Asianet Suvarna News Asianet Suvarna News

ಯಾರಿಗೆ ಯೋಗ ಇದೆಯೋ ಅವರು ಸಿಎಂ ಆಗುತ್ತಾರೆ: ಸಚಿವ ಬಿ.ಸಿ.ಪಾಟೀಲ್

ಯಾರಿಗೆ ಯೋಗ ಇದೆಯೋ ಅವರು ಸಿಎಂ ಆಗುತ್ತಾರೆ. ಅದಕ್ಕೆ ಯೋಗ ಇರಬೇಕು, ಯೋಗ್ಯತೆಯೂ ಇರಬೇಕು ಎಂದು ಕೃಷಿ ಸಚಿವ ಬಿ.‌ಸಿ. ಪಾಟೀಲ್ ಹೇಳಿದ್ದಾರೆ. 

Minister BC Patil Talks About Next CM of Karnataka in Davanagere gvd
Author
Bangalore, First Published Jun 11, 2022, 10:01 PM IST

ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್, ದಾವಣಗೆರೆ

ದಾವಣಗೆರೆ (ಜೂ.11): ಯಾರಿಗೆ ಯೋಗ ಇದೆಯೋ ಅವರು ಸಿಎಂ ಆಗುತ್ತಾರೆ. ಅದಕ್ಕೆ ಯೋಗ ಇರಬೇಕು, ಯೋಗ್ಯತೆಯೂ ಇರಬೇಕು ಎಂದು ಕೃಷಿ ಸಚಿವ ಬಿ.‌ಸಿ. ಪಾಟೀಲ್ ಹೇಳಿದ್ದಾರೆ. ಮಾಜಿ ಸಿಎಂ ಬಿ.‌ಎಸ್. ಯಡಿಯೂರಪ್ಪರ ಪುತ್ರ ಬಿ.ವೈ.ವಿಜಯೇಂದ್ರ ಮುಂದೆ ಸಿಎಂ ಆಗುವ ಚರ್ಚೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ದಾವಣಗೆರೆ ತಾಲೂಕಿನ ನಲ್ಕುಂದ ಗ್ರಾಮದಲ್ಲಿ ನೂತನ ಶಾಲೆ ಉದ್ಘಾಟನೆಗೆ ಆಗಮಿಸಿ  ಮಾತನಾಡಿದ ಅವರು, ಸಿಎಂ ಆಗಲು ಜನರ ಹಾಗೂ ಹೈಕಮಾಂಡ್ ಆಶೀರ್ವಾದ ಇರಬೇಕು. ನಾಳೆ ರವಿ ಅಣ್ಣ ಅಂದರೆ ಶಾಸಕ ಎಸ್. ಎ.‌ರವೀಂದ್ರನಾಥ್ ಅವರೂ ಸಹ ಸಿಎಂ ಆಗಬಹುದು ಎಂದು ಹಾಸ್ಯ ಮಾಡಿದರು. 

ದೇಶಾದ್ಯಂತ ಮುಸ್ಲಿಮರು ಪ್ರತಿಭಟನೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹೇಳಿಕೆ ಕೊಟ್ಟು 15 ದಿನವಾಗಿದೆ. ಈಗ ಪ್ರತಿಭಟನೆ ಮಾಡುತ್ತಿದ್ದಾರೆ. ಯಾರೋ ದುರುದ್ದೇಶದಿಂದ ಈ ರೀತಿ ಮಾಡ್ತಿದ್ದಾರೆ. ವ್ಯವಸ್ಥಿತ ಸಂಚು ನಡೆಸಿ ಈ ರೀತಿ ಮಾಡುತ್ತಿದ್ದಾರೆ. ಕಾನೂನು ಇದೆ. ಅಲ್ಲಿ ಪ್ರಶ್ನೆ ಮಾಡಬಹುದಿತ್ತು. ಪ್ರತಿಭಟನೆ ನಡೆಸಿ ಸಾರ್ವಜನಿಕ ಆಸ್ತಿ ನಷ್ಟ ಮಾಡುವುದು ಸರಿಯಲ್ಲ ಎಂದು ಹೇಳಿದರು. ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂವರು ಗೆಲ್ಲಲು ಪ್ರಧಾನಿ ನರೇಂದ್ರ ಮೋದಿಯವರ ಅಡಳಿತ, ಬಸವರಾಜ ಬೊಮ್ಮಾಯಿ ಆಡಳಿತ, ಬಿಜೆಪಿ ಜನಪರ ಕಾಳಜಿಯೇ ಕಾರಣ. ಬಿಜೆಪಿ ಅಭಿವೃದ್ಧಿ ಕಾರ್ಯ ಮೆಚ್ಚಿ ಮತ ಹಾಕಿರಬಹುದು. 

