ಬಿಎಸ್ವೈ ಆಪ್ತರ ಮೇಲೆ IT ದಾಳಿ: ಕಾನೂನಿಗಿಂತ ದೊಡ್ಡವರಿಲ್ಲ ಎಂದ ಸಚಿವ
* ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಪ್ತರ ಮೇಲೆ ಐಟಿ ದಾಳಿ
* ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಪ್ರತಿಕ್ರಿಯೆ
* ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ಕೊಟ್ಟ ಅಶ್ವಥ್ ನಾರಾಯಣ್
ಬೀದರ್, (ಅ.10): ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಆಪ್ತರ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ (Dr Ashwath Narayan) ಪ್ರತಿಕ್ರಿಯಿಸಿದ್ದಾರೆ.
ಬೀದರ್ನಲ್ಲಿ (Bidar) ಇಂದು (ಅ.10) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡವರು ಯಾರೂ ಇಲ್ಲ. ಇವತ್ತು ಸರ್ಕಾರದಲ್ಲಿ ಕೆಲಸ ಮಾಡಿದ್ದವರ ಮೇಲೆ ಐಟಿ ರೇಡ್ (IT Raid) ಆಗುತ್ತಿದೆ. ಕಾನೂನು ಪಾಲನೆ ಮಾಡಬೇಕಾಗುತ್ತದೆ ಎಂದರು.
ಇವತ್ತು ಸರ್ಕಾರದಲ್ಲಿ ಕೆಲಸ ಮಾಡಿದ್ದವರ ಮೇಲೆ ಐಟಿ ರೇಡ್ ಆಗುತ್ತಿದೆ.. ಬೇರೆ ಬೇರೆ ರೀತಿ ಬಣ್ಣ ಕಟ್ಟುವಂತದ್ದು ಬೇಡ. ಕಾನೂನು ಪಾಲನೆಯಾಗುತ್ತಿದೆ. ಸಚಿವರು, ವ್ಯಕ್ತಿಗಳ ಮೇಲೂ ಬೇರೆ ಬೇರೆ ಸಂದರ್ಭದಲ್ಲಿ ಎಲ್ಲರ ಮೇಲೂ ಐಟಿ ರೆಡ್ ಆಗಿದೆ. ಈ ವಿಷಯಕ್ಕೆ ಹೆಚ್ಚು ಮಹತ್ವ ಕೊಡುವುದು ಬೇಡ ಎಂದು ಹೇಳಿದರು.
ಇಲಾಖೆಯವರು ಯಾರ ಮೇಲೆ ನಿಶ್ಚಯ ಮಾಡುತ್ತಾರೆ ಅವರ ಮೇಲೆ ರೇಡ್ ಆಗುತ್ತದೆ. ಇದೇ ಎಸ್ ಆರ್ ಪಾಟೀಲ್ ಅವರು ಹೇಳ್ತಾರೆ.. ಡಿಕೆ ಶಿವಕುಮಾರ್ ಮೇಲೆ ಐಟಿ ರೇಡ್ ಆದಾಗ ಅವರ ಮೇಲೆ ಆಗುತ್ತೆ, ಅಥವಾ ಅವರ ಪಕ್ಷಕ್ಕೆ ಆಗಿರುವಂತಹದು.. ಇಂತಹದನ್ನೇ ಮಾತಾಡ್ತಾರೆ. ಈಗ ಇದ್ದಕ್ಕಿದ್ದಂತೆ ನಮ್ಮ ಪಕ್ಷದ ಮೇಲೆ ಒಲವು ತೋರಿಸುವುದೇನೂ ಬೇಕಿಲ್ಲ ಎಂದು ತಿರುಗೇಟು ಕೊಟ್ಟರು.
ಮೊನ್ನೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಆಪ್ತ ಉಮೇಶ್ ಎನ್ನುವರ ನಿವಾಸದಲ್ಲಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು.
ಶಿವಮೊಗ್ಗ (Shivamogga) ಜಿಲ್ಲೆಯ ಆಯನೂರು ಮೂಲದ ಉಮೇಶ್, 2007ರಲ್ಲಿ ಬಿಎಂಟಿಸಿ ಬಸ್ (Bus) ಕಂಡಕ್ಟರ್ ಕಂ ಡ್ರೈವರ್ ಆಗಿದ್ದ. ಯಲಹಂಕದ ಪುಟ್ಟೇನಹಳ್ಳಿ ಬಿಎಂಟಿಸಿ ಡಿಪೋದಲ್ಲಿ ಕೆಲಸಕ್ಕಿದ್ದ. ಬಳಿಕ ಉಮೇಶ್ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.