ಇನ್ನೂ ಒಂದೂವರೆ ವರ್ಷ ಬಿಎಸ್‌ವೈ ಮುಂದುವರಿಸಬಹುದಿತ್ತು: ಎಂ.ಬಿ.ಪಾಟೀಲ್‌

ರಾಜ್ಯದಲ್ಲಿ ಯಡಿಯೂರಪ್ಪ ಅವರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇನ್ನೂ ಒಂದೂವರೆ ವರ್ಷ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸಬಹುದಿತ್ತು. ಆದರೆ ಬಿಜೆಪಿಯು ಸ್ವಾರ್ಥಕ್ಕಾಗಿ ಯಡಿಯೂರಪ್ಪ ಅವರನ್ನು ಬಳಸಿಕೊಂಡು ಬದಿಗೆ ಸರಿಸಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಹೇಳಿದ್ದಾರೆ. 

MB Patil said that BSY should have been allowed to hold office for a full term gvd

ಬೆಂಗಳೂರು (ಜು.24): ರಾಜ್ಯದಲ್ಲಿ ಯಡಿಯೂರಪ್ಪ ಅವರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇನ್ನೂ ಒಂದೂವರೆ ವರ್ಷ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸಬಹುದಿತ್ತು. ಆದರೆ ಬಿಜೆಪಿಯು ಸ್ವಾರ್ಥಕ್ಕಾಗಿ ಯಡಿಯೂರಪ್ಪ ಅವರನ್ನು ಬಳಸಿಕೊಂಡು ಬದಿಗೆ ಸರಿಸಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್‌ ಕಮಲ ಮಾಡಿಸಿ ಅಧಿಕಾರಕ್ಕೆ ಬಂದಾಗಲೂ ಪೂರ್ಣಾವಧಿ ಅಧಿಕಾರ ಮಾಡಲು ಬಿಡಲಿಲ್ಲ. 

ಮಾನಸಿಕವಾಗಿ, ದೈಹಿಕವಾಗಿ ಸದೃಢ ಇದ್ದಾಗಲೂ ಅಧಿಕಾರದಿಂದ ಕೆಳಗಿಳಿಸಿದರು. ಇದೀಗ ವಯಸ್ಸಾಗಿದೆ ಎಂದು ಕೆಳಗಿಳಿಸಿದ್ದಾರೆ. ಇದರ ಅರ್ಥ ಯಡಿಯೂರಪ್ಪ ಅವರನ್ನ ಬಿಜೆಪಿ ಬಳಸಿಕೊಂಡಿದೆಯಷ್ಟೇ ಎಂದು ಟೀಕಿಸಿದರು. ಬಿ.ಎಸ್‌. ಯಡಿಯೂರಪ್ಪ ಹಿರಿಯ ನಾಯಕರು. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು. ಹಿಂದೆ ಅವರು ಮುಖ್ಯಮಂತ್ರಿ ಆಗಿದ್ದಾಗ ಜೈಲಿಗೆ ಹೋಗುವ ಸಂದರ್ಭ ಬಂತು ರಾಜೀನಾಮೆ ನೀಡಿದರು. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲದಿದ್ದರೂ ಬಿಜೆಪಿಯು ಹೇಗೆ ನಡೆಸಿಕೊಂಡಿದೆ ಎಂಬುದನ್ನು ಜನರು ನೋಡುತ್ತಿದ್ದಾರೆ ಎಂದರು.

ನಮಗೂ ಸಾಮರ್ಥ್ಯ ಇದೆ ಎಂದು ಸಿಎಂ ಖುರ್ಚಿಗೆ ಟವಲ್ ಹಾಕಿದ್ರಾ ಎಂ.ಬಿ.ಪಾಟೀಲ್?

