Asianet Suvarna News Asianet Suvarna News

Mandya: ನಾಥಪಂಥ, ಒಕ್ಕಲಿಗರಿಗೆ ಅವಮಾನ: ಜೆಡಿಎಸ್‌ ರಾಜ್ಯಾಧ್ಯಕ್ಷ ಇಬ್ರಾಹಿಂ ವಿರುದ್ಧ ಬಿಜೆಪಿ ಪ್ರತಿಭಟನೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಲವ್ ಬಗ್ಗೆ ಗೊತ್ತಿಲ್ಲ, ಮೊದಲು ಲವ್ ಮಾಡಲು ಹೇಳಿ ಎಂದಿದ್ದ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಮ್ ಹೇಳಿಕೆ ಖಂಡಿಸಿ ಮಂಡ್ಯದಲ್ಲಿ ಹಿಂದೂಪರ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Mandya Disgrace to NathaPanth and vokkaliga BJP protests against JDS state president Ibrahim sat
Author
First Published Jan 11, 2023, 4:19 PM IST

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಡ್ಯ (ಜ.11): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಲವ್ ಬಗ್ಗೆ ಗೊತ್ತಿಲ್ಲ, ಮೊದಲು ಲವ್ ಮಾಡಲು ಹೇಳಿ ಎಂದಿದ್ದ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಮ್ ಹೇಳಿಕೆ ಖಂಡಿಸಿ ಮಂಡ್ಯದಲ್ಲಿ ಹಿಂದೂಪರ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಂಡ್ಯ ನಗರದ ಸಂಜಯ ವೃತ್ತದಿಂದ ಆರಂಭವಾದ ಪ್ರತಿಭಟನೆ ರ‌್ಯಾಲಿ ಜಿಲ್ಲಾಧಿಕಾರಿ ಕಚೇರಿ ವರೆಗೂ ಸಾಗಿತು.  ಯೋಗಿ ಆದಿತ್ಯ ನಾಥ ವಿರುದ್ಧ ಹೇಳಿಕೆ ನೀಡಿರುವ ಇಬ್ರಾಹಿಮ್ ನಾಥ ಪರಂಪರೆ ಹಾಗೂ ಒಕ್ಕಲಿಗರಿಗೆ ಅಪಮಾನ ಎಸಗಿದ್ದಾರೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾವಿರಾರು ಹಿಂದೂ ಮತ್ತು ಬಿಜೆಪಿ ಕಾರ್ಯಕರ್ತರು ಇಬ್ರಾಹಿಮ್ ವಿರುದ್ಧ ಧಿಕ್ಕಾರ ಕೂಗೂತ್ತ ಹೆಜ್ಜೆ ಹಾಕಿದ್ರು. ಸಿಎಂ ಇಬ್ರಾಹಿಮ್ ಪ್ರತಿಕೃತಿಗೆ ಚಪ್ಪಲಿಯಿಂದ ಒದ್ದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ಐವರು ಪುರುಷರಿಗೆ ಬುರ್ಖಾ ತೊಡಿಸಿ, ಇವರು ಇಬ್ರಾಹಿಮ್ ಅವರ ಪತ್ನಿಯರು ಎಂದು ಬೋರ್ಟ್ ಹಾಕುವ ಮೂಲಕ ವ್ಯಂಗ್ಯ ಮಾಡಿದರು.

