ಸುಳ್ಳು ಹೇಳೋದೇ ಚಾಳಿ ಮಾಡಿಕೊಂಡ ಪ್ರಧಾನಿ ಮೋದಿ: ಮಲ್ಲಿಕಾರ್ಜುನ ಖರ್ಗೆ ಟೀಕೆ
ಪ್ರಧಾನಿ ಮೋದಿ ಅಮೇರಿಕಾ ಪ್ರವಾಸವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಸುದ್ದಿಗರೊಂದಿಗೆ ಮಾತಾಡಿದ ಅವರು, ಮೋದಿ ಮತ್ತು ಟ್ರಂಪ್ ಸ್ನೇಹಿತರಾಗಿದ್ದರೆ ಫೋನ್ ನಲ್ಲೇ ದೇಶದ ಹಿತಾಸಕ್ತಿ ಕಾಪಾಡುವಲ್ಲಿ ದೇಶದ ವಲಸಿಗರನ್ನು ಸಾಮಾನ್ಯ ಗೂಡ್ಸ್, ಫ್ಲೈಟ್ ನಲ್ಲಿ ಕಳುಹಿಸಬೇಡಿ ಎಂದು ಹೇಳಬೇಕಿತ್ತು.

ಕಲಬುರಗಿ (ಫೆ.13): ಪ್ರಧಾನಿ ಮೋದಿ ಅಮೇರಿಕಾ ಪ್ರವಾಸವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಸುದ್ದಿಗರೊಂದಿಗೆ ಮಾತಾಡಿದ ಅವರು, ಮೋದಿ ಮತ್ತು ಟ್ರಂಪ್ ಸ್ನೇಹಿತರಾಗಿದ್ದರೆ ಫೋನ್ ನಲ್ಲೇ ದೇಶದ ಹಿತಾಸಕ್ತಿ ಕಾಪಾಡುವಲ್ಲಿ ದೇಶದ ವಲಸಿಗರನ್ನು ಸಾಮಾನ್ಯ ಗೂಡ್ಸ್, ಫ್ಲೈಟ್ ನಲ್ಲಿ ಕಳುಹಿಸಬೇಡಿ ಎಂದು ಹೇಳಬೇಕಿತ್ತು. ನಿಮ್ಮ ಸ್ವಂತ ಪ್ಯಾಸೆಂಜರ್ ಫ್ಲೈಟ್ ನಲ್ಲಿ ಕಳುಹಿಸಿ ಅನ್ನಬಹುದಿತ್ತು. ಅದ್ಯಾವುದು ಆಗಿಲ್ಲ ಗೂಡ್ಸ್ ವಿಮಾನದಲ್ಲಿ ಎಂದು ಮಲ್ಲಿಕಾರ್ಜುನ ಖರ್ಗೆ ಕುಟುಕಿದರು. ಟ್ರಂಪ್ ನನ್ನ ಆತ್ಮೀಯ ಸ್ನೇಹಿತ ಎನ್ನುತ್ತಿರುವ ಮೋದಿಯವರಿಗೆ ಮೊದಲು ಅಮೆರಿಕಾದ ಆಹ್ವಾನವಿರಲಿಲ್ಲ.
ಮೊದಲು ವಿದೇಶಾಂಗ ಸಚಿವ ಜೈಶಂಕರ ಹಾಗೂ ಇನ್ನಿತರರು ಹೋಗಿ ಬಂದರು. ಈಗ ಮೋದಿ ಹೋಗ್ತಿದ್ದಾರೆ. ಈ ಭೇಟಿ ಅದೆಷ್ಟು ಪ್ರಯೋಜನಕರಿಯೋ ಗೊತ್ತಿಲ್ಲ ಎಂದರು. ನಿಮ್ಮ ಸ್ನೇಹಿತ ನಮ್ಮ ಜನರನ್ನು ಗುಲಾಮರ ರೀತಿ ಉಪಚರಿಸುತ್ತಿರೋದು ಸರಿಯಲ್ಲ ಎಂದರು. ಮೊದಲು ಜೈಶಂಕರ ಇನ್ನಿತರರು ಹೋಗಿದ್ದಾರೆ, ಈಗ ಆಹ್ವಾನ ಬಂದ ಮೇಲೆ ಮೋದಿ ಹೋಗ್ತಿದ್ದಾರೆ. ಮೋದಿ ಮತ್ತು ಟ್ರಂಪ್ ಸ್ನೇಹಿತರಾಗಿದ್ದರೆ ಫೋನ್ ನಲ್ಲೇ ಹೇಳಬೇಕಿತ್ತು. ನಮ್ಮ ದೇಶದ ವಲಸಿಗರನ್ನು ಸಾಮಾನ್ಯ ಗೂಡ್ಸ್ ಫ್ಲೈಟನಲ್ಲಿ ಕಳುಹಿಸಬೇಡಿ. ನಿಮ್ಮ ಸ್ವಂತ ಪ್ಯಾಸೆಂಜರ್ ಫ್ಲೈಟ್‌ನಲ್ಲಿ ಕಳ್ಸಿ ಅನ್ನಬಹುದಿತ್ತು ಎಂದರು.
