ಕಾಂಗ್ರೆಸ್ ನಾಯಕರ ದೆಹಲಿ ನಾಟಕ ಕೇಳುವವರಿಲ್ಲ: ಕಾಮತ್ ಲೇವಡಿ
ರಾಜ್ಯ ಸರ್ಕಾರದ ದಾಟಿಯಲ್ಲೇ ನಾವೂ ಸಹ ಪ್ರಶ್ನಿಸುವುದಾದರೆ ಸರ್ಕಾರಕ್ಕೆ ನಮ್ಮ ಮಂಗಳೂರಿನಿಂದ ಕೋಟ್ಯಂತರ ರು. ತೆರಿಗೆ ಪಾವತಿಯಾಗುತ್ತಿದ್ದರೂ ನಮ್ಮ ದ.ಕ. ಜಿಲ್ಲೆಯ ಅಭಿವೃದ್ಧಿಗೆ ಅನುದಾನ ಏಕೆ ನೀಡುತ್ತಿಲ್ಲ? ಹಾಗಾದರೆ ನಮ್ಮ ಜಿಲ್ಲೆಯ ಜನರ ತೆರಿಗೆಯ ಹಣ ಯಾವುದಕ್ಕೆ ಬಳಕೆಯಾಗುತ್ತಿದೆ? ಕಾಂಗ್ರೆಸಿನ ಜಾಹಿರಾತುಗಳಿಗಾಗಿ ಕೋಟ್ಯಂತರ ರು. ಜನರ ತೆರಿಗೆ ಹಣವನ್ನು ವ್ಯಯಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಶಾಸಕ ವೇದವ್ಯಾಸ ಕಾಮತ್
ಮಂಗಳೂರು(ಫೆ.09): 2004 ರಿಂದ 2014ರ ವರೆಗೆ 10 ವರ್ಷ ಕಾಲ ಮನಮೋಹನ್ ಸಿಂಗ್ ಹಾಗೂ 2014 ರಿಂದ 2024ರ ವರೆಗೆ ನರೇಂದ್ರ ಮೋದಿಯವರ ಅವಧಿಯಲ್ಲಿ ಪ್ರತೀ ವರ್ಷ ಕರ್ನಾಟಕಕ್ಕೆ ಬಂದಿರುವ ಅನುದಾನಗಳೆಷ್ಟು? ಎಷ್ಟು ಪ್ರಮಾಣ ಏರಿಕೆಯಾಗಿದೆ? ಯಾವೆಲ್ಲಾ ಬದಲಾವಣೆಗಳಾಗಿವೆ? ಏನೆಲ್ಲ ಅಭಿವೃದ್ಧಿಯಾಗಿದೆ? ಇವೆಲ್ಲದರ ಅರಿವು ಜನಸಾಮಾನ್ಯರಲ್ಲಿ ಈಗಾಗಲೇ ಇದೆ. ಹಾಗಾಗಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ದೆಹಲಿ ನಾಟಕವನ್ನು ಕೇಳುವವರೇ ಇಲ್ಲವಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಲೇವಡಿ ಮಾಡಿದ್ದಾರೆ.
ರಾಜ್ಯ ಸರ್ಕಾರದ ದಾಟಿಯಲ್ಲೇ ನಾವೂ ಸಹ ಪ್ರಶ್ನಿಸುವುದಾದರೆ ಸರ್ಕಾರಕ್ಕೆ ನಮ್ಮ ಮಂಗಳೂರಿನಿಂದ ಕೋಟ್ಯಂತರ ರು. ತೆರಿಗೆ ಪಾವತಿಯಾಗುತ್ತಿದ್ದರೂ ನಮ್ಮ ದ.ಕ. ಜಿಲ್ಲೆಯ ಅಭಿವೃದ್ಧಿಗೆ ಅನುದಾನ ಏಕೆ ನೀಡುತ್ತಿಲ್ಲ? ಹಾಗಾದರೆ ನಮ್ಮ ಜಿಲ್ಲೆಯ ಜನರ ತೆರಿಗೆಯ ಹಣ ಯಾವುದಕ್ಕೆ ಬಳಕೆಯಾಗುತ್ತಿದೆ? ಕಾಂಗ್ರೆಸಿನ ಜಾಹಿರಾತುಗಳಿಗಾಗಿ ಕೋಟ್ಯಂತರ ರು. ಜನರ ತೆರಿಗೆ ಹಣವನ್ನು ವ್ಯಯಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ದ.ಕ.ದಲ್ಲಿ ಮರಳಿ ಕಾಂಗ್ರೆಸ್ ಗೆಲ್ಲಿಸಿ: ಕಾರ್ಯಕರ್ತರಿಗೆ ಸಚಿವ ಜಾರ್ಜ್ ಕರೆ
ಇತ್ತೀಚೆಗೆ ನಡೆದ ತೆಲಂಗಾಣದ ಚುನಾವಣೆಗೂ ನಮ್ಮ ರಾಜ್ಯದ ಕೋಟ್ಯಂತರ ರು. ತೆರಿಗೆ ಹಣವನ್ನು ಕಳ್ಳ ಮಾರ್ಗದಲ್ಲಿ ಸಾಗಿಸಿದ್ದು ಜನರು ಇನ್ನೂ ಮರೆತಿಲ್ಲ ಎಂದು ಅವರು ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.