ಗದಗ: ಅನಿಲ ಮೆಣಸಿನಕಾಯಿ ಗೆಲ್ಲಿಸಿ, ಸಚಿವ ಶ್ರೀರಾಮುಲು
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಬಡ ಕುಟುಂಬಗಳಿಗೆ ತಲಾ ಐದು ಕೆ.ಜಿ. ಅಕ್ಕಿ, ಸಿರಿಧಾನ್ಯ ಸಿಗಲಿದೆ. ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ ಮೂರು ಸಿಲಿಂಡರ್ ಉಚಿತವಾಗಿ ಕೊಡಲಿದ್ದೇವೆ. ಪ್ರತಿದಿನ ಒಂದು ಕುಟುಂಬಕ್ಕೆ ಅರ್ಧ ಲೀ. ನಂದಿನಿ ಹಾಲು ಉಚಿತವಾಗಿ ಸಿಗಲಿದೆ. .10 ಲಕ್ಷದವರೆಗೆ ಆರೋಗ್ಯ ವಿಮೆ ಕೊಡಲಿದ್ದೇವೆ. ಒಂದರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ ಕೊಡಲು ತೀರ್ಮಾನಿಸಿದ್ದೇವೆ: ಶ್ರೀರಾಮುಲು
ಗದಗ(ಮೇ.04): ಕ್ಷೇತ್ರದ ಜನತೆ ಅನಿಲ ಮೆಣಸಿನಕಾಯಿ ಅವರಿಗೆ ಕೊಡುವ ವೋಟು ಶ್ರೀರಾಮುಲುಗೆ ವೋಟು ಹಾಕಿದಂತೆ. ಅನಿಲ ಮೆಣಸಿನಕಾಯಿ ಅವರನ್ನು ಗೆಲ್ಲಿಸಿ ಡಬಲ್ ಎಂಜಿನ್ ಸರ್ಕಾರ ರಚಿಸಬೇಕು ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು. ಬುಧವಾರ ಸಂಜೆ ನಗರದ ಒಕ್ಕಲಗೇರಿ ನಗರದ ಗಂಜಿ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ರೋಡ್ ಶೋದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಬಡ ಕುಟುಂಬಗಳಿಗೆ ತಲಾ ಐದು ಕೆ.ಜಿ. ಅಕ್ಕಿ, ಸಿರಿಧಾನ್ಯ ಸಿಗಲಿದೆ. ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ ಮೂರು ಸಿಲಿಂಡರ್ ಉಚಿತವಾಗಿ ಕೊಡಲಿದ್ದೇವೆ. ಪ್ರತಿದಿನ ಒಂದು ಕುಟುಂಬಕ್ಕೆ ಅರ್ಧ ಲೀ. ನಂದಿನಿ ಹಾಲು ಉಚಿತವಾಗಿ ಸಿಗಲಿದೆ. .10 ಲಕ್ಷದವರೆಗೆ ಆರೋಗ್ಯ ವಿಮೆ ಕೊಡಲಿದ್ದೇವೆ. ಒಂದರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ ಕೊಡಲು ತೀರ್ಮಾನಿಸಿದ್ದೇವೆ ಎಂದರು.
'ಮೋದಿ ವಿಷದ ಹಾವು ಇದ್ದಂತೆ' : ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿದ ಸಿ.ಸಿ. ಪಾಟೀಲ್
ಅವಳಿ ನಗರದ ಜನತೆ ಕುಡಿಯುವ ನೀರು, ಒಳಚರಂಡಿ, ರಸ್ತೆಯ ಬಗ್ಗೆ ಚಿಂತಿಸಬೇಡಿ, ಅಧಿಕಾರಕ್ಕೆ ಬಂದ ತಕ್ಷಣ ನಾವು ಬಗೆಹರಿಸುತ್ತೇವೆ. ಅನಿಲ ಮೆಣಸಿನಕಾಯಿ ಕೋವಿಡ್ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಭಿಕ್ಷಾಟನೆ ಮಾಡಿ ಬಡ ಕುಟುಂಬಗಳ ಹೊಟ್ಟೆತುಂಬಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ಸನ್ನು ಗದಗನಲ್ಲಿ ಕಿತ್ತೆಸೆಯಬೇಕು. ಗದಗ ಶ್ರೀರಾಮುಲು ಕಾಲದಲ್ಲಿ ಅಭಿವೃದ್ಧಿಗೊಂಡಂತೆ ಅನಿಲ್ ಮೆಣಸಿನಕಾಯಿ ಕಾಲದಲ್ಲೂ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ಪರಿಶಿಷ್ಟಜಾತಿ ಮೀಸಲಾತಿಯ ಪ್ರಮಾಣವನ್ನು ಶೇ.15ರಿಂದ ಶೇ.17, ಪರಿಶಿಷ್ಟಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿದ್ದೇವೆ. ನ್ಯಾ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ. ಪಂಚಮಸಾಲಿ ಸಮಾಜಕ್ಕೆ 2ಡಿ ಕೆಟಗೇರಿಯಲ್ಲಿ ಶೇ.7ರಷ್ಟುಮೀಸಲಾತಿ ಕಲ್ಪಸಿ ಸಾಮಾಜಿಕ ನ್ಯಾಯ ಒದಗಿಸಿದ್ದೇವೆ ಎಂದರು. ಅಭ್ಯರ್ಥಿ ಅನಿಲ ಮೆಣಸಿನಕಾಯಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ರಾಜು ಕುರುಡಗಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ಇದ್ದರು.