ಎಲ್ಲಿದ್ಯಪ್ಪಾ ನಿಖಿಲ್ ಟ್ರೋಲ್ ನೆನಪು ಮಾಡಿ ಹೆಚ್‌ಡಿಕೆಗೆ ವ್ಯಂಗ್ಯವಾಡಿದ ಅಶ್ವತ್ ನಾರಾಯಣ್
ಅಧಿವೇಶನ ಕರೆಯಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಕುಮಾರಸ್ವಾಮಿ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದ್ದರು. ಈ ಬಗ್ಗೆ ಮಾಧ್ಯಮಕ್ಕೆ ಉತ್ತರಿಸಿದ ಸಚಿವ ಡಾ.ಅಶ್ವಥ್ ನಾರಾಯಣ್, ಎಲ್ಲಿದ್ಯಪ್ಪ ಕುಮಾರಸ್ವಾಮಿ ಎಂದು ವ್ಯಂಗ್ಯ ವಾಡಿದ್ದಾರೆ.
ಬೆಂಗಳೂರು (ಆ.9): ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಮಂಡ್ಯ ಜಿಲ್ಲೆ ದೇಶದ ಗಮನ ಸೆಳೆದಿತ್ತು. ಕಾರಣ ಸುಮಲತಾ ಅಂಬರೀಶ್ ಮತ್ತು ಹೆಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಸ್ಪರ್ಧೆ ಯಿಂದಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಈ ವೇಳೆ ನಿಖಿಲ್ ಕುಮಾರಸ್ವಾಮಿಯನ್ನು ಜನ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ರು. ನಿಖಿಲ್ ಕುಮಾರಸ್ವಾಮಿ ಅವರ ಸಿನಿಮಾದ ಟ್ರೈಲರ್ ಒಂದನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿತ್ತು. ಈ ವೇಳೆ ವೇದಿಕೆಯಲ್ಲಿ ಇದ್ದ ಹೆಚ್ ಡಿ ಕುಮಾರಸ್ವಾಮಿ ಒಂದು ಸಿನಿಮಾ ಶೈಲಿಯಲ್ಲಿ ಸ್ಕ್ರಿಪ್ಟ್ ಪ್ರಕಾರ, ನಿಖಿಲ್ ಎಲ್ಲಿದ್ಯಪ್ಪ ಎಂದು ನಿಖಿಲ್ ರನ್ನು ಕೂಗಿದಾಗ, ಜನರ ಮಧ್ಯದಿಂದ ಬರುವ ನಿಖಿಲ್, ನೀವು ಇಷ್ಟ ಪಡುವ ಜನರ ಮಧ್ಯೆ ಇದ್ದೀನಿ ಅಪ್ಪ ಎಂದು ಉತ್ತರ ನೀಡಿದ್ರು. ಆ ಸನ್ನಿವೇಶ ಕೇವಲ ಆ ವೇದಿಕೆ ಕಾರ್ಯಕ್ರಮಕ್ಕೆ ಅನುಗುಣವಾಗಿ ನಡೆದ ಪ್ರಸಂಗವಾಗಿತ್ತು. ಈ ನಿಖಿಲ್ ಎಲ್ಲಿದ್ಯಪ್ಪ ಎಂದು ಕುಮಾರಸ್ವಾಮಿ ಅಂದು ಕೇಳಿದ್ದು ಹೆಚ್ಚೇನು ಚರ್ಚೆ ಆಗಿರಲಿಲ್ಲ. ಆದರೆ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.
