Asianet Suvarna News Asianet Suvarna News

'ಅಧಿಕಾರಕ್ಕಾಗಿ SDPIನೊಂದಿಗೆ ಬಿಜೆಪಿ ದೋಸ್ತಿ'

ಮಂಗಳೂರಿನ ಪಾವೂರು ಗ್ರಾ.ಪಂನಲ್ಲಿ ಎಸ್ ಡಿಪಿಐ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ/ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ‌.ಖಾದರ್ ಆರೋಪ/ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆ/ ಇದ್ದದ್ದು ಮೂರೇ ಪಕ್ಷ,‌ ಒಂದು ಬಿಜೆಪಿ, ಕಾಂಗ್ರೆಸ್ ಮತ್ತು ಎಸ್ ಡಿಪಿಐ

Mangaluru BJP is with an alliance with SDPI alleges Congress Leader ut khader mah
Author
Bengaluru, First Published Feb 11, 2021, 5:34 PM IST

ಮಂಗಳೂರು( (ಫೆ. 11) ಮಂಗಳೂರಿನ  ಪಾವೂರು ಗ್ರಾಪಂನಲ್ಲಿ ಎಸ್ ಡಿಪಿಐ ಜೊತೆ ಬಿಜೆಪಿ ಮೈತ್ರಿ  ಮಾಡಿಕೊಂಡಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಯು.ಟಿ‌.ಖಾದರ್ ಆರೋಪ ಮಾಡಿದ್ದಾರೆ.

ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ. ಪಾವೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಜನರು ಯಾರಿಗೂ ಸ್ಪಷ್ಟ ಬಹುಮತ ಕೊಟ್ಟಿಲ್ಲ. ಆದ್ರೆ ನಾವು ಅಧ್ಯಕ್ಷಗಾದಿಗೆ ಯಾರ ಜೊತೆಗೂ ಒಪ್ಪಂದಕ್ಕೆ ಹೋಗಿಲ್ಲ. ಆದ್ರೆ ಅಲ್ಲಿ ಇವತ್ತು ಇದ್ದದ್ದು ಮೂರೇ ಪಕ್ಷ,‌ ಒಂದು ಬಿಜೆಪಿ, ಕಾಂಗ್ರೆಸ್ ಮತ್ತು ಎಸ್ ಡಿಪಿಐ.

ಒಂದಾಗಿ ಅಧಿಕಾರ ಹಿಡಿದ ಬದ್ಧ ವೈರಿಗಳು..ಬಿಜೆಪಿ-ಕಾಂಗ್ರೆಸ್ ದೋಸ್ತಿ

ನಾವು ಸಾಮಾಜಿಕ ತತ್ವ ಮತ್ತು ಸಿದ್ದಾಂತಗಳ ಗುರಿಯಲ್ಲಿ ಕೆಲಸ ಮಾಡ್ತಾ ಇದ್ದೇವೆ. ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿತ್ತು, ಅಧಿಕಾರ ವಹಿಸಿಕೊಂಡವರು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

5 ಕಾಂಗ್ರೆಸ್, 6 ಎಸ್ ಡಿಪಿಐ ಮತ್ತು 4 ಬಿಜೆಪಿ ಬೆಂಬಲಿತ ಬಲ ಇತ್ತು. ಕಾಂಗ್ರೆಸ್ ಯಾರ ಜೊತೆಗೂ ಒಪ್ಪಂದಕ್ಕೆ ಸಿದ್ದವಿರಲಿಲ್ಲ. ನಾವು ನಮ್ಮ ತತ್ವ ಸಿದ್ದಾಂತ ಬಿಟ್ಟು ಕೆಲಸ ಮಾಡಲ್ಲ. ರಾಜಕೀಯದಲ್ಲಿ ಅಭಿವೃದ್ಧಿ ವಾದ ಮತ್ತು ಅವಕಾಶವಾದ ಅನ್ನೋ ತತ್ವವಿದೆ. ನಾವು ಅಭಿವೃದ್ಧಿ ಮತ್ತು ವಿಚಾರವಾದದಲ್ಲೇ ಇದ್ದೇವೆ. ಅವಕಾಶವಾದ ಮಾಡೋರು ಈ ಹಂತಕ್ಕೆ ಮುಟ್ಟಿದ್ದು ಜನ ಅರ್ಥ ಮಾಡಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. 

Mangaluru BJP is with an alliance with SDPI alleges Congress Leader ut khader mah

Follow Us:
Download App:
  • android
  • ios