ರಾಹುಲ್‌ರನ್ನು ಜೈಲಿಗೆ ಹಾಕ್ಲಿ ನೋಡೋಣ: ಬಿಜೆಪಿ ಸರ್ಕಾರದ ವಿರುದ್ಧ ಖರ್ಗೆ ಗುಡುಗು
ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಯಾವತ್ತೂ ಹೆದರಿಲ್ಲ, ಹೆದರುವುದೂ ಇಲ್ಲ. ಎಷ್ಟುದಿನ ಅವರಿಗೆ ಕಷ್ಟಕೊಡುತ್ತಾರೋ ಕೊಡಲಿ, ಏನು ಅವರನ್ನು ಜೈಲಿಗೆ ಹಾಕುತ್ತಾರೋ? ತೆಗೀತಾರೋ ನೋಡಿಯೇ ಬಿಡೋಣ ಎಂದು ಎಐಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಳಗಾವಿ (ಮಾ.21) : ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಯಾವತ್ತೂ ಹೆದರಿಲ್ಲ, ಹೆದರುವುದೂ ಇಲ್ಲ. ಎಷ್ಟುದಿನ ಅವರಿಗೆ ಕಷ್ಟಕೊಡುತ್ತಾರೋ ಕೊಡಲಿ, ಏನು ಅವರನ್ನು ಜೈಲಿಗೆ ಹಾಕುತ್ತಾರೋ? ತೆಗೀತಾರೋ ನೋಡಿಯೇ ಬಿಡೋಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಸಿಪಿಎಡ್ ಮೈದಾನದಲ್ಲಿ ಸೋಮವಾರ ಕಾಂಗ್ರೆಸ್ ಯುವ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿ, ರಾಹುಲ…ರಾಹುಲ್ ಗಾಂಧಿ(Rahul gandhi) ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4 ಸಾವಿರ ಕಿ.ಮೀ. ಪಾದಯಾತ್ರೆ ಮಾಡಿದ್ದಾರೆ. ಜಮ್ಮು ಕಾಶ್ಮೀರ ಭಾಷೆಯಲ್ಲಿ ರಾಹುಲಗಾಂಧಿ ಅವರು 46 ದಿನಗಳ ಹಿಂದೆ ಹೇಳಿದ ಮಾತಿಗೆ ಸಂಬಂಧಿಸಿ ಪೊಲೀಸರು ದೆಹಲಿಯಲ್ಲಿರೋ ಅವರ ಮನೆಗೆ ಬಂದು ಸಾಕ್ಷಿ ಕೊಡಿ ಎಂದು ಕೇಳಿದ್ದಾರೆ. ಇಲ್ಲಿ ಗುತ್ತಿಗೆದಾರರು ಸಾಕ್ಷ್ಯ ಕೊಟ್ಟರೂ ತನಿಖೆ ಮಾಡುತ್ತಿಲ್ಲ. 40 ಪರ್ಸೆಂಟ್ ಅವರಿಗೆ 60 ಪರ್ಸೆಂಟ್ ನಿಮಗೆ, ಒಟ್ಟಾರೆ 100 ಪರ್ಸೆಂಟ್ ಕಮಿಷನ್. .100 ಕೆಲಸ ಇದ್ದರೆ .200 ಎಸ್ಟಿಮೇಟ್ ಮಾಡುತ್ತಾರೆ. ಮೊದಲು ಅದನ್ನು ತನಿಖೆ ಮಾಡಿ ಆ ಮೇಲೆ ರಾಹುಲ್ ಗಾಂಧಿ ಮನೆಗೆ ಬನ್ನಿ ಎಂದು ವ್ಯಂಗ್ಯವಾಡಿದರು.
