ಸಿಬಿಐ ಮೂಲಕ ಡಿಕೆಶಿಗೆ ಕೇಂದ್ರ ಸರ್ಕಾರ ಕಿರುಕುಳ: ಸಚಿವ ನಾಗೇಂದ್ರ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸಿಬಿಐ ಮೂಲಕ ಟಾರ್ಚರ್ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಆರೋಪಿಸಿದರು. 

Minister B Nagendra Slams On Central Govt At Ballari gvd

ಬಳ್ಳಾರಿ (ಅ.20): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸಿಬಿಐ ಮೂಲಕ ಟಾರ್ಚರ್ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಆರೋಪಿಸಿದರು. ನಗರದಲ್ಲಿ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ಲೋಕಸಭಾ ಎಸ್ಸಿ, ಎಸ್ಟಿ ಮೀಸಲು ಕ್ಷೇತ್ರಗಳ ವ್ಯಾಪ್ತಿಯ ಲೀಡರ್‌ಶಿಪ್‌ ಡೆವಲಪ್‌ಮೆಂಟ್ ಮಿಷನ್ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಡಿ.ಕೆ. ಶಿವಕುಮಾರ್ ಅವರ ಜತೆ ಕಾಂಗ್ರೆಸ್‌ನ ಹತ್ತಾರು ಜನ ನಾಯಕರಿದ್ದಾರೆ. ಅವರು ಒಬ್ಬರೇ ಎಂಬ ಭ್ರಮೆಯಿಂದ ಬಿಜೆಪಿಯವರು ಹೊರ ಬರಬೇಕು. ಕೇಂದ್ರದ ಕುತಂತ್ರಗಳಿಗೆ ನಾವು ಭಯಪಡುವುದಿಲ್ಲ. ರಾಜ್ಯದಲ್ಲಿ ಜನಪರವಾಗಿ ಸರ್ಕಾರ ನೀಡುತ್ತಿರುವ ಕಾಂಗ್ರೆಸ್‌ನ ಅಭಿವೃದ್ಧಿಯ ಸ್ಪೀಡ್ ನಿಯಂತ್ರಿಸಲು ಬಿಜೆಪಿ ಏನೇ ಪ್ರಯತ್ನಿಸಿದರೂ ನಡೆಯುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ಮಾತ್ರ ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಹಿತ ಕಾಯಲು ಸಾಧ್ಯ. ಉಳಿದ ಯಾವುದೇ ಪಕ್ಷಗಳಿಗೆ ನಮ್ಮ ಪಕ್ಷದಂತೆ ಬದ್ಧತೆಯಿಲ್ಲ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರ ಜನಮನ್ನಣೆ ಇದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದು ಖಚಿತ. ಕಳೆದ ವಿಧಾನ ಸಭಾಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಐದಕ್ಕೆ ಐದು ಸ್ಥಾನಗಳನ್ನು ಗೆದ್ದಂತೆ ಬಳ್ಳಾರಿ ಲೋಕಸಭಾ ಸ್ಥಾನವನ್ನು ಗೆದ್ದು ತೋರಿಸುತ್ತೇವೆ ಎಂದರು.

ಸರ್ಕಾರ ಬೀಳಿಸೋ ತಾಕತ್ತು ಒಳಗಿನ ಕಾಂಗ್ರೆಸ್ಸಿಗರಿಗಿದೆ: ಸಿ.ಟಿ.ರವಿ

ಎಐಸಿಸಿಯ ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತ ವಿಭಾಗಗಳ ರಾಷ್ಟ್ರೀಯ ಸಂಚಾಲಕ ಕೆ. ರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ನಗರ ಶಾಸಕ ನಾರಾ ಭರತ್‌ರೆಡ್ಡಿ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಮಹ್ಮದ್ ರಫೀಕ್, ಮೇಯರ್ ಡಿ. ತ್ರಿವೇಣಿ ಹಾಜರಿದ್ದರು.

Latest Videos
Follow Us:
Download App:
  • android
  • ios