Davanagere: ಮನೆ ಕಟ್ಟಿಸಬೇಕೆಂದಿದ್ದ ಹಣದಲ್ಲಿ ಶಾಲಾ ಕೊಠಡಿ ನಿರ್ಮಿಸಿದ ನೌಕರ

ಕಾಂಗ್ರೆಸ್, ಜೆಡಿಎಸ್‌ನಿಂದ ಇನ್ನು ಜಾಸ್ತಿ ಜನ ಬಿಜೆಪಿಗೆ ಬರುವವರಿದ್ದಾರೆ. ಈಗಲೇ ಹೇಳಿದರೆ ಅವರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತಾರೆ. ಅವರು ಬಂದಾಗ ನಿಮಗೆ ಗೊತ್ತಾಗಲಿದೆ. ಆ ಪಕ್ಷಗಳಲ್ಲಿ  ಪ್ರೀತಿ ಕಡಿಮೆಯಾದವರೆಲ್ಲಾ ಬಿಜೆಪಿ  ಬರುತ್ತಾರೆ ಎಂದರು. ಸಚಿವ ಸಂಪುಟ ವಿಚಾರವಾಗಿ ಸಿಎಂ ಬೊಮ್ಮಯಿ ಅವರನ್ನು ಕೇಳಿ. ಚುನಾವಣೆ ಮುಗಿದಿದೆ ಈಗ ಸಚಿವ ಸಂಪುಟ ಆಗಬಹುದು ಎಂದು ತಿಳಿಸಿದರು. ಪಠ್ಯಪುಸ್ತಕ ವಿವಾದ ಬಿಟ್ಟರೆ ಕಾಂಗ್ರೆಸ್ ನವರಿಗೆ ಬೇರೆ ಯಾವುದೇ ವಿಷಯಗಳಿಲ್ಲ.‌ಹಾಗಾಗಿ ಪ್ರತಿಭಟನೆ ಮಾಡುವುದು ಹೇಳಿಕೆಗಳನ್ನು ಕೊಡುವುದನ್ನು ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ದೇಶದಲ್ಲಿ ಅನ್ನವನ್ನು ಸೃಷ್ಟಿ ಮಾಡುವ ಶಕ್ತಿ ರೈತರಿಗೆ ಮಾತ್ರ ಇದೆ: ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಕೃಷಿ ಸಚಿವ  ಬಿಸಿ ಪಾಟೀಲ್ ರೈತರ ಜೀವನದಲ್ಲಿ ಬದಲಾವಣೆ ತರಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ರೈತರು ಸಾಲಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ರಸಗೊಬ್ಬರಗಳಿಗೆ ಸಹಾಯಧನ ಒದಗಿಸುತ್ತಿದೆ. 53 ಲಕ್ಷ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಜಾರಿ ಮಾಡಿದೆ ಎಂದರು. ಕೃಷಿ ಪದ್ಧತಿಯಲ್ಲಿ ಸಮಗ್ರ ಬದಲಾವಣೆ ತರಬೇಕು ಎನ್ನುವ ಉದ್ದೇಶ ಹೊಂದಲಾಗಿದೆ. ರೈತರು ಸಮಗ್ರ ಕೃಷಿ ನೀತಿ ಅಳವಡಿಸಿಕೊಳ್ಳಬೇಕು, ಬಿತ್ತನೆ ಮಾಡುವ ಮುನ್ನ ಮಣ್ಣಿನ ಪರೀಕ್ಷೆ ಮಾಡಿಸಬೇಕು. 

