ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಭಾವ್ಯ ಅಭ್ಯರ್ಥಿಯಿಂದ ಅಬ್ಬರದ ಪ್ರಚಾರ ಆರಂಭ

2023 ರ ಚುನಾವಣೆ ಪ್ರಚಾರ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದ ಅಬ್ಬರದಿಂದ ಸಾಗುತ್ತಿದೆ.

Malur Assembly Constituency Massive campaign by BJP potential candidate at kolar rav

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ (ಫೆ.26) : 2023 ರ ಚುನಾವಣೆ ಪ್ರಚಾರ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದ ಅಬ್ಬರದಿಂದ ಸಾಗುತ್ತಿದೆ.

 ಬಿಜೆಪಿ ಪಕ್ಷದ ಸಂಭಾವ್ಯ ಅಭ್ಯರ್ಥಿ ಹೂಡಿ ವಿಜಯಕುಮಾರ್(Hoodi Vijayakumar) ಅವರ ಪ್ರಚಾರದಲ್ಲಿ ಅದ್ದೂರಿತನ ಕಾಣುಸುತ್ತಿದ್ದು ಪ್ರತಿ ಗ್ರಾಮದ ಯುವಕರನ್ನು ಭೇಟಿ ಮಾಡಿ ಸುಮಾರು 3 ಸಾವಿರ ವೆಚ್ಚದ ಕ್ರಿಕೆಟ್ ಕಿಟ್(Cricket kit) ಹಾಗೂ 2 ಸಾವಿರ ವೆಚ್ಚದ ವಾಲಿಬಾಲ್ ಕಿಟ್ ಗಳನ್ನು ಕೊಡುವ ಮೂಲಕ ಯುವಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ.

ಈಗಾಗಲೇ ಸುಮಾರು 800 ಕಿಟ್ ಗಳನ್ನು ವಿತರಣೆ ಮಾಡಿದ್ದು,ಉಚಿತ ಡ್ರೈವಿಂಗ್ ಲೈಸೆನ್ಸ್(Free Driving licence) ಸಹ ಮಾಡಿಸಿಕೊಡುವುದಾಗಿ ಭರವಸೆ ನೀಡ್ತಿದಾರೆ.ಇದರ ಜೊತೆ ಆಟೋ ಚಾಲಕರಿಗೆ ಉಚಿತ 2 ಮೂಟೆ ಅಕ್ಕಿಯ ಜೊತೆ ನೀರಿನ ಕ್ಯಾನ್ ಗಳನ್ನು ಕೊಡುವ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ.

ಉದ್ಯೋಗ ಸೃಷ್ಟಿಸುವಂಥ ಉದ್ಯಮಿಗಳಾಗಬೇಕು: ಸಂಸದ ಮುನಿಸ್ವಾಮಿ

ಇನ್ನು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ(Krishnaiah shetty) ಬೆಂಗಳೂರಿನ ಗಾಂಧಿ ನಗರ ಕ್ಷೇತ್ರ(Gandhinagar Constituency)ಕ್ಕೆ ತೆರಳಿದ ಬಳಿಕ ಸತತ 4 ವರ್ಷಗಳಿಂದ ಹೂಡಿ ವಿಜಯಕುಮಾರ್ ಅವರು ಮಾಲೂರು ವಿಧಾನಸಭಾ ಕ್ಷೇತ್ರ(Malur assembly constituency)ದಲ್ಲಿ ಓಡಾಟ ಮಾಡುತ್ತಿದ್ದು ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಆದ್ರೀಗ ಕ್ಷೇತ್ರದ ಮಾಜಿ ಶಾಸಕ ಮಂಜುನಾಥ್ ಗೌಡ ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗಿದ್ದು ಟಿಕೇಟ್ ಗಾಗಿ ತೀವ್ರ ಪೈಪೋಟಿ ಆರಂಭವಾಗಿದೆ.

