ್ತೀಚೆಗೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಪಿ ಯೋಗೇಶ್ವರ್ ಅವರು ಯತ್ನಾಳ್ರನ್ನ ಭೇಟಿಯಾಗಿರೋದು ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಸಿಎಂ ವಿರೋಧಿಗಳನ್ನ ಮತ್ತೆ ಒಂದು ಗೂಡಿಸುತ್ತಿದ್ದಾರೆ ಅನ್ನೋ ಚರ್ಚೆ ಬಿಜೆಪಿಯಲ್ಲಿ ಶುರುವಾಗಿದೆ. ಇನ್ನು ಅತ್ತ ರಮೇಶ್ ಜಾರಕಿಹೊಳಿ ಅವರು ಸಹ ಕೆಲ ರಾಜ್ಯ ನಾಯಕರ ವಿರುದ್ಧ ತೊಡೆತಟ್ಟಿ ನಿಂತಿರುವ ಜಾರಕಿಹೊಳಿ ಹೈಕಮಾಂಡ್ ನಾಯಕ ಭೇಟಿ ಮಾಡಲು ದಿಲ್ಲಿಗೆ ಹೋಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.