Asianet Suvarna News Asianet Suvarna News

ರಾಯಚೂರು ನಗರದ ಬಿಜೆಪಿ ಟಿಕೆಟ್ ಗಾಗಿ ಪೈಪೋಟಿ, ಹೈಕಮಾಂಡ್ ಭೇಟಿ ಮಾಡಿದ ಮೂಲ ಬಿಜೆಪಿಗರು!

ಹಾಲಿ ಶಾಸಕರು ಇದ್ರೂ ರಾಯಚೂರು ನಗರದ ಬಿಜೆಪಿ ಟಿಕೆಟ್ ಗಾಗಿ ಬೇಡಿಕೆ. ಬಿಜೆಪಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಟಿಕೆಟ್ ನೀಡುವಂತೆ ಮನವಿ ಮಾಡಿದ ಮೂಲ ಬಿಜೆಪಿಗರು. ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳಲು ನಾಯಕರ ನಾನಾ ಕಸರತ್ತು.

Raichur BJP ticket aspirants meet the high command gow
Author
First Published Mar 12, 2023, 5:51 PM IST

ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್ 

ರಾಯಚೂರು (ಮಾ.12): ರಾಜ್ಯದ 2023ರ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡು ರಾಜ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದೆ. ರಾಯಚೂರು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು. ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ದೇವದುರ್ಗ, ರಾಯಚೂರು ನಗರ, ಗ್ರಾಮೀಣ ಮತ್ತು ಮಾನವಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆದ್ರೆ, ಮೂರು ವಿಧಾನಸಭಾ ಕ್ಷೇತ್ರಗಳಾದ ಸಿಂಧನೂರು, ಮಸ್ಕಿ ಮತ್ತು ಲಿಂಗಸೂಗೂರು ಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು. ಯಾತ್ರೆ ವೇಳೆ ಹಲವು ಆಕಾಂಕ್ಷಿಗಳು ನಮಗೆ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದರು. ಅದರಲ್ಲೂ ರಾಯಚೂರು ನಗರದ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಡಾ. ಶಿವರಾಜ್ ಪಾಟೀಲ್ ಇದ್ದಾರೆ. ಎಲ್ಲಾ ಸಮುದಾಯಗಳ ಜೊತೆಗೆ ಉತ್ತಮ ಒಡನಾಟ ಹೊಂದಿದ್ದಾರೆ. ಆದ್ರೂ ಸಹ ರಾಯಚೂರು ನಗರದ ಮೂಲ ಬಿಜೆಪಿಗರು, ನಮಗೆ ಈ ಸಲ ಬಿಜೆಪಿ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ನಾಯಕರ ಬಳಿ ಮನವಿ ಮಾಡುತ್ತಿದ್ದಾರೆ. 