ಬೆಳಗಾವಿಯಲ್ಲಿ ಯುವಕ್ರಾಂತಿ, ಯುವಜನತೆಗೆ ಪ್ರತ್ಯೇಕ ಯುವಪ್ರಣಾಳಿಕೆ: ಡಿಕೆಶಿ ಘೋಷಣೆ
ನಡ್ಡಾ ರಿಮೋಟ್ ಕಂಟ್ರೋಲ್(JP Nadda Remote Control) ಎಲ್ಲಿದೆ?: ಬೆಳಗಾವಿಗೆ ಇತ್ತೀಚೆಗೆ ಆಗಮಿಸಿದ್ದ ಪ್ರಧಾನಿ ಮೋದಿ(PM Narendra Modi) ಅವರು ನನ್ನ ಬಗ್ಗೆ ಮಾತನಾಡಿದ್ದಾರೆ. ಖರ್ಗೆ(Mallikarjun kharge) ಕಾಂಗ್ರೆಸ್ ಅಧ್ಯಕ್ಷರಾಗಿದ್ದರೂ ರಿಮೋಟ್ ಕಂಟ್ರೋಲ್ ಬೇರೆಯವರ ಬಳಿ ಇದೆ ಎಂದರು. ಹೌದು, ನನ್ನ ರಿಮೋಟ್ ಕಂಟ್ರೋಲ್ ಬೇರೆಯವರ ಬಳಿಯೇ ಇದೆ. ಆದರೆ, ನಿಮ್ಮ ಪಕ್ಷದ ಅಧ್ಯಕ್ಷ ನಡ್ಡಾ ರಿಮೋಟ್ ಕಂಟ್ರೋಲ್ ಎಲ್ಲಿದೆ ಎಂದು ಖರ್ಗೆ ವ್ಯಂಗ್ಯವಾಡಿದರು.
ಅದಾನಿ ಬಗ್ಗೆ ಮಾತನಾಡಿದ ನನ್ನ ಮತ್ತು ರಾಹುಲ್ ಗಾಂಧಿ(Rahul gandhi) ಭಾಷಣವನ್ನು ತೆಗೆದು ಹಾಕಿದರು. ನಮಗೆ ಸತ್ಯ ಹೇಳಲು ಬಿಡಲ್ಲ. ನೀವು ನೂರು ಸಾರಿ ಅಸತ್ಯ ಹೇಳುತ್ತೀರಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ ಖರ್ಗೆ, ಇದು ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣನ ಊರು. ಈ ಊರಿನಲ್ಲಿ ವೀರ ಶೂರರು ಇದ್ದಾರೆ. ನಿಮ್ಮ ಇಡಿ, ಸಿಬಿಐ ಮಣಿಸಲಾಗಲ್ಲ. ರಾಹುಲ್ ಗಾಂಧಿ ಎಂದೂ ಹೆದರಿಲ್ಲ, ಹೆದರುವುದೂ ಇಲ್ಲ ಎಂದರು.
ಕಾಂಗ್ರೆಸ್ ಗ್ಯಾರಂಟಿ- 4 'ಯುವನಿಧಿ' ಘೋಷಣೆ: ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ. ಭತ್ಯೆ
ನಮ್ಮನ್ನ ಮಣ್ಣಲ್ಲಿ ಹುಗಿಯಲು ಎಷ್ಟೇ ಪ್ರಯತ್ನಿಸಿ ನಾವು ಬೀಜ ಇದ್ದೀವಿ. ಮತ್ತೆ ಚಿಗುರುತ್ತೇವೆ ಎಂದು ಖರ್ಗೆ ಶಾಯರಿ ಮೂಲಕ ಪ್ರಧಾನಿ ಮೋದಿಗೆ ಟಾಂಗ್ ನೀಡಿದರು.
ನಾನು ಎಐಸಿಸಿ ಅಧ್ಯಕ್ಷ ಆದ ಮೇಲೆ ಮೊದಲ ಬಾರಿ ಬೆಳಗಾವಿಗೆ ಬಂದಿದ್ದೇನೆ. ಬೆಳಗಾವಿ ಕಾಂಗ್ರೆಸ್ ಪಕ್ಷಕ್ಕೆ ಪವಿತ್ರವಾದ ಭೂಮಿ. ಮಹಾತ್ಮ ಗಾಂಧಿ ಇದೇ ನೆಲದಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು. ಇಂದು ನೀವೆಲ್ಲರೂ ಸೇರಿ ಅದೇ ಭೂಮಿಯಲ್ಲಿ ನನಗೆ ಅದೇ ಸ್ಥಾನದಲ್ಲಿ ಕೂರಿಸಿದ್ದಕ್ಕೆ ಧನ್ಯವಾದಗಳು.
- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