ಲೋಕಸಭಾ ಚುನಾವಣೆಗೆ ಒಂದು ಸಾಲಿನ ನಿರ್ಣಯ ಬರೆದು ಕಳಿಸಿದ ಕಾಂಗ್ರೆಸ್
ಲೋಕಸಭಾ ಚುನಾವಣೆಯಲ್ಲಿ ಹೈಕಮಾಂಡ್ ಟಿಕೆಟ್ ಕೊಡುವ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯ (ಅ.07): ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಸಮರ್ಥವಾಗಿದೆ. ಮುಂಬರುವ ಲೋಕಸಭಾ ಚುನಾವಣಾಯಲ್ಲಿ ಪಕ್ಷಗಾಗಿ ದುಡಿದವರಿಗೆ ಟಿಕೆಟ್ ನೀಡುತ್ತೇವೆ. ಟಿಕೇಟ್ ಬಗ್ಗೆ ಪಕ್ಷದ ಅಧ್ಯಕ್ಷರು ಹಾಗೂ ಸಿಎಂಗೆ ತಾವು ಆಯ್ಕೆ ಮಾಡಿದ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಒಂದು ಸಾಲಿನ ನಿರ್ಣಯ ಕಳುಹಿಸಲಿದ್ದೇವೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯ ನಗರದ ಸುಮರವಿ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಬಲ ಇದೆ. ಲೋಕಸಭಾ ಚುನಾವಣೆ ಬಗ್ಗೆ ಪಕ್ಷದ ವರಿಷ್ಠರಿಗೆ ಒಂದು ಸಾಲಿನ ನಿರ್ಣಯ ಕಳುಹಿಸಲಿದ್ದೇವೆ. ನಮ್ಮೆಲ್ಲರ ಅಭಿಪ್ರಾಯಕ್ಕೆ ಮನ್ನಣೆ ಸಿಗಲಿದೆ. ಚುನಾವಣೆಗೂ ಮುನ್ನ ಜೆಡಿಎಸ್ ಮೈತ್ರಿಯಾದ ಇತಿಹಾಸ ಇರಲಿಲ್ಲ. ದೇವೇಗೌಡರು ಮಾಜಿ ಪ್ರಧಾನಿಗಳು ಅವರ ಬಗ್ಗೆ ಗೌರವವಿದೆ. ಬಿಜೆಪಿ ಜೆಡಿಎಸ್ ಗೆ ಮೈತ್ರಿ ಅನಿವಾರ್ಯ. ನಮಗೆ ಅದರ ಬಗ್ಗೆ ಚಿಂತೆ ಇಲ್ಲ. ಇಬ್ಬರಿಗೂ ಒಬ್ಬರಿಗೊಬ್ಬರು ಅನಿವಾರ್ಯ. ನಮಗೆ ಇವರು ಅನಿವಾರ್ಯ ಅಲ್ಲ, ನಮಗೆ ಜನರು ಅನಿವಾರ್ಯ ಎಂದರು.
ರೈತ ಹಂತಕ ಸಿಎಂ ಸಿದ್ದರಾಮಯ್ಯ ಎಂದು ಫೋಟೋ ಹರಿಬಿಟ್ಟ ಬಿಜೆಪಿ
ಸುಪ್ರೀಂ ಕೋರ್ಟ್ ಆದೇಶದಂತೆ ನೀರನ್ನ ಹರಿಸಿದ್ದೇವೆ. ಇದೀಗ ಪ್ರಾಧಿಕಾರ ಕೂಡ ನೀರು ಹರಿಸಲು ಆದೇಶಿಸಿದೆ. ನಾವೂ ನೀರು ಬಿಡಲು ಆಗಲ್ಲ ಎಂದು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದೇವೆ. ಕಾವೇರಿ ವಿಚಾರವಾಗಿ ಸಾರ್ವಜನಿಕವಾಗಿ ಮಾತನಾಡುವ ಆಗಿಲ್ಲ. ನಮಗೆ ಎಚ್ಚರಿಕೆ ಕೊಡುವ ಅಧಿಕಾರ ನಿಮಗೆ ಇದೆ. ಚುನಾವಣೆಗೆ ಮೈತ್ರಿಯಾಗಿದ್ದಾರಲ್ಲ ಬಿಜೆಪಿ-ಜೆಡಿಎಸ್, ಅವರನ್ನು ನೀವು ಪ್ರಶ್ನೆ ಮಾಡಬೇಕಿದೆ. ಮೇಕೆದಾಟು ಯೋಜನೆ ಜಾರಿಗೆ ತಂದರೇ ಕಾವೇರಿ ಸಮಸ್ಯೆ ಇರಲ್ಲ. ಮೇಕೆದಾಟ ಜಾರಿಗೆ ನಾವೂ ರೆಡಿಯಿದ್ದೇವೆ. ಹೋರಾಟಗಾರರಿಗೆ ಬಿಜೆಪಿಯವರನ್ನ ನೀವೇ ಪ್ರಶ್ನೆ ಮಾಡಡಬೇಕು. ನಾವೂ ಒಂದು ಪಕ್ಷದ ಪರ, ವಿರೋಧವಾಗಿ ಬಂದಿಲ್ಲ. ಇಂದು ನಿಮ್ಮನ್ನು ಪ್ರಶ್ನೆ ಮಾಡ್ತೇವೆ ಎಂದರು.