ಮುನ್ನೂರು ಸಮಾಜಕ್ಕೆ ಟಿಕೆಟ್ ನೀಡಲು ಮಾಜಿ ಸಿಎಂಗೆ ಮನವಿ
ರಾಯಚೂರು ನಗರದಲ್ಲಿ ಬಿಜೆಪಿಯ ಹಾಲಿ ಶಾಸಕ ಡಾ.ಶಿವರಾಜ್ ಪಾಟೀಲ್ ಜೆಡಿಎಸ್ ನಿಂದ ಬಂದು ಶಾಸಕರಾಗಿ ಅಧಿಕಾರ ಅನುಭವಿಸಿದ್ದಾರೆ. ಈ ಸಲ ನೀಡುವ ಟಿಕೆಟ್ ಮುನ್ನೂರು ಸಮಾಜದ ಮುಖಂಡರಿಗೆ ನೀಡಬೇಕು. ಕಳೆದ 2000ನೇ ಇಸವಿಯಿಂದ ರಾಯಚೂರು ನಗರದಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದೇವೆ. ಅಷ್ಟೇ ಯಾಕೆ 2004ರಲ್ಲಿ ಮುನ್ನೂರು ಸಮಾಜದ ಹಿರಿಯ ಮುಖಂಡರಾದ ಎ. ಪಾಪರೆಡ್ಡಿಯವರನ್ನ ರಾಯಚೂರು ನಗರದ ಬಿಜೆಪಿ ಶಾಸಕರಾಗಿ ಆಯ್ಕೆ ಮಾಡಿದ್ದೇವೆ. ರಾಯಚೂರು ನಗರದ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನೂರು ಕಾಪು ‌ಸಮಾಜದವರು 25ಸಾವಿರ ಜನಸಂಖ್ಯೆ ಇದೆ. ಇನ್ನೂ ಮುನ್ನೂರು ಕಾಪು ಸಮಾಜ ಎಲ್ಲಾ ಹಿಂದುಳಿದ ಸಮುದಾಯಗಳ ಜೊತೆಗೆ ಉತ್ತಮ ಸ್ನೇಹ- ಸಂಬಂಧ ಹೊಂದಿದ್ದು, ಮುನ್ನೂರು ಕಾಪು ಸಮಾಜಕ್ಕೆ ಬಿಜೆಪಿ ಟಿಕೆಟ್ ನೀಡಿದ್ರೆ, ರಾಯಚೂರು ನಗರದ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲುವು ಸಾಧಿಸಲಿದೆ.  ಅದರಲ್ಲೂ ಬಿಜೆಪಿ ಪಕ್ಷಕ್ಕಾಗಿ ಶ್ರಮಿಸಿದ ನಮ್ಮ ಮುನ್ನೂರು ಕಾಪು ಸಮಾಜದ ಯುವ ಮುಖಂಡ ಗುಡ್ಸಿ ನರಸರೆಡ್ಡಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಸಿ.ಟಿ. ರವಿಗೆ ಮನವಿ ಸಲ್ಲಿಸಿದರು.

ಯಾರು ಈ ಯುವ ಮುಖಂಡ ಗುಡ್ಸಿ ನರಸರೆಡ್ಡಿ?
ಗುಡ್ಸಿ ನರಸರೆಡ್ಡಿ ಅನ್ನುವುದಕ್ಕಿಂತ ಎಲ್ಲರೂ ಈತನನ್ನ GNR ಎಂದೇ ಗುರುತಿಸುತ್ತಾರೆ. ಓದಿದ್ದು ಸಿವಿಲ್ ಇಂಜಿನಿಯರ್ ಆಗಿದ್ದು, 1993ರಲ್ಲಿ ಬಿಜೆಪಿ ಸೇರ್ಪಡೆ ಆಗಿ,  ತಮ್ಮ ಕಾಯಕದ ಜೊತೆಗೆ ರಾಯಚೂರು ‌ನಗರದಲ್ಲಿ ಪಕ್ಷ ಸಂಘಟನೆ ‌ಮಾಡಿದ ನಾಯಕರಲ್ಲಿ ಇವರು ಒಬ್ಬರಾಗಿದ್ದಾರೆ. ಪಕ್ಷ ಸಂಘಟನೆಯ ಜೊತೆಗೆ ತಮ್ಮ ಸಮುದಾಯದ ಮುಖಂಡರಾದ ಎ.ಪಾಪರೆಡ್ಡಿಯವರನ್ನ  2004ರಲ್ಲಿ ಶಾಸಕರಾಗಿ ಮಾಡುವಲ್ಲಿ ಇವರ ಪಾತ್ರವು ಬಹುಮುಖ್ಯವಾಗಿದೆ. ಶಾಸಕ ಎ. ಪಾಪರೆಡ್ಡಿ ಗುರುಗಳಾಗಿದ್ರೆ ಗುಡ್ಸಿ ನರಸರೆಡ್ಡಿ ಶಿಷ್ಯರಂತೆ ಅವರು ಹೇಳಿದಂತೆ ನಡೆದುಕೊಂಡು ಬಂದಿದ್ದಾರೆ. ಈಗಲೂ ಸಹ ಮಾಜಿ ಶಾಸಕ ಎ.ಪಾಪರೆಡ್ಡಿ ಅವರ ಅನುಮತಿ ಮೇರೆಗೆ ಟಿಕೆಟ್ ಕೇಳಲು ಗುಡ್ಸಿ ನರಸರೆಡ್ಡಿ  ಮುಂದಾಗಿದ್ದಾರೆ.

