ಬಳ್ಳಾರಿ, (ಫೆ.09): ವಿಜಯನಗರ ಜಿಲ್ಲೆ ಅನುಷ್ಠಾನಗೊಂಡ ಮರುದಿನವೇ ಹಜ್ ಮತ್ತು ವಕ್ಫ್ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ಗೆ ಮತ್ತೊಂದು ಉಡುಗೊರೆ ಸಿಕ್ಕಿದೆ.

ಹೌದು... ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಆನಂದ್ ಸಿಂಗ್ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ಸಹಕಾರ ಕ್ಷೇತ್ರದಲ್ಲೂ ವಿಜಯ ಪತಾಕೆ ಹಾರಿಸಿದರು.

ಆನಂದ್ ಸಿಂಗ್ ನಡೆಗೆ ರೊಚ್ಚಿಗೆದ್ದ ರೆಡ್ಡಿ, ಬಿಎಸ್‌ವೈಗೆ ಖಡಕ್ ಎಚ್ಚರಿಕೆ ಸಂದೇಶ ರವಾನೆ

ವಿಜಯನಗರ ಜಿಲ್ಲೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಆನಂದ್​ ಸಿಂಗ್​ಗೆ ಸೋಮವಾರ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರುವ ಮೂಲ ಸಂಭ್ರಮಾಚರಿಸಿದ್ದರು. ಇಂದು(ಮಂಗಳವಾರ) ಇದೇ ಮೊದಲ ಬಾರಿಗೆ ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ (ಬಿಡಿಸಿಸಿ)ಬ್ಯಾಂಕ್​ ಗಾದಿಯನ್ನೂ ಅಲಂಕರಿಸುವ ಮೂಲಕ ಕ್ಷೇತ್ರದಲ್ಲಿ ಮತ್ತಷ್ಟು ಹಿಡಿತ ಸಾಧಿಸಿದ್ದಾರೆ.

ಜ.2ರಂದು ಅಧ್ಯಕ್ಷ ಸ್ಥಾನಕ್ಕೆ ಟಿ.ಎಂ.ಚಂದ್ರಶೇಖರಯ್ಯ ರಾಜೀನಾಮೆ ನೀಡಿದ್ದರು. ಈ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಆದ್ರೆ, ಆನಂದ್ ಸಿಂಗ್ ಹೊರತುಪಡಿಸಿ ಬೇರೆ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಚ್. ವಿಶ್ವನಾಥ್ ಘೋಷಿಸಿದರು.

ಆನಂದ್ ಸಿಂಗ್ ಒಟ್ಟು ಮೂರು ನಾಮಪತ್ರ ಸಲ್ಲಿಸಿದ್ದರು. ಮೂರು ಕ್ರಮಬದ್ಧವಾಗಿದ್ದವು. ಅದರಲ್ಲಿ ಒಂದನ್ನು ಪರಿಗಣಿಸಲಾಯಿತು ಎಂದು ಹೇಳಿದರು.

"