ಮೂಲ ಆರೆಸ್ಸೆಸ್ ಹಾಗೂ ಬಿಜೆಪಿ ಪಕ್ಷದವರಾಗಿರುವ ಹೂಡಿ ವಿಜಯಕುಮಾರ್ ಅವರು ಇಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡರು ಸಹ ಸತತ 4 ವರ್ಷಗಳಿಂದ ಸೇವೆ ಮಾಡಿಕೊಂಡು ಬಂದಿದ್ದಾರೆ ಅನ್ನೋ ಸಿಂಪತಿಯ ಜೊತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಹೆಚ್ಚಿನದಾಗಿ ತಲುಪಿಸಿದ್ದಾರೆ ಅನ್ನೋದು ಇಲ್ಲಿನ ಮೂಲ ಬಿಜೆಪಿಗರಲ್ಲಿ ಇದೆ.

ಇನ್ನು ಕಾಂಗ್ರೆಸ್ ನ ವೋಟು ಬ್ಯಾಂಕ್(Congress vote bank) ಇರುವ ಮಾಸ್ತಿ ಹೋಬಳಿಯಲ್ಲಿ ನೂತನ ಬಿಜೆಪಿ  ಕಚೇರಿಯನ್ನು ತೆರೆದಿರುವ ಹೂಡಿ ವಿಜಯಕುಮಾರ್ ಅವರು ಹಾಲಿ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ವಿರುದ್ಧ ವಾಗ್ದಾಳಿ ಮಾಡುವ ಮೂಲಕ ಕಾಂಗ್ರೆಸ್ ವೋಟು ಬ್ಯಾಂಕ್ ಗೆ ಕೈ ಹಾಕಿದ್ದಾರೆ.50 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಆಯುಷ್ಮನ್ ಭಾರತ್ ಕಾರ್ಡ್(Ayushman bharat card) ತಲುಪಿಸಿದ್ದೇವೆ,4 ಸಾವಿರಕ್ಕೂ ಅಧಿಕ ಈ -ಶ್ರಮ ಕಾರ್ಡ್(E-shrama card) ತಲುಪಿಸಿದ್ದೇವೆ. ನಾವು ನಾಲ್ಕು ವರ್ಷಗಳಿಂದ ತಾಲೂಕಿನಲ್ಲಿ ಏನು ಕೆಲಸ ಮಾಡಿದ್ದೇವೆ ಅನ್ನೋದು ಜನರಿಗೆ ಗೊತ್ತಿದೆ, ಯಾವುದೇ ಗ್ರಾಮಕ್ಕೆ ಹೋದ್ರು ಕೋವಿಡ್ ಸಮಯದಲ್ಲಿ ಮಾಡಿರುವ ನನ್ನ ಸೇವೆಯನ್ನು ಜನರು ಗುರುತಿಸುತ್ತಿದ್ದಾರೆ. ತಾಲೂಕಿನ ಶಾಸಕರ ಅಭಿವೃದ್ಧಿ ಬಗ್ಗೆ ಜನರು ಬೇಸತ್ತಿದ್ದಾರೆ. ತಾಲೂಕಿನ ಮುಖ್ಯ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳು ಹದಗೆಟ್ಟಿದ್ದು ಸಂಪೂರ್ಣ ಧೂಳಿನಿಂದ ಆವರಿಸಿಕೊಂಡಿದೆ, ವಾಹನ ಸವಾರರು ಧೂಳಿನಲ್ಲೇ ಓಡಾಡುವ ಅನಿವಾರ್ಯತೆ ಎದುರಾಗಿದೆ. ಬಡವರಿಗೆ 5 ವರ್ಷದಲ್ಲಿ ಒಂದೇ ಒಂದು ಸೈಟ್ ನೀಡಿಲ್ಲ, ಕಿನ ಆಡಳಿತ  ಕುಸಿದು ಹೋಗಿದ್ದು, ರೈತರು ಪಿ ನಂಬರ್ ಪರಿಹಾರ ಮಾಡಿಲ್ಲ, ಶಾಸಕರ ಅನುದಾನದಲ್ಲಿ ಒಂದೇ ಒಂದು ಮನೆ ನಿರ್ಮಾಣ ಮಾಡಿಲ್ಲ. ನಾನು ಶಾಸಕನಾದ್ರೆ ಒಂದೇ ವರ್ಷದಲ್ಲಿ 10 ರಿಂದ 15 ಸಾವಿರ ಬಡವರಿಗೆ ಉಚಿತ ಸೈಟ್ ಗಳನ್ನು ನೀಡುತ್ತೇನೆ. ಯುವಕರಿಗೆ ಉದ್ಯೋಗ ಕೊಡಿಸುವ ಆದ್ಯತೆ ಮೂಲಭೂತ ಸೌಕರ್ಯಗಳನ್ನು ಕೊಡುವ ಕೆಲಸ, ಹೈಟೆಕ್ ತಾಲೂಕು ಸರ್ಕಾರಿ ಆಸ್ಪತ್ರೆ ನಿರ್ಮಾಣ, ಅಧಿಕಾರಿಗಳಿಗೆ ಲಂಚ ನೀಡದೆ ರೈತರ ಪಿ ನಂಬರ್ ದುರಸ್ಥಿ ಮಾಡುವ ಕೆಲಸ ಮಾಡ್ತೇನೆ ಎಂದು ಭರವಸೆ ನೀಡಿದ್ದಾರೆ..

