Asianet Suvarna News Asianet Suvarna News

ಬಿಜೆಪಿ ವಿರುದ್ಧ ಜನರು ಸಿಡಿದೇಳುವ ದಿನ ದೂರ ಇಲ್ಲ: ಎಂ.ಬಿ.ಪಾಟೀಲ್‌

ಕರ್ನಾಟಕದಲ್ಲಿ ಆಪರೇಷನ್‌ ಕಮಲದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈಗ ಮಹಾರಾಷ್ಟ್ರದ ಸರದಿ ಎಂದು ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಆರೋಪಿಸಿದರು. 

mb patil slams on bjp for operation kamala gvd
Author
Bangalore, First Published Jun 26, 2022, 5:05 AM IST

ವಿಜಯಪುರ (ಜೂ.26): ಕರ್ನಾಟಕದಲ್ಲಿ ಆಪರೇಷನ್‌ ಕಮಲದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈಗ ಮಹಾರಾಷ್ಟ್ರದ ಸರದಿ ಎಂದು ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಆರೋಪಿಸಿದರು. ಬಬಲೇಶ್ವರ ತಾಲೂಕಿನ ಸಾರವಾಡದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಇದು ಬಹಳ ದಿನ ನಡೆಯುವುದಿಲ್ಲ. ಜನ ಬಿಜೆಪಿ ವಿರುದ್ಧ ಸಿಡಿದೇಳುವ ಕಾಲ ದೂರವಿಲ್ಲ. ಆಪರೇಷನ್‌ ಕಮಲ ಪ್ರಜಾಪ್ರಭುತ್ವ ವಿರೋಧಿ. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುವುದಕ್ಕಿಂತ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಬೇಕು. 

ಆದರೆ, ಬಿಜೆಪಿಯವರು ಅಧಿಕಾರದ ಆಸೆಗೆ ಶಾಸಕರಿಂದ ರಾಜೀನಾಮೆ ಕೊಡಿಸಿ ಆಪರೇಷನ್‌ ಕಮಲದ ಮೂಲಕ ರಾಜ್ಯದಲ್ಲಿ ಸರ್ಕಾರ ರಚಿಸಿದ್ದಾರೆ. ಈ ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬುದು ಜನರಿಗೆ ಗೊತ್ತಿದೆ. ಶೇ.40 ಪರ್ಸೆಂಟೇಜ್‌ ಸರ್ಕಾರ ಎಂದು ಗುತ್ತಿಗೆದಾರ ಸಂಘದವರು ಹೇಳುತ್ತಿದ್ದಾರೆ ಎಂದರು. ಇದೇ ವೇಳೆ ಅಗ್ನಿಪಥ್‌ ಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಯೋಜನೆಯನ್ನು ಜನ ವಿರೋಧಿಸುತ್ತಿದ್ದಾರೆ. ತಾನು ಮಾಡಿದ್ದೆಲ್ಲವೂ ನಡೆಯುತ್ತಿದೆ ಎಂದು ಬಿಜೆಪಿ ಭಾವಿಸಿದೆ. ಸ್ವಲ್ಪ ದಿನ ಕೆಲವರನ್ನು ಮೋಸ ಮಾಡಬಹುದು. ಆದರೆ, ಎಲ್ಲರನ್ನೂ ಎಲ್ಲಾ ಕಾಲಕ್ಕೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು: ಎಂ.ಬಿ. ಪಾಟೀಲ್‌ ವಿಶ್ವಾಸ

ಬಿಜೆಪಿ ಸರ್ಕಾರಕ್ಕೆ ಶೀಘ್ರದಲ್ಲಿಯೇ ಇತಿಶ್ರೀ: ಐಟಿ, ಇಡಿ ಮತ್ತು ಸಿಬಿಐ ತನಿಖಾ ತಂಡಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗಿ ಉಳಿಯದೇ ಬಿಜೆಪಿಯ ಅಂಗ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಟೀಕಿಸಿದರು. ಕಾಂಗ್ರೆಸ್‌ ನಾಯಕರ ಮೇಲೆ ಇಡಿ ದಾಳಿಗೆ ಸಂಬಂಧಿಸಿದಂತೆ ಬಬಲೇಶ್ವರ ತಾಲೂಕಿನ ಸಾರವಾಡದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖಾ ಸಂಸ್ಥೆಗಳು ಬಿಜೆಪಿ ಡಿಪಾರ್ಚ್‌ಮೆಂಟ್ಸ್‌ ಆಗಿವೆ. ಬಿಜೆಪಿಯ ಇಡಿ, ಐಟಿ, ಸಿಬಿಐಗಳಾಗಿವೆ ಎಂದರು.