ಟ್ರಂಪ್ ಕ್ಲೋಸ್ ಇದ್ದಾನೆ, ಫ್ರೆಂಡ್ ಇದ್ದಾನೆ ಅಂತೆಲ್ಲಾ ಹೇಳಿಕೊಳ್ತೀರಿ. ಅವರು ನಿಮ್ಮ ಫ್ರೆಂಡ್ ಇರಬಹುದು. ನಮ್ಮ ದೇಶದ ಫ್ರೆಂಡ್ ಇರಬೇಕಲ್ವಾ ? ನಿಮ್ಮ ಫ್ರೆಂಡ್ ಇದ್ದವರು ಅದೇ ಕಾಳಜಿ ದೇಶದ ಬಗ್ಗೆ ವಹಿಸ್ತಾರೆ ಅಂತಲ್ಲ. ಮೋದಿ ಯಾವಾಗಲೂ ಸುಳ್ಳು ಹೇಳುವುದನ್ನೇ ಹ್ಯಾಬಿಟ್ ಮಾಡಿಕೊಂಡಿದ್ದಾರೆ ಎಂದರು. ಪ್ರಧಾನಿ ಮೋದಿ ಅಮೇರಿಕಾ ಪ್ರವಾಸದಿಂದ ಅಂತಹ ಫಲಿತಾಂಶ ಏನೂ ಬರೋದಿಲ್ಲ. ಆಮದು ಸುಂಕ ಹೆಚ್ಚಳ ಮಾಡುವ ಬೆದರಿಕೆ ಈಗಾಗಲೇ ಟ್ರಂಪ್ ಹಾಕಿದ್ದಾರೆ. ಆರಂಭದಲ್ಲೇ ಮೋದಿ ದೋಸ್ತ ಹೆದರಿಸ್ತಿದಾನೆ ಎಂದು ಲೇವಡಿ ಮಾಡಿದರು.
ರಾಮನಗರದಲ್ಲಿ ಹೈಟೆಕ್ ಉರ್ದು ಶಾಲೆ ನಿರ್ಮಾಣ: ಶಾಸಕ ಇಕ್ಬಾಲ್ ಹುಸೇನ್
ಟ್ರಂಪ್ ನಿಂದ ನಮ್ಮ ದೇಶಕ್ಕೆ ಹೇಗೆ ಒಳ್ಳೆಯದಾಗುತ್ತೆ ಅಂತ ನಂಬೋದು? ನಮ್ಮ ಇಂಜಿನಿಯರಗಳು, ಡಾಕ್ಟರ್ ಗಳನ್ನು ಯಾವಾಗ ಬೇಕೋ ಅವಾಗ ತಗೊಳ್ಳೋದು ನಂತರ ನಿರ್ಬಂಧ ಹಾಕೋದು ಸರಿನಾ? ಎಂದೂ ಪ್ರಶ್ನಿಸಿದರು. ಪ್ರಧಾನಿ ಮೋದಿ ಅಲ್ಲಿಗೆ ಯಾವ ವಿಷಯ ಮಾತನಾಡ್ತಾರೆ ನಮಗೆ ಗೊತ್ತಿಲ್ಲ. ಆದರೆ, ಹಿಂದುಸ್ತಾನ ದೇಶ ಎನ್ನುವುದು ಶಾಶ್ವತವಾಗಿ ಇರಲಿದೆ. ಅಮೆರಿಕಾ ಕೂಡಾ. ಆದರೆ, ವ್ಯಕ್ತಿ ಗಳು ಬರ್ತಾರೆ ಹೋಗ್ತಾರೆ, ಮೊದಲು ಟ್ರಂಪ್ ಬಂದು ಹೋದರು, ಈಗ ಬಂದಿದ್ದಾರೆ. ಮೋದಿ ಇಂದು ಇದ್ದಾರೆ, ನಾಳೆ ಇರುವುದಿಲ್ಲ, ಆದರೆ, ದೇಶ ಇರಲಿದೆ. ದೇಶದ ಹಿತದ ಬಗ್ಗೆ ವಿಚಾರ ಮಾಡಬೇಕು ಎಂದು ಸಲಹೆ ನೀಡಿದರು.