ನಂಗೆ 2 ಖಾತೆ ಕೊಟ್ಟಿದ್ದಾರೆ: ರಾತ್ರಿ ಕಾಡಿಗೆ ಹೋಗ್ಬೇಕು, ಹಗಲು ನಾಡಿಗೆ ಬರಬೇಕು, ಸಚಿವರ ಅಸಮಾಧಾನ
ಸಚಿವ ಸಂಪುಟ ವಿಸ್ತರಣೆ ವಿಚಾರ ಹಲವು ನಾಯಕರಲ್ಲಿ ಅಸಾಮಾಧಾನ ಬುಗಿಲೆದ್ದಿದ್ದು, . ಇದೀಗ ಅರಣ್ಯ ಖಾತೆ ನೀಡಿರುವುದಕ್ಕೆ ಸಚಿವ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ, (ಫೆ.07): ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಚಿವರುಗಳಿಗೆ ಎರಡು-ಎರಡು ಬಾರಿ ಖಾತೆ ಹಂಚಿಕೆ ಮಾಡಿದ್ದಾರೆ. ಆದರೂ ಇನ್ನು ಖಾತೆ ಕ್ಯಾತೆ ಮುಗಿದಿಲ್ಲ.
ಈಗಾಗಲೇ ಖಾತೆ ಬಗ್ಗೆ ಸಚಿವರಾದ ಡಾ.ಕೆ.ಸುಧಾಕರ್ ಹಾಗೂ ಮಾಧುಸ್ವಾಮಿ ಅವರು ಸಿಎಂ ಬಿಎಸ್ ಯಡಿಯೂರಪ್ಪನವರ ಮೇಲೆ ಮುನಿಸಿಕೊಂಡಿದ್ದಾರೆ. ಇದೀಗ ನೂತನ ಸಚಿವ ಅರವಿಂದ್ ಲಿಂಬಾವಳಿ ಕೂಡ ಸಿಎಂ ಮೇಲೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಮುಂದೆ ಮತ್ತೆ ಸಂಪುಟ ಪುನಾರಚನೆ ಆಗಬೇಕು: ಗುಡುಗಿದ ಸಚಿವ
ಇಂದು (ಭಾನುವಾರ) ಚಾಮರಾಜನಗರದಲ್ಲಿ ನಡೆದ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಸಚಿವರು, ನನಗೆ ಎರಡು ಖಾತೆಗಳನ್ನು ಕೊಟ್ಟಿದ್ದಾರೆ. ರಾತ್ರಿ ವೇಳೆ ಕಾಡಿಗೆ ಹೋಗಬೇಕು. ಹಗಲಿನ ವೇಳೆ ನಾಡಿಗೆ ಬರಬೇಕು. ರಾತ್ರಿ ವೇಳೆ ಕಾಡು, ಹಗಲಿನಲ್ಲಿ ನಾಡು. ಕಾಡು ಮತ್ತು ನಾಡು ಎರಡನ್ನು ನೋಡಿಕೊಳ್ಳುವ ಜವಬ್ದಾರಿ ಕೊಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಇಲಾಖೆಯ ಸುರೇಶ್ ಕುಮಾರ್ ಅವರ ಜೊತೆಗೆ ಶಿಕ್ಷಣ ಸಚಿವನಾಗುತ್ತೇನೆ ಎಂದುಕೊಂಡಿದ್ದೆ. ಅವರ ಜೊತೆಗಾರನಾಗಿ ಕಳುಹಿಸುತ್ತಾರೆ ಎಂದುಕೊಂಡಿದ್ದೆ ಎಂದ ಸಚಿವರು, ನನಗೆ ನೀಡಿರುವ ಎರಡು ಹೊಸ ಖಾತೆಗಳನ್ನ ನಿಭಾಯಿಸಿಲು ದಿನದ 24 ಗಂಟೆ ಬೇಕು ಎಂದು ಹೇಳಿದರು.
ಕಾಡಿಗೆ ರಾತ್ರಿ ವೇಳೆ ಹೋದರೆ ಮಾತ್ರ ಅಲ್ಲಿನ ಪರಿಸ್ಥಿತಿ ಗೊತ್ತಾಗುತ್ತದೆ. ಪ್ರಾಣಿಗಳು ಓಡಾಡುವುದೆ ರಾತ್ರಿ ವೇಳೆ ಎಂದ ಅವರು, ನಾನು ಮೂಲತಃ ಸಿವಿಲ್ ಎಂಜಿನಿಯರ್, ಕಾಡಿನ ಎಂಜಿನಿಯರ್ ಅಲ್ಲ. ಸಾಮಾನ್ಯ ಜನರಿಗೆ ಕಾಡಿನ ಬಗ್ಗೆ ಗೊತ್ತಿರುವಷ್ಟು ನನಗಿಲ್ಲ ಎಂದರು.