ಬಿಜೆಪಿ ತನಿಖಾ ಸಂಸ್ಥೆಗಳಿಗೆ ಜನರು ಇತಿಶ್ರೀ ಹಾಡುವ ಕಾಲ ದೂರವಿಲ್ಲ. ಒಂದು ಕಾಲದಲ್ಲಿ ಕಾಂಗ್ರೆಸ್‌ ಶಾಶ್ವತ. ಯಾರೂ ಅಧಿಕಾರಕ್ಕೆ ಬರುವುದಿಲ್ಲ ಎಂದುಕೊಂಡಿದ್ದೆವು. ಇಂದು ನಮಗೆ ಸಾಕಷ್ಟುಹಿನ್ನಡೆಯಾಗಿದೆ. ಈಗ ಬಿಜೆಪಿ ವಿರುದ್ಧವೂ ಅದು ಆರಂಭವಾಗಿದೆ. ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಬಿಜೆಪಿಯವರ ಆಟ ಇನ್ನು ಬಹಳ ದಿನ ನಡೆಯುವುದಿಲ್ಲ. ಬಿಜೆಪಿ ಪಾಪದ ಕೊಡ ತುಂಬಿದೆ ಎಂದು ಟೀಕಿಸಿದರು.

ಬಿಜೆಪಿಗೆ ತಕ್ಕ ಪಾಠ: ಅಗ್ನಿಪಥ ಯೋಜನೆ ಜಾರಿ ಬಗ್ಗೆ ಜನರು ವಿರೋಧಿಸುತ್ತಿದ್ದಾರೆ. ನಾವು ಮಾಡಿದ್ದೆಲ್ಲವೂ ನಡೆಯುತ್ತಿದೆ ಎಂದು ಬಿಜೆಪಿ ಭಾವಿಸಿದೆ. ಸ್ವಲ್ಪ ದಿನ ಕೆಲವರನ್ನು ಮಾತ್ರ ಮೋಸ ಮಾಡಬಹುದು. ಆದರೆ, ಎಲ್ಲರನ್ನು ಎಲ್ಲ ಕಾಲಕ್ಕೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ದೇಶ, ರಾಜ್ಯದ ಜನರು ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ. ಮಹಾರಾಷ್ಟ್ರದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಲಿಂಗಾಯತ ಧರ್ಮ ಬಗ್ಗೆ ಎಲೆಕ್ಷನ್‌ವರೆಗೆ ಚರ್ಚೆ ಬೇಡ: ಎಂ.ಬಿ.ಪಾಟೀಲ್‌

ಚುನಾವಣೆಯಲ್ಲಿ ನೇರವಾಗಿ ಗೆದ್ದು ಬರಬೇಕು. ಆದರೆ, ಬಿಜೆಪಿಯವರು ಅಧಿಕಾರದ ಆಸೆಗೆ ಶಾಸಕರ ರಾಜೀನಾಮೆ ಕೊಡಿಸಿ ಆಪರೇಶನ್‌ ಕಮಲದ ಮೂಲಕ ಸರ್ಕಾರವನ್ನು ರಚಿಸಿದೆ. ಈ ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬುದು ಜನರಿಗೆ ಗೊತ್ತಿದೆ. ಶೇ.40 ಪರ್ಸೆಂಟೇಜ್‌ ಸರ್ಕಾರ ಎಂದು ಗುತ್ತಿಗೆದಾರ ಸಂಘದವರು ಹೇಳುತ್ತಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ. ದಿಕ್ಕು ದಿಸೆಯಿಲ್ಲದೆ ಸರ್ಕಾರ ನಡೆಯುತ್ತಿದೆ. ಬಿಜೆಪಿ ಸರ್ಕಾರದ ನಡವಳಿಕೆಗೆ ಜನರು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಜನರು ಬಿಜೆಪಿ ಸರ್ಕಾರಕ್ಕೆ ಇತಿಶ್ರೀ ಹಾಡಲಿದ್ದಾರೆ ಎಂದು ಹೇಳಿದರು.

Follow Us:
Download App:
  • android
  • ios