ಆನಂದ ಸಿಂಗ್ ಬೇಡಿಕೆ ಈಡೇರಿಸಿದ ಸಿಎಂ: ಸಂಭ್ರಮಾಚರಣೆಗಾಗಿ ಬೆಂಗ್ಳೂರಿನಿಂದ ಹೊರಟ ಸಚಿವ
ವಿವಾದದ ನಡುವೆಯೂ ಕೊಟ್ಟ ಭರವಸೆಯಂತೆ ಸಚಿವ ಆನಂದ್ ಸಿಂಗ್ ಬೇಡಿಕೆ ಈಡೇರಿಸುವಲ್ಲಿ ಸಿಎಂ ಬಿಎಸ್ ಯಡಿಯೂರಪ್ಪನವರು ಯಶಸ್ವಿಯಾಗಿದ್ದಾರೆ.
ಬೆಂಗಳೂರು, (ಫೆ.08): ಮೂಲಸೌಲಭ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಸಚಿವ ಆನಂದ್ ಸಿಂಗ್ ಬೇಡಿಕೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೊನೆಗೂ ಈಡೇರಿಸಿದ್ದಾರೆ.
"
ಹೌದು...ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿವಾದದ ನಡುವೆಯೂ ವಿಜಯನಗರವನ್ನು ಇಂದು (ಸೋಮವಾರ) ಅಧಿಕೃತವಾಗಿ ಜಿಲ್ಲೆಯಾಗಿ ಘೋಷಣೆ ಮಾಡಿದರು. ಇದರೊಂದಿಗೆ ಅಧಿಕೃತವಾಗಿ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಉದಯವಾಯ್ತು.
"
ಬಳ್ಳಾರಿ ರೆಡ್ಡಿ ಬ್ರದರ್ಸ್ ವಿರೋಧದ ನಡುವೆಯೂ ಸಿಎಂ ಬಿಎಸ್‌ವೈ, ಆನಂದ್ ಸಿಂಗ್ ಅವರ ವಿಜಯನಗರ ಜಿಲ್ಲೆ ಕನಸನ್ನು ನನಸು ಮಾಡಿದ್ದಾರೆ.
ವಿಜಯನಗರ ಸಾಮ್ರಾಜ್ಯ ಸ್ಥಾಪಕರು ಯಾರು? ವಿದ್ಯಾರ್ಥಿಯ ಫನ್ನಿ ಉತ್ತರ ವೈರಲ್
ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಬಳಿಕ ಆನಂದ್ ಸಿಂಗ್ ಅವರು ವಿಜಯನಗರ ಜಿಲ್ಲೆಯನ್ನಾಗಿ ಮಾಡಬೇಕೆಂದು ಯಡಿಯೂರಪ್ಪ ಬಳಿ ಬೇಡಿಕೆ ಇಟ್ಟಿದ್ದರು. ಅಂದು ಬಿಎಸ್‌ವೈ ಕೊಟ್ಟ ಭರವಸೆಯನ್ನುಈಗ ಈಡೇರಿಸಿದ್ದಾರೆ.
ಆದೇಶ ಪಡೆದು ವಿಜಯನಗರದತ್ತ ಮುಖ
ಇನ್ನು ಅರಣ್ಯ ಖಾತೆ ಹಿಂಪಡೆದು ಹಜ್ ಮತ್ತು ವಕ್ಫ್ ಕೊಟ್ಟಿರುವುದಕ್ಕೆ ಬೇಸರಲ್ಲಿದ್ದ ಆನಂದ್ ಸಿಂಗ್ ಅವರಿಗೆ ಇದೀಗ ವಿಜಯನಗರ ಜಿಲ್ಲೆಯ ಅಧಿಕೃತ ಆದೇಶ ಕೊಡುವ ಮೂಲಕ ಸಮಾಧಾನಪಡಿಸಲಾಗಿದೆ.
ಅಧಿಕೃತ ಆದೇಶ ಸ್ವೀಕರಿಸಿ ಫುಲ್ ಖುಷಿಯಲ್ಲಿರುವ ಆನಂದ್ ಸಿಂಗ್, ಸೋಮವಾರ ಸಂಜೆ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲೆಂದು ಬೆಂಗಳೂರಿನಿಂದ ಹೊಸಪೇಟೆಯತ್ತ ಹೊರಟರು.