ಮೂರು ತಿಂಗಳಲ್ಲಿ ನಾನೇ ಮುಖ್ಯಮಂತ್ರಿ: ಕುಮಾರಸ್ವಾಮಿ

ಪ್ರತಿಕೃತಿ ಕಿತ್ತುಕೊಂಡು ವಾಪಾಸ್ ಕೊಟ್ಟ ಪೊಲೀಸರು:  ಯುಪಿ‌ ಸಿಎಂ ಯೋಗಿ ಆದಿತ್ಯ ನಾಥ್ ವಿರುದ್ಧ ಸಿಎಂ ಇಬ್ರಾಹಿಂ ನೀಡಿದ್ದ ಹೇಳಿಕೆ ಖಂಡಿಸಿ ಹಮ್ಮಿಕೊಳ್ಳಲಾದ್ದ ಪ್ರತಿಭಟನಾ ರ‌್ಯಾಲಿ ಡಿಸಿ ಕಚೇರಿಗೆ ಬಂದು ತಲುಪಿತ್ತು. ಈ ವೇಳೆ ಇಬ್ರಾಹಿಂ ಪ್ರತಿಕೃತಿ ಸುಡಲು ಬಿಜೆಪಿ ಕಾರ್ಯಕರ್ತರು ಮುಂದಾಗಿದ್ದರು. ತತಕ್ಷಣ ಬಿಜೆಪಿ ಕಾರ್ಯಕರ್ತರಿಂದ ಇಬ್ರಾಹಿಮ್ ಪ್ರತಿಕೃತಿ ಕಿತ್ತುಕೊಂಡ ಸಿಪಿಐ ರಮೇಶ್ ತಮ್ಮ ಜೀಪಿನಲ್ಲಿ ಹೊತ್ತೊಯ್ದರು. ಪ್ರತಿಭಟನೆ ಮಾಡೋದು ನಮ್ಮ ಹಕ್ಕು, ಪ್ರತಿಕೃತಿ ವಾಪಸ್ಸು ಕೊಡುವಂತೆ ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದರು. ಈ ವೇಳೆ ಮಂಡ್ಯದ ಡಿಸಿ ಕಚೇರಿ ಬಳಿ ಪೊಲೀಸರು ಹಾಗೂ ಹಿಂದೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಬಿಜೆಪಿ ಕಾರ್ಯಕರ್ತರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಪ್ರತಿಕೃತಿ ವಾಪಾಸ್ ಕೊಟ್ಟ ಘಟನೆ ನಡೆಯಿತು. ನಂತರ ಡಿಸಿ ಕಚೇರಿ ಬಳಿಯೇ ಸಿಎಂ ಇಬ್ರಾಹಿಮ್ ಪ್ರತಿಕೃತಿ ದಹಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

Mandya: ಎತ್ತಿನಗಾಡಿ ಓಟದ ಸ್ಪರ್ಧೆ: ವೀಕ್ಷಕರ ಮೇಲೆ ಹರಿದ ಎತ್ತಿನಗಾಡಿ ರೈತ ಸಾವು

ಜೆಡಿಎಸ್‌ ವಿರುದ್ಧ ಜಾತಿ ಅಸ್ತ್ರ ಪ್ರಯೋಗಿಸುತ್ತಿರುವ ಬಿಜೆಪಿ: 
ಸ್ಪಷ್ಟ ಬಹುಮತ ಸಾಧಿಸಲು ಹಳೇ ಮೈಸೂರು ಭಾಗವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಬಿಜೆಪಿಗಿದೆ. ಹಾಗಾಗಿಯೇ ಮೈಸೂರು ಭಾಗದಲ್ಲಿ ಅದರಲ್ಲೂ ಮಂಡ್ಯದಲ್ಲಿ ಬಿಜೆಪಿ ನೆಲೆಯೂರಲು ಪ್ರಯತ್ನಿಸುತ್ತಿದೆ.   ಇದೀಗ ಸಿಎಂ ಇಬ್ರಾಹಿಮ್ ಹೇಳಿಕೆ ಇಟ್ಟುಕೊಂಡು ದಳಪತಿಗಳನ್ನ ಬಿಜೆಪಿ ಟಾರ್ಗೆಟ್ ಮಾಡಿದೆ. ಯೋಗಿ ವಿರುದ್ಧ ಮಾತನಾಡಿ ನಾಥಪರಂಪರೆ ಹಾಗೂ ಒಕ್ಕಲಿಗರಿಗೆ ಇಬ್ರಾಹಿಮ್ ಅಪಮಾನ ಮಾಡಿದ್ದಾರೆ. ಇಬ್ರಾಹಿಮ್ ಹೇಳಿಕೆ ಖಂಡಿಸದೆ ಹಾಗೂ ಕ್ರಮವಹಿಸದೆ ಜೆಡಿಎಸ್ ನಾಯಕರು ಮೌನಕ್ಕೆ ಶರಣಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿಪಿ ಉಮೇಶ್, ಮಾಜಿಸಚಿವ ಸಿಪಿ ಯೋಗೇಶ್ವರ , ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಡಾ.ಇಂದ್ರೇಶ್, ಮುನಿರಾಜು, ಎಸ್‌ಪಿ ಸ್ವಾಮಿ ಸೇರಿದಂತೆ ಹಲವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Follow Us:
Download App:
  • android
  • ios