ಬೆಂಗಳೂರು(ಜೂ.06): ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರದಿದ್ದರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಕನಿಷ್ಠ 10 ಲೋಕಸಭಾ ಸೀಟುಗಳನ್ನಾದರೂ ಗೆಲ್ಲುತ್ತಿತ್ತು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಮೈತ್ರಿ ಸರ್ಕಾರದ ಕುರಿತು ಜನರಲ್ಲಿ ಅಸಮಾಧಾನವಿದ್ದು, ಈ ಕುರಿತು ಲೋಕಸಭೆ ಚುನಾವಣೆಗೂ ಮೊದಲೇ ತಾವು ಕಾಂಗ್ರೆಸ್ ನಾಯಕರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾಗಿ ಸುಮಲತಾ ಹೇಳಿದ್ದಾರೆ.

ಎಕನಾಮಿಕ್ಸ್ ಟೈಮ್ಸ್‌ಗೆ ವಿಶೇಷ ಸಂದರ್ಶನ ನೀಡಿರುವ ಸುಮಲತಾ, ಇದೇ ಮೊದಲ ಬಾರಿಗೆ ರಾಜ್ಯ ರಾಜಕಾರಣದ ಕುರಿತು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಜೆಡಿಎಸ್ ಜೊತೆಗಿನ ಮೈತ್ರಿಯೇ ಆ ಪಕ್ಷಕ್ಕೆ ಮುಳುವಾಯಿತು ಎಂದು ಸುಮಲತಾ ಹೇಳಿದ್ದಾರೆ.

ಮೈತ್ರಿ ಮಾಡಿಕೊಳ್ಳದೇ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ ಕನಿಷ್ಠ 10 ಸೀಟುಗಳನ್ನಾದರೂ ಗೆಲ್ಲುವ ಅವಕಾಶವಿತ್ತು ಎಂದು ಸುಮಲತಾ ಚುನಾವಣೆ ವಿಶ್ಲೇಷಣೆ ಮಾಡಿದ್ದಾರೆ.