ನಿಖಿಲ್ ಎಲ್ಲಿದ್ಯಪ್ಪ ಟ್ರೋಲ್ ವಿದೇಶಗಳಿಗೂ ತಲುಪಿತ್ತು
ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಒಪ್ಪಿಗೆಯ ಅಭ್ಯರ್ಥಿ ಆಗಿ, ನಿಖಿಲ್ ಸ್ಪರ್ಧೆ ಮಾಡಿದ್ರೆ, ಪಕ್ಷೇತರರಾಗಿ ಸುಮಲತಾ ಅಂಬರೀಶ್ ಎದುರಾಳಿ ಆಗಿದ್ರು. ಬಿಜೆಪಿ ಮಂಡ್ಯದಲ್ಲಿ ಅಭ್ಯರ್ಥಿ ಹಾಕಿರಲಿಲ್ಲ. ಆಗ ಟ್ರೋಲ್ ಗ್ರುಪ್ , ನಿಖಿಲ್‌ರನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದಷ್ಟೆ ಅಲ್ಲ. ಜನಸಾಮಾನ್ಯರು ಕೂಡ ನಿಖಿಲ್ ಎಲ್ಲಿದ್ಯಪ್ಪ ಎಂದು ತಮಾಷೆ ಆಗಿ ಹೇಳೊಕೆ ಶುರುಮಾಡಿದ್ರು. ಅದು ವಿದೇಶದಲ್ಲಿ ಕೂಡ ನಿಖಿಲ್ ಎಲ್ಲಿದ್ಯಪ್ಪ ಎಂದು ಟ್ರೋಲ್ ಆಗಿತ್ತು. ಈಗ ಹಳೆಯ ವಿಚಾರವನ್ನು ನೆನಪಿಸುವಂತಿತ್ತು ಡಾ. ಅಶ್ವಥ್ ನಾರಾಯಣ್ ಅವರ ಮಾತು.
ಸಿದ್ದು ಆಯ್ತು, ಈಗ ಡಿಕೆಶಿ ಶೋ: 1 ಲಕ್ಷ ಜನರನ್ನು ಸೇರಿಸಲು ಸಿದ್ಧತೆ..!
ಎಲ್ಲಿದ್ಯಪ್ಪ ಕುಮಾರಸ್ವಾಮಿ?: ಇಂದು ಬೆಳಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುವಾಗ, ಸದನ ಕರೆಯಬೇಕು ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ ಎಂದು ಸಚಿವರಿಗೆ ಕೇಳಿದಾಗ, ಡಾ. ಅಶ್ವಥ್ ನಾರಾಯಣ್, ಎಲ್ಲಿದ್ಯಪ್ಪ ಕುಮಾರಸ್ವಾಮಿ ಎಂದು ವ್ಯಂಗ್ಯ ಮಾಡಿದ್ರು. ಅಧಿವೇಶನ ಕರೆಯಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಕುಮಾರಸ್ವಾಮಿ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದ್ದರು.
ಬೆಂಗಳೂರು: ಬಿಬಿಎಂಪಿ ಮೀಸಲು ವಿರುದ್ಧ ಕಾಂಗ್ರೆಸ್ ಹೋರಾಟ
ಈ ಬಗ್ಗೆ ಉತ್ತರ ನೀಡಿದ ಸಚಿವ ಕುಮಾರಸ್ವಾಮಿಗೆ ಲೇವಡಿ ಮಾಡಿದ್ರು. ಅಧಿವೇಶನ ಇದ್ದಾಗಲೇ ಕುಮಾರಸ್ವಾಮಿ ಸದನಕ್ಕೆ ಬರೋದಿಲ್ಲ. ಎಲ್ಲಿದ್ಯಪ್ಪ ಕುಮಾರಸ್ವಾಮಿ ಅಂತಾ ಅವರನ್ನು ಹುಡುಕಬೇಕಾಗಿದೆ ಎಂದ ಡಾ. ಅಶ್ವಥ್ ನಾರಾಯಣ್, ಕುಮಾರಸ್ವಾಮಿ ಸದನ ಕರೆಯಿರಿ ಅಂತಾರೆ, ಆಮೇಲೆ ಅವರು ಸದನಕ್ಕೆ ಬರದೊ ಇಲ್ಲ ಎಂದು ವ್ಯಂಗ್ಯವಾಡಿದ್ರು. ಸಿದ್ದರಾಮಯ್ಯ ಮಾತಿನಂತೆ ಕುಮಾರಸ್ವಾಮಿ ಕೂಡ ಮಾತಾಡ್ತಿದ್ದಾರೆ. ಬಾಯಿಗೆ ಬಂದಂತೆ ,ದಿಕ್ಕು ಇಲ್ಲದಂತೆ ಹೆಚ್ ಡಿಕೆ ಗುಂಡು ಹೊಡೆಯುತ್ತಿದ್ದಾರೆ ಎಂದ ಸಚಿವರು ವ್ಯಂಗ್ಯವಾಡಿದರು. ಸಚಿವರ ಇಂದಿನ ಹೇಳಿಕೆ ಹಳೆಯ ನಿಖಿಲ್ ಕುಮಾರಸ್ವಾಮಿ ಟ್ರೋಲ್ ಎಲ್ಲಿದ್ಯಪ್ಪ ನಿಖಿಲ್ ನೆನಪಿಸುವಂತಿತ್ತು.