ಕಾವೇರಿ ನೀರು ವಿಚಾರವಾಗಿ ಕೇಂದ್ರ ಸ್ಪಂದಿಸಲು ತಯಾರಿಲ್ಲ. ಬರದ ಪರಿಸ್ಥಿತಿ ಹೇಳಲು ಭೇಟಿಗೆ ಅವಕಾಶ ನೀಡುತ್ತಿಲ್ಲ. ಇಂತಹವರ ಜೊತೆ ಈಗ ಜೆಡಿಎಸ್ ಜೊತೆಯಾಗಿದ್ದಾರೆ. ಕಾವೇರಿ ಬಗ್ಗೆ ಮಾತನಾಡುವ ಯಡಿಯೂರಪ್ಪ ಬೊಮ್ಮಾಯಿ, ಕುಮಾರಸ್ವಾಮಿ, ಪ್ರಧಾನಿ ಬಳಿ ಹೋಗಬಹುದಿತ್ತು. ರಾಜ್ಯದ ಹಿತಕ್ಕಾಗಿ ನೀವು ಮಧ್ಯಪ್ರವೇಶಿಸಿ ಎನ್ನಬಹುದಿತ್ತು. ಆದರೆ ಅವರಿಗೆ ರಾಜ್ಯದ ಜನರ ಹಿತ ಕಾಯುವ ಆಸಕ್ತಿ ಇಲ್ಲ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಅಭಿವೃದ್ಧಿಗೂ ಪಣತೊಟ್ಟಿದೆ. ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ನೀಡುತ್ತಿದ್ದೇವೆ ಎಂದರು.
ಕುಮಾರಸ್ವಾಮಿ ಕೊಟ್ಟ 8 ಸಾವಿರ ಕೋಟಿ ರೂ. ಹುಡುಕುತ್ತಿದ್ದೇನೆ: ಗ್ಯಾರಂಟಿ ಜಾರಿಗೊಳಿಸಿ ಅಭಿವೃದ್ಧಿಗೂ ಸರ್ಕಾರದಲ್ಲಿ ಹಣವಿದೆ. ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ನೀಡಲಾಗ್ತಿದೆ. ಮಂತ್ರಿಯಾದ ಮೇಲೆ ಹೆಚ್ಡಿಕೆ ಕೊಟ್ಟಿದ್ದ 8ಸಾವಿರ ಕೋಟಿ ಅನುದಾನ ಹುಡುಕುತ್ತಿದ್ದೇನೆ. ಮಂಡ್ಯಕ್ಕೆ ಕೊಟ್ಟಿದ್ದ 8ಸಾವಿರ ಕೋಟಿ ಅನುದಾನ ಎಲ್ಲಿದೆ ಎಂದು ಅಧಿಕಾರಿಗಳಿಗೂ ಕೇಳಿದೆ. ಹೆಚ್ಡಿಕೆ ಅನುದಾನ ಇಟ್ಟಿದಿದ್ರೆ ನಮ್ಮ ಸರ್ಕಾರದಲ್ಲಿ ಜಾರಿಗೊಳಿಸಿಬಹುದಿತ್ತು. ಮಾಜಿಸಿಎಂ ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ವ್ಯಂಗ್ಯವಾಡಿದರು. 104 ಸೀಟು ಗೆದ್ದಾಗ ಆಪರೇಷನ್ ಕಮಲ ಮೂಲಕ ಸರ್ಕಾರ ಮಾಡಿದ್ರು. ಈಗ 136ಸ್ಥಾನ ಗೆದ್ದಿದ್ದೇವೆ. ಅವರು ಹೇಳಿದಾಕ್ಷಣ ಸರ್ಕಾರ ಬಿಳೋಕೆ ನಾವೇನು ಕಳ್ಳೆಕಾಯಿ ತಿನ್ನುತ್ತಾ ಇರ್ತೀವಾ? ಎಂದರು.
ಆರ್‌ಎಸ್‌ಎಸ್ ಮುಖಂಡನಿಗೆ ಹೃದಯಾಘಾತ: ಕಾರಲ್ಲಿ ಕುಳಿತುಕೊಂಡೇ ಪ್ರಾಣಬಿಟ್ರು
ಪಕ್ಷಕ್ಕಾಗಿ ಕೆಲಸ ಮಾಡಿದವರೇ ಅಭ್ಯರ್ಥಿಯಾಗ್ತಾರೆ: ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರು ಮಾತನಾಡಿ, ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಿಎಂ, ಡಿಸಿಎಂಗೆ ಬಿಟ್ಟಿದ್ದೇವೆ. ಕಾರ್ಯಕರ್ತರು, ಮುಖಂಡರು ಒಮ್ಮತದ ನಿರ್ಧಾರ ತಿಳಿಸಿದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡಿದವರೆ ಅಭ್ಯರ್ಥಿ ಆಗಲಿದ್ದಾರೆ. ಕಾಂಗ್ರೆಸ್ ಪಕ್ಷ ಗೆಲ್ಲಲು ಹಿರಿಯ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಣ್ಣ,ಶಾಸಕರಾದ, ಪಿ.ಎಂ ನರೇಂದ್ರಸ್ವಾಮಿ, ರಮೇಶ ಬಾಬು ಬಂಡಿಸಿದ್ದೇಗೌಡ,ದಿನೇಶ್ ಗೂಳಿಗೌಡ,ಮಧು ಜಿ ಮಾದೇಗೌಡ,ಮಾಜಿ ಶಾಸಕರಾದ ಬಿ.ರಾಮಕೃಷ್ಣ,ಹೆಚ್.ಬಿ.ರಾಮು,ಕೆ.ಬಿ.ಚಂದ್ರಶೇಕರ್,ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಸೇರಿದಂತೆ ಪಕ್ಷದ ಮುಖಂಡರುಗಳು ಹಾಜರಿದ್ದರು.