ಇನ್ನು ಮಾಜಿ ಶಾಸಕ ಮಂಜುನಾಥ ಗೌಡ ಅವರನ್ನು ಬಿಜೆಪಿಗೆ ಕರೆತಂದಿರುವ ಸಂಸದ ಮುನಿಸ್ವಾಮಿ(MP Muniswamy) ಅವರು ಮಂಜುನಾಥ ಗೌಡ ಅವರಿಗೆ ಟಿಕೇಟ್ ಆಗುತ್ತೆ ಅಂತ ಸಿಕ್ಕ ಸಿಕ್ಕಲ್ಲಿ ಭಾಷಣ ಮಾಡುತ್ತಿದ್ರೂ. ಆದ್ರೆ ಕಳೆದ ತಿಂಗಳು ರಾಷ್ಟ್ರೀಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ(BL Santosh) ಅವರು ಕೋಲಾರ ಪ್ರವಾಸ ಮಾಡಿದ ವೇಳೆ ಸಂಸದ ಮುನಿಸ್ವಾಮಿ ಸೇರಿದಂತೆ ಕೆಲ ನಾಯಕರಿಗೆ ಬಿಜೆಪಿ ಪಕ್ಷದಲ್ಲಿ ನಮ್ಮದೇ ಆಗಿರುವ ಸಿದ್ದಾಂತಗಳು ಇದೆ. ಟಿಕೆಟ್ ಇಂತಹವರಿಗೆ ಅಂತ ಹೇಳಿಕೊಂಡು ತಿರುಗಾಡಬಾರದು ಅಂತ ಖಡಕ್ ಸೂಚನೆ ನೀಡಿದ ಬಳಿಕ ಹೂಡಿ ವಿಜಯ ಕುಮಾರ್ ಹಾಗೂ ಮಂಜುನಾಥ ಗೌಡ ಅವರು ಪ್ರಚಾರದಲ್ಲಿ ಮುಳುಗಿದ್ದಾರೆ. 

ರಾಜ್ಯ ಬಿಜೆಪಿ ಸರ್ಕಾರ ಲೂಟಿಗೆ ಮುಂದಾಗಿದೆ: ರಣದೀಪ್‌ ಸಿಂಗ್‌ ಸುರ್ಜೇವಾಲ

ಇನ್ನು ಟಿಕೆಟ್ ಯಾರಿಗೆ ಸಿಗುತ್ತ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಹೂಡಿ ವಿಜಯ ಕುಮಾರ್ ಬಿಜೆಪಿ ಪಕ್ಷದಲ್ಲಿ ನನಗೆ ಟಿಕೆಟ್ ಸಿಗೋದ್ರಲ್ಲಿ ಯಾವುದೇ ಗೊಂದಲವಿಲ್ಲ,ಕೆಲಸ ಮಾಡುವ ಸಾಮಾನ್ಯ ಕಾರ್ಯಕರ್ತರನ್ನು ಬಿಜೆಪಿ ಗುರುತಿಸುತ್ತೆ ಅನ್ನೋ ವಿಶ್ವಾಸದಿಂದ ಕೆಲಸ ಮಾಡ್ತಿದ್ದೇನೆ ಅಂತ ತಿಳಿಸಿದ್ರು.

Latest Videos
Follow Us:
Download App:
  • android
  • ios