ಎಲ್ಲೆಡೆ ಕಾಂಗ್ರೆಸ್ ಪರ ಒಲವು, ಪ್ರಧಾನಿ ಮೋದಿಗೆ ನೋವು: ಸಚಿವ ಚಲುವರಾಯಸ್ವಾಮಿ
36 ಸಾವಿರ ಕೋಟಿಯ ಗ್ಯಾರಂಟಿ ನಾವು ಜಾರಿ ಮಾಡಿದ್ದೇವೆ, ವರ್ಷಕ್ಕೆ ಒಟ್ಟು 56 ಸಾವಿರ ಕೋಟಿ ಆಗುತ್ತೆ. ಈಗ ಎಲ್ಲಾ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಹೊಸ ಕಾಮಗಾರಿಯೂ ತೆಗೆದುಕೊಳ್ಳುವ ಎಲ್ಲಾ ಪ್ರಯತ್ನವೂ ನಡೆಸಲಾಗಿದೆ, ಇದನ್ನ ತಡೆಯಲು ಆಗದೇ ಮೋದಿ ಹೀಗೆ ಹೇಳುತ್ತಾರೆ: ಸಚಿವ ಚಲುವರಾಯಸ್ವಾಮಿ
ರಾಯಚೂರು(ನ.07): ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಯೋಜನೆಗಳಿಗೆ ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲೆಡೆ ಕಾಂಗ್ರೆಸ್ ಪರ ಒಲವು ಹೆಚ್ಚಾಗುತ್ತಿದ್ದು, ಇದರಿಂದ ಪ್ರಧಾನಿ ಮೋದಿಗೆ ನೋವಾಗುತ್ತಿದೆ. ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರನ್ನು ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ನಗರದಲ್ಲಿ ಮಾತನಾಡಿ, ರಾಜ್ಯದ ಲೂಟಿಗೆ ಸಿಎಂ ಮತ್ತು ಡಿಸಿಎಂ ಪೈಪೋಟಿ ನೀಡುತ್ತಿದ್ದಾರೆ ಎಂದು ಮೋದಿ ನೀಡಿರುವ ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ರಾಜ್ಯದ ಜನರು ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಾರೆ. ಅವರಿಗೆ ನಮ್ಮ ಮೇಲೆ ವಿಶ್ವಾಸವಿದ್ದು, ಅದರಂತೆಯೇ ಕಾಂಗ್ರೆಸ್ ಸರ್ಕಾರ ಸಹ ಕಳೆದ ನಾಲ್ಕೈದು ತಿಂಗಳಿನಿಂದ ಜನಪರವಾದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಹಿಂದೆ ಪ್ರಧಾನಿ ಮೋದಿ ರಾಜ್ಯದಲ್ಲಿ 26 ಕಾರ್ಯಕ್ರಮಗಳನ್ನು ಮಾಡಿದ್ದ ಬಿಜೆಪಿಯನ್ನು ಜನರು ಸೋಲಿಸಿದ್ದಾರೆ. ಇದೀಗ ಲೋಕಸಭಾ, ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪೂರಕವಾಗಿವೆ. ಮಧ್ಯಪ್ರದೇಶ, ಅಸ್ಸಾಂ, ರಾಜಸ್ಥಾನ, ತೆಲಂಗಾಣ ಎಲ್ಲೆಡೆಯೂ ಕಾಂಗ್ರೆಸ್ ಪರ ಒಲವು ಕಾಣುತ್ತಿದೆ, ಇದರಿಂದಾಗಿ ಮೋದಿಯವರಿಗೆ ನೋವು ಆಗುತ್ತಿದೆ. ಅದಕ್ಕಾಗಿಯೇ ಅನಾವಶ್ಯಕ ಟೀಕೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಜಾರಕಿಹೊಳಿ ಹೇಳಿಕೆ ರಾಜಕೀಯ ಪ್ರೇರಿತ: ಸಚಿವ ಶರಣ ಪ್ರಕಾಶ ಪಾಟೀಲ
36 ಸಾವಿರ ಕೋಟಿಯ ಗ್ಯಾರಂಟಿ ನಾವು ಜಾರಿ ಮಾಡಿದ್ದೇವೆ, ವರ್ಷಕ್ಕೆ ಒಟ್ಟು 56 ಸಾವಿರ ಕೋಟಿ ಆಗುತ್ತೆ. ಈಗ ಎಲ್ಲಾ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಹೊಸ ಕಾಮಗಾರಿಯೂ ತೆಗೆದುಕೊಳ್ಳುವ ಎಲ್ಲಾ ಪ್ರಯತ್ನವೂ ನಡೆಸಲಾಗಿದೆ, ಇದನ್ನ ತಡೆಯಲು ಆಗದೇ ಮೋದಿ ಹೀಗೆ ಹೇಳುತ್ತಾರೆ ಎಂದರು.