ಮತ್ತೆ ತಮ್ಮ ಆಸೆಯನ್ನು ಬಹಿರಂಗಗೊಳಿಸಿದ ಶ್ರೀರಾಮುಲು: ಹೈಕಮಾಂಡ್‌ಗೆ ಸಂದೇಶ ಕೊಟ್ರಾ?

ತಾವು ಉಪ ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದ ಸಚಿವ ಬಿ.ಶ್ರೀರಾಮುಲು, ಇದೀಗ ಮತ್ತೆ ತಮ್ಮ ಆಸೆಯನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

Minister B Sriramulu talks about DCM Post rbj

ರಾಯಚೂರು, (ನ.30): ಸಮಾಜ ಕಲ್ಯಾಣ  ಸಚಿವ ಬಿ. ಶ್ರೀರಾಮುಲು ಅವರು ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣು ಇಟ್ಟಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಶ್ರೀರಾಮುಲು ಅವರು ಡಿಸಿಎಂ ಹುದ್ದೆಗೆ ಕಸರತ್ತು ನಡೆಸಿದ್ದಾರೆ.

 ಅದು ಇಂದಿನವರೆಗೂ ಪೂರೈಕೆಯಾಗಿಲ್ಲ. ಬದಲಿಗೆ ಬರೀ ಕನಸಾಗಿಯೇ ಉಳಿದೆ. ಇದೀಗ ಮತ್ತೆ ಮತ್ತೆ ಡಿಸಿಎಂ ಸ್ಥಾನದ ಆಸೆ ಬಹಿರಂಗವಾಗಿಯೇ ಬಿಚ್ಚಿಟ್ಟಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಕೊಟ್ಟ ಬಿಎಸ್ ಯಡಿಯೂರಪ್ಪ

ಹೌದು...ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಮಾತನಾಡಿದ ಅವರು,  ಈಗಾಗಲೇ ಅನೇಕ ಬಾರಿ ತಾವು ಉಪ ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದ ಸಚಿವ ಬಿ.ಶ್ರೀರಾಮುಲು, ಇದೀಗ ಮತ್ತೆ ನಾನು ಉಪ ಮುಖ್ಯಮಂತ್ರಿ ಆಗಬೇಕು ಎನ್ನುವುದು ಜನರ ಬೇಡಿಕೆಯಾಗಿದೆ ಎಂಬುದಾಗಿ ತಮ್ಮ ಆಸೆಯನ್ನು ಬಹಿರಂಗವಾಗಿಯೇ ಹೇಳಿದರು. ಇದು ಮತ್ತೆ ರಾಜ್ಯ ಬಿಜೆಪಿಯಲ್ಲಿ ಸಂಚಲನವನ್ನು ಮೂಡಿಸಿದೆ.

ಮಸ್ಕಿಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ, ಅರಣ್ಯ ಸಚಿವ ಆನಂದ್ ಸಿಂಗ್ ರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಬಿ ಶ್ರೀರಾಮುಲು,  ರಾಜ್ಯ ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ. ಡಿಸಿಎಂ ಹುದ್ದೆಯ ವಿಚಾರ ಪಕ್ಷದ ವೇದಿಕೆಯಲ್ಲಿ ನಿರ್ಧರಿಸಲಾಗುತ್ತದೆ. ಆದ್ರೇ ನಾನು ಉಪ ಮುಖ್ಯಮಂತ್ರಿಯಾಗಬೇಕು ಎಂಬುದು ಜನರ ಬೇಡಿಕೆಯಾಗಿದೆ ಎಂದು ಹೇಳುವ ಮೂಲಕ  ಡಿಸಿಎಂ ಸ್ಥಾನದ ಆಕಾಂಕ್ಷೆ ಎಂದು ನಾಯಕರುಗಳಿ ಸಂದೇಶ ನೀಡಿದ್ದಾರೆ.

ಡಿಸಿಎಂ ಹುದ್ದೆಗಾಗಿ ಈಗಾಗಲೇ ಶ್ರೀರಾಮಲು ಪರವಾಗಿ ವಾಲ್ಮೀಕಿ ಸ್ವಾಮೀಜಿಗಳು ಹಾಗೂ ಅವರ ಅಭಿಮಾನಿಗಳು ಸಾಕಷ್ಟು ಪ್ರತಿಭಟನೆಗಳನ್ನು ಮಾಡಿದ್ದಾರೆ. ಆದ್ರೆ, ಬಿಜೆಪಿ ಹೈಕಮಾಂಡ್ ಮಾತ್ರ ಇದುವರೆಗೂ ಶ್ರೀರಾಮುಲುಗೆ ಯಾವುದೇ ಮನ್ನಣೆ ನೀಡಿಲ್ಲ. ಅಲ್ಲದೇ ಅವರ ಬಳಿ ಇದ್ದ ಆರೋಗ್ಯ ಇಲಾಖೆಯನ್ನೂ ಸಹ ಕಿತ್ತುಕೊಂಡು ಡಾ.ಸುಧಾಕರ್ ಅವರಿಗೆ ನೀಡಲಾಗಿದೆ.

Latest Videos
Follow Us:
Download App:
  • android
  • ios