ಐಐಟಿ, ಮೂಲಭೂತ ಸೌಕರ್ಯದ ಮೂಲಕ ಮುಂದಿನ ಜನಾಂಗದ ಭವಿಷ್ಯ ರೂಪಿಸಿದ ಮೋದಿ, 

ಇನ್ನೂ ಗುಡ್ಸಿ ನರಸರೆಡ್ಡಿ 2015-18ರವೆಗೆ ರಾಯಚೂರು ನಗರದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾಗಿದ್ದರು. 2010-12ರಲ್ಲಿ ರಾಯಚೂರು ನಗರಾಭಿವೃದ್ಧಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ಈಗ ಸದ್ಯ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರು ಹಾಗೂ ರಾಯಚೂರು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಆಗಿದ್ದಾರೆ. ಅಷ್ಟೇ ಅಲ್ಲದೇ 2018ರಲ್ಲಿಯೂ ಸಹ ಬಿಜೆಪಿ ಟಿಕೆಟ್ ನೀಡುವಂತೆ ಗುಡ್ಸಿ ನರಸರೆಡ್ಡಿ ಮನವಿ ಮಾಡಿದ್ರು. ಆಗ ಹೈಕಮಾಂಡ್ ಮುಂದಿನ ಬಾರಿ ನೀಡುವುದಾಗಿ ಹೇಳಿ ಹಾಲಿ ಶಾಸಕ ಡಾ.ಶಿವರಾಜ್ ಪಾಟೀಲ್ ಅವರಿಗೆ ನೀಡಿತ್ತು. ಈ ಬಾರಿ ಆದ್ರೂ ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ನೀಡಬೇಕೆಂದು ಮುನ್ನೂರು ಕಾಪು ಸಮಾಜದ ಮುಖಂಡರು ಆಗ್ರಹಿಸಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಮನವಿ ಸಲ್ಲಿಸಿದರು.

ಬೆಂಗಳೂರು - ಮೈಸೂರು ಹೆದ್ದಾರಿ ಉದ್ಘಾಟನೆಗಿಲ್ಲದ ಆಹ್ವಾನ, ಮೋದಿಗೆ ಧನ್ಯವಾದ ಅರ್ಪಿಸಿದ

ಹೈಕಮಾಂಡ್ ನಾಯಕರು ಹೇಳುವುದು ಏನು?
ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ನಮ್ಮ ಪಕ್ಷ ಪ್ರತಿ ಕ್ಷೇತ್ರದಲ್ಲಿ ಸಮೀಕ್ಷೆ ಮಾಡುತ್ತಿದೆ. ಸಮೀಕ್ಷೆಯಲ್ಲಿ ಯಾರ ಹೆಸರು ಬರುತ್ತೋ ಅಂತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ. ಯಾವುದೇ ಕ್ಷೇತ್ರದಲ್ಲಿ ಇವರಿಗೆ ಟಿಕೆಟ್ ಸಿಗುತ್ತೆ, ಇವರಿಗೆ ಸಿಗಲ್ಲವೆಂದು ನಾವು ಹೇಳಲು ಆಗಲ್ಲ. ರಾಜ್ಯದಲ್ಲಿ ಚುನಾವಣಾ ಸಮಿತಿಯಲ್ಲಿ ಕುಳಿತುಕೊಂಡು ಚರ್ಚೆ ಮಾಡುತ್ತೇವೆ. ಚರ್ಚೆಯಲ್ಲಿ ಏನು ತೀರ್ಮಾನವಾಗುತ್ತೋ ಅದೇ ಅಂತಿಮ. ಚುನಾವಣಾ ಸಮಿತಿಯಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸೇರಿದಂತೆ ಎಲ್ಲಾ ಮುಖಂಡರು ಇರುತ್ತಾರೆ. ಎಲ್ಲಿಯವರೆಗೆ ಎಲ್ಲಾ ಮುಖಂಡರು ಪಕ್ಷ ಸಂಘಟನೆ ಮಾಡಬೇಕು ಎಂದು ಹೈಕಮಾಂಡ್ ನಾಯಕರು ತಿಳಿಸುತ್ತಾ ಇಡೀ ರಾಜ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಇತ್ತ ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಾ,  ನಾನೇ ಮುಂದಿನ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾರೆ.

Follow Us:
Download App:
  • android
  • ios