ಕಾಂಗ್ರೆಸ್‌ನಲ್ಲಿ ಕೆಲವು ನಾಯಕರ ನಡುವೆ ಅಧಿಕಾರಕ್ಕಾಗಿ ಕಿತ್ತಾಟವಿದೆ. ಮುಖ್ಯಮಂತ್ರಿಯಾಗಲು ಹಲವರು ಹವಣಿಸುತ್ತಿದ್ದಾರೆ. ಸಿಎಂ ಅಭ್ಯರ್ಥಿ ಘೋಷಣೆ ಮಾಡಿದರೆ ಪಕ್ಷದಲ್ಲಿನ ನಾಯಕರ ವೈಮನಸ್ಸು ಹೊರಗೆ ಬರಲಿದೆ ಎಂದು ತಿಳಿಸಿದ ರಾಮುಲು. 

ಲಿಂಗಸುಗೂರು(ಮಾ.12): ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗಲು ಅನೇಕರು ಟವೆಲ್‌ ಹಾಕಿದ್ದಾರೆ. ಕಾಂಗ್ರೆಸ್‌ಗೆ ತಾಕತ್ತು, ದಮ್ಮು ಇದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಲಿ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಸವಾಲು ಹಾಕಿದ್ದಾರೆ. 

ಪಟ್ಟಣದ ಬೈಪಾಸ್‌ ರಸ್ತೆಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಕೆಲವು ನಾಯಕರ ನಡುವೆ ಅಧಿಕಾರಕ್ಕಾಗಿ ಕಿತ್ತಾಟವಿದೆ. ಮುಖ್ಯಮಂತ್ರಿಯಾಗಲು ಹಲವರು ಹವಣಿಸುತ್ತಿದ್ದಾರೆ. ಸಿಎಂ ಅಭ್ಯರ್ಥಿ ಘೋಷಣೆ ಮಾಡಿದರೆ ಪಕ್ಷದಲ್ಲಿನ ನಾಯಕರ ವೈಮನಸ್ಸು ಹೊರಗೆ ಬರಲಿದೆ ಎಂದು ತಿಳಿಸಿದರು.

ರಾಯಚೂರು ನಗರದ ಬಿಜೆಪಿ ಟಿಕೆಟ್ ಗಾಗಿ ಪೈಪೋಟಿ, ಹೈಕಮಾಂಡ್ ಭೇಟಿ ಮಾಡಿದ ಮೂಲ ಬಿಜೆಪಿಗರು!

ಭಾರತ್‌ ಜೋಡೊ ಯಾತ್ರೆ ನಡೆಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೋದಲ್ಲಿ ಬಂದಲ್ಲಿ ಕಾಂಗ್ರೆಸ್‌ ಮಟಾಶ್‌ ಆಗಿದೆ. ಅವರ ಗ್ಯಾರಂಟಿ, ವಾರಂಟಿಗಳನ್ನು ನಂಬಬೇಡಿ ಎಂದ ಅವರು, ಕಾಶ್ಮೀರದಲ್ಲಿ ರಾಹುಲ್‌ ಗಾಂಧಿ ಪಾದಯಾತ್ರೆ ಮಾಡುವಾಗ ಉಗ್ರಗಾಮಿಗಳು ಭೇಟಿಯಾದರಂತೆ, ಅವರಿಗೆ ಏನು ಮಾಡಲಿಲ್ಲ ಎಂದು ದೇಶದ ಆಚೆ ಹೇಳುತ್ತಾರೆ. ಭಯೋತ್ಪಾದಕರು ಭೇಟಿ ಆದಾಗ ಏಕೆ ದೂರು ನೀಡಲಿಲ್ಲ. ಕಾಂಗ್ರೆಸ್‌ ಪ್ರಜಾಪ್ರಭುತ್ವದ ವ್ಯವಸ್ಥೆ ಮಾರಕ ಎಂಬುದು 1975-79, 1984ರಲ್ಲಿ ಸಿಖ್‌ ಸಮುದಾಯದ ನರಮೇಧ ನಡೆಸಿ ಸಾಬೀತು ಮಾಡಿದೆ ಎಂದು ದೂರಿದರು.