ಭೂಮಿಗೆ ಬೇಕಾದ ಅಗತ್ಯ ಪೋಷಕಾಂಶ ಮತ್ತು ಲವಣಾಂಶಗಳನ್ನು ಒದಗಿಸುವ ಕೆಲಸ ಮಾಡಿದಾಗ ಮಾತ್ರ ಹೆಚ್ಚಿನ ಇಳುವರಿ ಪಡೆದು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ತಿಳಿಸಿದರು. ರಾಜ್ಯದ ಎಲ್ಲಾ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ರೈತರ ಮಕ್ಕಳಿಗೆ ಶೇ.50ರಷ್ಟು ಮೀಸಲಾತಿ ಜಾರಿ ಮಾಡಲಾಗಿದೆ. ರೈತ ವಿದ್ಯಾನಿಧಿ ಯೋಜನೆ ಮೂಲಕ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಜಾರಿಗೊಳಿಸಲಾಗಿದೆ. ವಿಶೇಷವಾಗಿ ಎಲ್ಲಾ ವರ್ಗದ  ರೈತರ ಹೆಣ್ಣುಮಕ್ಕಳಿಗೆ ರೂ.2000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಬಿತ್ತನೆ ಸಮಯದಲ್ಲಿ ಭೂಮಿಯನ್ನು ಉಳುಮೆ ಮಾಡಲು ಪ್ರತಿ ಒಂದು ಎಕರೆಗೆ ಲೀಟರ್ ಗೆ 25.ರೂ ನಂತೆ ಗರಿಷ್ಠ 10 ಲೀಟರ್ ವರೆಗೆ 250.ರೂ ಡೀಸೆಲ್ ಸಬ್ಸಿಡಿ ನೀಡಲಾಗುತ್ತಿದೆ, ಹನಿ ನೀರಾವರಿಗೆ ಶೇ.90 ರಷ್ಟು ಸಹಾಯಧನ ಒದಗಿಸಲಾಗುತ್ತಿದೆ.

Davanagere: ಚಿಕನ್ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಂದ ಕಿರಾತಕ ಪತಿ

ಒಟ್ಟಾರೆ ರೈತರನ್ನು ಸಬಲೀಕರಣಗೊಳಿಸಲು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ ಎಂದರು. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎ ರವೀಂದ್ರನಾಥ್ ಮಾತನಾಡಿ, ಆಧುನಿಕ ದಿನಗಳಲ್ಲಿ ಅನೇಕರು ಹಳ್ಳಿಗಳಲ್ಲಿ ಓದಿ ದೊಡ್ಡ ದೊಡ್ಡ ಮಹಾನಗರಗಳನ್ನು ಸೇರಿ ತಾವು ಹುಟ್ಟಿದ ಊರನ್ನು ಮರೆಯುತ್ತಾರೆ. ಇಂತಹ ವರ್ತಮಾನ ಕಾಲದಲ್ಲಿ ದಯಾನಂದ ಮತ್ತು ಕುಟುಂಬದವರ ಸಾಮಾಜಿಕ ಸೇವೆ ಅನೇಕರಿಗೆ ಆದರ್ಶವಾಗಲಿ. ರೈತರಿಗೆ ಬೆಂಬಲ ಬೆಲೆ ಹಾಗೂ ಟ್ರ್ಯಾಕ್ಟರ್ ಖರೀದಿಗೆ ಸಹಾಯಧನ ಒದಗಿಸುವಂತೆ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಿ ಎಂದು ಕೃಷಿ ಸಚಿವರಿಗೆ ಒತ್ತಾಯಿಸಿದರು.

Follow Us:
Download App:
  • android
  • ios