ಸಿಎಂ ಹುದ್ದೆಗೆ ಎಂ.ಬಿ.ಪಾಟೀಲ್‌ ಟವೆಲ್‌: ‘ಅಹಿಂದ’ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಒಕ್ಕಲಿಗರ ಸಮುದಾಯದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಬಹಿರಂಗ ಆಸಕ್ತಿ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಇದೀಗ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಲಿಂಗಾಯತ ಮುಖಂಡ ಎಂ.ಬಿ.ಪಾಟೀಲ್‌ ಕೂಡ ಪರೋಕ್ಷವಾಗಿ ಮುಖ್ಯಮಂತ್ರಿ ಹುದ್ದೆಗೆ ದಾಳ ಎಸೆದಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್‌, ಸಿಎಂ ಹುದ್ದೆಗೆ ಬೇರೆ ನಾಯಕರು ಪೈಪೋಟಿ ನಡೆಸುವಾಗ ನನ್ನ ಹೆಸರು ಬರಬೇಕಿಲ್ಲ. ನಾವು ಬರಬೇಕಾದಾಗ ನೇರವಾಗಿ ಬರುತ್ತೇವೆ. ನಾವೇನು ಸೆಕೆಂಡ್‌ ಕ್ಲಾಸ್‌ ಸಿಟಿಜನ್‌ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಇವರಿಬ್ಬರ ಕದನದಲ್ಲಿ ಎಂ.ಬಿ.ಪಾಟೀಲ್‌ಗೆ ಅವಕಾಶ ಬರಬಹುದಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಇಬ್ಬರ ಕದನದಾಗ ಯಾಕಪಾ? ನಮಗೂ ಸಾಮರ್ಥ್ಯ ಇದೆ. ಯಾವಾಗ ಬೇಕೋ ಆವಾಗ ನೇರವಾಗಿಯೇ ಬರುತ್ತೇನೆ. ಯಾರೂ ಕೂಡ ಮೂಕ ಪ್ರೇಕ್ಷಕರಲ್ಲ. ಒಕ್ಕಲಿಗ ಇರಬಹುದು, ಲಿಂಗಾಯತ ಸಮುದಾಯವರು ಇರಬಹುದು. ಮುಸಲ್ಮಾನರು ಏಕೆ ಸಿಎಂ ಆಗಬಾರದು? ದಲಿತರು ಏಕೆ ಆಗಬಾರದು? ಎಂದು ಪ್ರಶ್ನಿಸಿದರು.

ಬಿಜೆಪಿ ವಿರುದ್ಧ ಜನರು ಸಿಡಿದೇಳುವ ದಿನ ದೂರ ಇಲ್ಲ: ಎಂ.ಬಿ.ಪಾಟೀಲ್‌

ಡಿ.ಕೆ.ಶಿವಕುಮಾರ್‌ ಒಕ್ಕಲಿಗ ಸಮಾವೇಶದಲ್ಲಿ ಒಕ್ಕಲಿಗ ಸಮಾಜ ಕ್ರೋಢೀಕರಿಸಲು ಒಂದು ಅವಕಾಶ ಬರಬಹುದು ಎಂದಿದ್ದಾರೆ. ನಾವು ಲಿಂಗಾಯತ ಸಮಾವೇಶಗಳಲ್ಲಿ ನಮಗೆ ಅವಕಾಶ ಕೊಡಿ ಎಂದು ಹೇಳುತ್ತೇವೆ. ವೀರೇಂದ್ರ ಪಾಟೀಲ್‌ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಆಗಿದ್ದಾಗ 176 ಸೀಟ್‌ ಬಂದಿದ್ದವು. ಕಾಲಾಂತರದಲ್ಲಿ ಬಹಳಷ್ಟುಸಮುದಾಯಗಳು ನಮ್ಮಿಂದ (ಕಾಂಗ್ರೆಸ್‌ನಿಂದ) ದೂರ ಸರಿದಿವೆ. ಲಿಂಗಾಯತರು ಸಹ ತಮ್ಮ ಪ್ರತಿನಿಧಿಯನ್ನು ಸಿಎಂ ಮಾಡುವಂತೆ ಕೇಳುತ್ತಾರೆ. ಅಷ್ಟೆಏಕೆ ದಲಿತರು, ನಾಯಕರು ಮೊದಲಾದ ಹಲವು ಸಮುದಾಯಗಳಿಗೆ ತಮ್ಮವರನ್ನು ಇನ್ನೂ ಕಾಂಗ್ರೆಸ್‌ ಮುಖ್ಯಮಂತ್ರಿ ಮಾಡಿಲ್ಲ ಎಂದು ಭಾವಿಸಿ ಆ ಸಮುದಾಯಗಳು ಆಗ್ರಹಿಸುತ್ತವೆ. 

Latest Videos
Follow Us:
Download App:
  • android
  • ios